ನಮ್ಮ ಜರ್ನಿ
ನಿರಂತರ ವಿಕಸನವೇ ಪೀರಾಮಲ್ ಪಯಣದ ವೈಶಿಷ್ಟ್ಯತೆಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರ ಉತ್ತಮ ಪ್ರತಿಕ್ರಿಯೆಯನ್ನು ಉಳಿಸಿಕೊಂಡು ಹೋಗುವದರ ಜೊತೆಗೆ ಸುಸ್ಥಿರ ಮಾರುಕಟ್ಟಿ, ಮೌಲ್ಯವರ್ದಿತ ಹಣಕಾಸು ಸೇವೆಗಳ ಉದ್ಯಮಗಳ ನಿರ್ಮಾಣ, ಹೊಸ ಮಾರುಕಟ್ಟೆಗೆ ಅವಕಾಶಗಳನ್ನು ಕಲ್ಪಿಸುವುದನ್ನು ಗುರಿಯಾಗಿರಿಸಿಕೊಂಡಿದೆ. ಪ್ರಮುಖವಾಗಿ ಚಿಲ್ಲರೆ ಹೂಡಿಕೆದಾರರು ನಿಗದಿತ ಅವಧಿಯಲ್ಲಿ ನಿರೀಕ್ಷಿತ ಸಂಪಾದನೆ ಗಳಿಸಲು, ವ್ಯವಹಾರವನ್ನು ವಿಸ್ತಿರಿಸಕೊಳ್ಳಲು ಗ್ರೂಪ್ ನ ಹಣಕಾಸು ಸೇವೆಗಳು ಅವರ ಹಿತರಕ್ಷಕರಂತೆ ವಿಶ್ವಾಸಾರ್ಹತೆಯನ್ನು ಸುಭದ್ರಗೊಳಿಸುವುದನ್ನೇ ಗುರಿಯಾಗಿರಿಸಿಕೊಂಡು ಅಸ್ತಿತ್ವಕ್ಕೆ ಬಂದಿವೆ.

ಇದಲ್ಲದೆ, ಒಂದು ಕಾರ್ಯತಂತ್ರದ ನಿರ್ಧಾರದ ನಂತರ ಆಸ್ತಿ ಖರೀದಿಗೆ ಸಾಲ ನೀಡುವ ವ್ಯವಹಾರಕ್ಕೆ NBFC ನ ಅಡಿಪಾಯವನ್ನು ಹಾಕಿತು. ವಿಶ್ವಾಸಾರ್ಹ ವ್ಯವಹಾರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿತು. ನಂತರ, ಇದು ಉತ್ಪನ್ನ ಅಥವಾ ವಹಿವಾಟಿನ ಮೇಲೆ ಮತ್ತು ಡೆವಲಪರ್ ಕೌಂಟರ್‌ಪಾರ್ಟ್‌ನೊಂದಿಗಿನ ಸಂಬಂಧಕ್ಕೆ ಆದ್ಯತೆ ನೀಡುವ ವಿಶಿಷ್ಟವಾದ ಹಾಗೂ ವಿಭಿನ್ನ ಕಾರ್ಯತಂತ್ರವನ್ನು ರೂಪಿಸಲು.ವೇದಿಕೆಯನ್ನು ವಿಶ್ವಾಸಾರ್ಹ ವ್ಯವಹಾರ ಮತ್ತು NBFC ಯ ಏಕೀಕರಣದ ಮೂಲಕ ಮರುಸಂಘಟಿಸಲಾಯಿತು. ಕಂಪನಿಗಳ ಅಗತ್ಯತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಕಾರ್ಪೊರೇಟ್ ಫೈನಾನ್ಸ್ ಗ್ರೂಪ್ (ಇದು ಈಗಾಗಲೇ ಪೀರಾಮಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಅಡಿಯಲ್ಲಿ ಸ್ಟ್ರಕ್ಚರ್ಡ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಆಗಿ ಅಸ್ತಿತ್ವದಲ್ಲಿದೆ) ಎಂಬ ಪ್ರತ್ಯೇಕ ಲಂಬವನ್ನು ವೇದಿಕೆ ಸೇರಿಸಿತು. ಆದರೂ ಸಹ ವೇದಿಕೆಯ ವ್ಯಾಪ್ತಿನ್ನು ಇನ್ನಷ್ಟು ವಿಸ್ತಿರಿಸುವ ಗುರಿ ಹೊಂದಲಾಗಿದೆ. ಇತ್ತೀಚೆಗೆ, ವ್ಯಾಪಾರದ ಸಹಜ ವಿಸ್ತರಣೆ ಉದ್ದೇಶದಿಂದ ವಸತಿ ಸಾಲಗಳ ಮೂಲಕ ಚಿಲ್ಲರೆ ಹಣಕಾಸು ವಲಯವನ್ನು ಪ್ರವೇಶಿಸಿತು ಮತ್ತು ನಂತರ 2020 ರಲ್ಲಿ, ಅದರ ಸಾಲದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರಗೊಳಿಸಲು ವ್ಯಾಪಾರ ಸಾಲಗಳಿಗೆ ಪಾದಾರ್ಪಣೆ ಮಾಡಿತು.
  • 2018
  • 2017
  • 2016
  • 2015
  • 2014
  • 2013
  • 2012
  • 2010
  • 2005
ಸಂಯೋಜನೆ ಮೂಲಕ ಮಹತ್ತರ ಸಾಧನೆ
ಪಿರಮಿಲ್ ಹಣದ ವಿಲೀಕರಣದೊಂದಿಗೆ ಪೀರಾಮಲ್ ಫೈನಾನ್ಸ್ ಅಸ್ತಿತ್ವಕ್ಕೆ ಬಂದಿದ್ದು, ಸಗಟು ಮತ್ತು ಚಿಲ್ಲರೆ ಹಣಕಾಸು ವ್ಯವಹಾರಗಳ ವಿಲೀನ ಮೂಲಕ, ಎರಡೂ ವಲಯದ ಸಾಮರ್ಥ್ಯ, ಪರಿಣತಿ ಮತ್ತು ಅನುಕೂಲಗಳನ್ನು ಒಂದುಗೂಡಿಸಿದ ಏಕೈಕ ಸಂಯೋಜಿತ ಘಟಕದ ರಚನೆಗೊಂಡಿದೆ.