ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್

ಪಿರಮಲ್ ಫೈನಾನ್ಸ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ಹೋಮ್ ಲೋನ್‌ಗೆ ಅರ್ಹತೆ

ನೀವು ಗೃಹ ಸಾಲಕ್ಕಾಗಿ ಅರ್ಜಿ ಮಾಡಲು ಯೋಚಿಸುತ್ತಿರುವಿರೇ, ಆದರೆ ಸಾಲ ಪಡೆಯಲು ನಿಮ್ಮಲ್ಲಿ ಅರ್ಹತೆ ಇದೆಯೇ ಎಂಬ ಬಗ್ಗೆ ನಿಮಗೆ ಅನುಮಾನವಿದೆಯೇ? ಹಾಗಿದ್ದರೆ, ಆನ್‌ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಗೃಹ ಸಾಲದ ಅರ್ಹತೆಯನ್ನು ಪರಿಶೀಲಿಸುವ ರಗಳೆ-ರಹಿತ ಮಾರ್ಗ ಈಗ ಲಭ್ಯವಿದೆ. ನೀವು ಗೃಹ ಸಾಲಕ್ಕಾಗಿ ಅರ್ಹತೆ ಎಂಬುದನ್ನು ನಿರ್ಧರಿಸಲು ಸಾಲ ನೀಡುವ ಸಂಸ್ಥೆಗಳು ಹಲವಾರು ಸಂಗತಿಗಳನ್ನು ಪರಿಗಣಿಸುತ್ತಾರೆ.

ಪೀರಾಮಲ್ ಗೃಹ ಸಾಲ ಅರ್ಹತೆಯ ಕ್ಯಾಲ್ಕುಲೇಟರ್‌ನಲ್ಲಿ, ಸಾಲಕ್ಕಾಗಿ ಅರ್ಹತೆಯನ್ನು ಅರಿಯಲು ನೀವು ವಿಭಿನ್ನ ವಿವರಗಳನ್ನು ದಾಖಲು ಮಾಡಬೇಕಾಗುತ್ತದೆ. ಮನೆ ಖರೀದಿಸುವವರು ಗೃಹ ಸಾಲಕ್ಕಾಗಿ ಅರ್ಜಿ ಮಾಡಿದ ನಂತರ ಅರ್ಜಿಯು ತಿರಸ್ಕೃತವಾಗದಿರುವುದನ್ನು ಇದು ಖಚಿತಪಡಿಸುತ್ತದೆ.

20k10ಲಕ್ಷ
05 ಲಕ್ಷ
%
10.50%20%
ವರ್ಷ
5 ವ30 ವ
ನಿಮ್ಮ ಗೃಹ ಸಾಲದ ಅರ್ಹತೆ

ಅರ್ಹತೆಯ ತಖ್ತೆ ಅಥವಾ ಚಾರ್ಟ್

ಪ್ರಾಯ ಗರಿಷ್ಠ ಅವಧಿ
25 ವರ್ಷಗಳು30 ವರ್ಷಗಳು
30 ವರ್ಷಗಳು30 ವರ್ಷಗಳು
35 ವರ್ಷಗಳು30 ವರ್ಷಗಳು
40 ವರ್ಷಗಳು30 ವರ್ಷಗಳು
45 ವರ್ಷಗಳು25 ವರ್ಷಗಳು
50 ವರ್ಷಗಳು20 ವರ್ಷಗಳು

ಅಮೂರ್ತೀಕರಣ ತಖ್ತೆ

ಈ ಕೆಳಗಿನ ಗೃಹ ಸಾಲ ಅಮೂರ್ತೀಕರಣ ಅನುಸೂಚಿಯನ್ನು ಪರಿಶೀಲಿಸಿರಿ :

ವರ್ಷ ಸಾಲದ ಬಾಕಿ ಇರುವ ಮೊತ್ತ ಬಡ್ಡಿಯ ಮೊಬಲಗು ಮೂಲ ಮೊಬಲಗು ಕಂತು
2022
₹ 5,181,170.00
₹ 66,908.58
₹ 43,176.42
₹ 110,085.00
2023
₹ 5,114,261.42
₹ 847,750.56
₹ 473,269.44
₹ 1,321,020.00
2024
₹ 4,266,510.86
₹ 936,521.11
₹ 384,498.89
₹ 1,321,020.00
2025
₹ 3,329,989.75
₹ 1,034,587.12
₹ 286,432.88
₹ 1,321,020.00
2026
₹ 2,295,402.63
₹1,142,921.90
₹ 178,098.10
₹ 1,321,020.00
2027
₹ 1,152,480.73
₹ 1,152,515.47
₹ 58,419.53
₹ 1,210,935.00

ಗೃಹ ಸಾಲ ಅರ್ಹತೆ ಅಂದರೇನು?

ಗೃಹ ಸಾಲ ಅರ್ಹತೆ ಎಂಬುದನ್ನು ಈ ರೀತಿಯಲ್ಲಿ ವಿವರಿಸಬಹುದು - ಇದು ಸಾಲ ನೀಡುವವರು ಕೆಲವೊಂದು ಮಾನದಂಡಗಳನ್ನು ಅವಲಂಬಿಸಿ ಅರ್ಜಿದಾರರ ಸಾಲ ಮರುಪಾವತಿಯ ಕ್ಷಮತೆಯನ್ನು ನಿರ್ಧರಿಸಲು ಬಳಸುವ ಕ್ರಮವಾಗಿದೆ. ಮುಂದಾಗಿ ನಿರ್ಧರಿಸಲಾಗಿರುವ ಅವಧಿಯಲ್ಲಿ ಸಾಲದ ಮೊಬಲಗನ್ನು ಮರು ಪಾವತಿ ಮಾಡುವಲ್ಲಿ ನೀವು ಸಫಲರಾಗುವಿರಿ ಎಂಬುದನ್ನು ಖಚಿತಪಡಿಸಲು ಆರ್ಥಿಕ ಸಂಸ್ಧೆಗಳು ಗೃಹ ಸಾಲ ಅರ್ಹತೆಯನ್ನು ಪರಿಶೀಲಿಸುತ್ತಾರೆ.

ಗೃಹ ಸಾಲ ಅರ್ಹತೆಯ ಮಾನದಂಡಗಳು

ಪೀರಾಮಲ್ ಫೈನಾನ್ಸ್‌‌ನಲ್ಲಿ ಗೃಹ ಸಾಲ ಅರ್ಹತೆಯ ಮಾನದಂಡಗಳು ಈ ಕೆಳಗಿನಂತಿವೆ :

 • ಅರ್ಹರಾಗಲು ಅರ್ಜಿದಾರರು ಸ್ವ-ಉದ್ಯೋಗಿಯಾಗಿರಬೇಕು ಅಥವಾ ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರದ ಉದ್ಯಮದಲ್ಲಿ ಅಥವಾ ಎಮ್‌ಎನ್‌ಸಿಯಲ್ಲಿ ನೌಕರಿ ಮಾಡುತ್ತಿರಬೇಕು.
 • ಸ್ವ-ಉದ್ಯೋಗಿ ಅರ್ಜಿದಾರರಿಗಾಗಿ ಗೃಹ ಸಾಲಕ್ಕಾಗಿ ಪ್ರಾಯದ ಮಿತಿ 23ರಿಂದ 70 ವರ್ಷಗಳು.
 • ವೇತನ ಪಡೆಯುವ ವ್ಯಕ್ತಿಗಳಿಗಾಗಿ ಪ್ರಾಯದ ಮಿತಿ 21ರಿಂದ 62 ವರ್ಷಗಳು. ಸರಕಾರಿ ನೌಕರರೆಂದಾದರೆ, ಗರಿಷ್ಠ ಪ್ರಾಯದ ಮಿತಿ 70 ವರ್ಷಗಳು.
 • ಪೀರಾಮಲ್ ಫೈನಾನ್ಸ್‌‌ನಲ್ಲಿ ಗೃಹ ಸಾಲಕ್ಕಾಗಿ ಸಿಬಿಲ್ ಸ್ಕೋರ್ 750 ಇದ್ದರೆ ಉತ್ತಮವಾಗಿರುತ್ತದೆ.

ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಅರ್ಹತೆಯನ್ನು ಹೇಗೆ ಪರಿಶೀಲಿಸುವಿರಿ?

ಅಡವಿನ ಅರ್ಹತೆಯ ಪರಿಶೀಲನೆಗಾಗಿ ನೀವು ಪೀರಾಮಲ್ ಫೈನಾನ್ಸ್‌‌ನ ಗೃಹ ಸಾಲ ಅರ್ಹತೆಯ ಕ್ಯಾಲ್ಕುಲೇಟರ್‌ನ್ನು ಬಳಸಿಕೊಳ್ಳಬಹುದು. ಅರ್ಹತೆಯನ್ನು ನಿರ್ಧರಿಸಲು ನೀವು ಉದ್ಯೋಗ, ಪ್ರಾಯ, ಆದಾಯ ಇತ್ಯಾದಿ ಇನ್ನೂ ಕೆಲವು ಮಾಹಿತಿಯನ್ನು ದಾಖಲು ಮಾಡಬೇಕಾಗುತ್ತದೆ. ನೀವು ಪಡೆಯಬಹುದಾದ ಸಾಲದ ಮೊತ್ತವನ್ನು ನಿಮ್ಮ ಅರ್ಹತೆ ನಿರ್ಧರಿಸುತ್ತದೆ.

ಗೃಹ ಸಾಲ ಅರ್ಹತೆಯನ್ನು ಹೇಗೆ ಲೆಕ್ಕ ಮಾಡಲಾಗುತ್ತದೆ?

ಗೃಹ ಸಾಲ ಅರ್ಹತೆಯ ಲೆಕ್ಕಾಚಾರವನ್ನು ಮುಖ್ಯವಾಗಿ ಅರ್ಜಿದಾರರ ವಾರ್ಷಿಕ ಆದಾಯದ ವಿಶ್ಲೇಷಣೆಯ ನಂತರ ಮಾಡಲಾಗುತ್ತದೆ. ಆನಂತರ, ಅರ್ಜಿದಾರರ ಪ್ರಾಯ, ಸಾಲದ ಇತಿಹಾಸ, ಸಾಲದ ಅಂಕ ಮತ್ತು ಆರ್ಥಿಕ ಸ್ಥಿತಿ ಇತ್ಯಾದಿಗಳನ್ನು ಪರಿಗಣಿಸಲಾಗುತ್ತದೆ.

ಗೃಹ ಸಾಲದ ಅರ್ಹತೆಯ ಮೇಲೆ ಪ್ರಭಾವ ಬೀರಬಲ್ಲ ಕಾರಣಗಳು

“ನಾನೆಷ್ಟು ಸಾಲವನ್ನು ಪಡೆಯಬಹುದು” ಎಂಬ ಪ್ರಶ್ನೆಗೆ ಉತ್ತರ ಈ ಕೆಳಗಿನ ಸಂಗತಿಗಳನ್ನು ಅವಲಂಬಿಸುತ್ತದೆ :

ಸ್ವ-ಉದ್ಯೋಗಿಗಳು

ಡಾಕ್ಟರ್, ಆರ್ಕಿಟೆಕ್ಟ್‌ ಇತ್ಯಾದಿ ಸ್ವ-ಉದ್ಯೋಗಿ ವೃತ್ತಿಪರರು ಕೂಡ ಗೃಹ ಸಾಲಕ್ಕಾಗಿ ಅರ್ಜಿ ಮಾಡಬಹುದು. ಸ್ವ-ಉದ್ಯೋಗಿ ವೃತ್ತಿಪರರು ಗೃಹ ಸಾಲಕ್ಕಾಗಿ ಅರ್ಹರಾಗಲು ಪ್ರಾಯದ ಮಿತಿಯು 23 ವರ್ಷಗಳಿಂದ 70 ವರ್ಷಗಳ ವರೆಗೆ ಇರುತ್ತದೆ.

ಆದಾಯ

ಅರ್ಜಿದಾರರ ವಿಷಯದಲ್ಲಿ, ಅವರು ಎಲ್ಲಿ ವಾಸಿಸುತ್ತಾರೆ ಎಂಬುದನ್ನು ಅವಲಂಬಿಸಿ, ಪೀರಾಮಲ್ ಫೈನಾನ್ಸ್‌ ಅರ್ಜಿದಾರರಿಗಾಗಿ ನಿರ್ದಿಷ್ಟವಾದ ಮಾಸಿಕ ನಿವ್ವಳ ಆದಾಯವನ್ನು ಸ್ಥಾಪಿಸಿದೆ. ಗೃಹ ಸಾಲ ಅರ್ಹತೆಯ ಕ್ಕಾಲ್ಕುಲೇಟರ್ ಬಳಸುವಾಗ, ನಿಮ್ಮ ಅರ್ಜಿಯು ಮಾನ್ಯವಾಗುವುದೇ ಎಂದು ಪರಿಶೀಲಿಸಲು ನೀವು ನಿಮ್ಮ ನಿವ್ವಳ ವಾರ್ಷಿಕ ಆದಾಯವನ್ನು ದಾಖಲು ಮಾಡಬೇಕಾಗುತ್ತದೆ.

ಸ್ವತಂತ್ರ ವೃತ್ತಿಪರರು

ವ್ಯಾಪಾರದ ಮಾಲಿಕರು, ಭಾಗೀದಾರ ಸಂಸ್ಥೆಗಳ ಭಾಗೀದಾರರು ಮತ್ತು ಮಾಲಿಕರು, ಇತ್ಯಾದಿ ಸ್ವತಂತ್ರ ವೃತ್ತಿಪರರು ಕೂಡ ಪೀರಾಮಲ್ ಫೈನಾನ್ಸ್‌‌ನಿಂದ ಗೃಹ ಸಾಲ ಪಡೆಯಬಹುದು. ಸ್ವತಂತ್ರ ವೃತ್ತಿಪರರು ಗೃಹ ಸಾಲಕ್ಕಾಗಿ ಅರ್ಹರಾಗಲು ಪ್ರಾಯದ ಮಿತಿಯು 23 ವರ್ಷಗಳಿಂದ 70 ವರ್ಷಗಳ ವರೆಗೆ ಇರುತ್ತದೆ.

ಸಾಲದ ಅವಧಿ

ನೀವು ಆರಿಸುವ ಸಾಲದ ಅವಧಿಯು ನಿಮ್ಮ ಗೃಹ ಸಾಲ ಅರ್ಹತೆಯ ಮೊತ್ತದ ಮೇಲೆ ಭಾರೀ ಪ್ರಭಾವ ಬೀರುತ್ತದೆ. ನೀವು ಹೆಚ್ಚು ದೀರ್ಘವಾದ ಸಾಲದ ಅವಧಿಯನ್ನು ಆರಿಸಿದಾಗ ನಿಮ್ಮ ಮಾಸಿಕ ಕಂತು ಕಡಿಮೆಯಾಗುತ್ತದೆ. ಗೃಹ ಸಾಲ ಅರ್ಹತೆಯ ಕ್ಯಾಲ್ಕುಲೇಟರ್‌ನಲ್ಲಿ ನೀವು ಸಾಲದ ದೀರ್ಘ ಅವಧಿಯನ್ನು ದಾಖಲು ಮಾಡಿದಾಗ ಸಾಲ ಮಂಜೂರಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ, ಏಕೆಂದರೆ ಕಂತುಗಳು ಹೆಚ್ಚು ಕೈಗೆಟಕುವಂತಿರುತ್ತವೆ.

ಪ್ರಾಯದ ಮಿತಿ

ವೇತನ ಪಡೆಯುತ್ತಿರುವ ಅಥವಾ ವೃತ್ತಿಪರರಾಗಿ ಕೆಲಸ ಮಾಡುತ್ತಿರುವ ಅರ್ಜಿದಾರರು ಇನ್ನೆಷ್ಟು ವರ್ಷಗಳ ವರೆಗೆ ಕೆಲಸ ಮಾಡಬಲ್ಲರು ಎಂಬುದನ್ನು ಅರಿಯಲು ಬ್ಯಾಂಕ್‌ಗಳು ಬಯಸುತ್ತವೆ. ನೀವು ಗೃಹ ಸಾಲವನ್ನು ನಿಮ್ಮ ನಿವೃತ್ತಿಗಿಂತ ತುಂಬಾ ವರ್ಷ ಮೊದಲೇ ಪಡೆಯುತ್ತಿದ್ದರೆ ಅದು ಮಂಜೂರಾಗುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ನಿಮ್ಮ ಉದ್ಯೋಗದಲ್ಲಿ ಆರಂಭದ ಹಂತದಲ್ಲಿದ್ದರೆ ಇತರ ಅರ್ಜಿದಾರರ ತುಲನೆಯಲ್ಲಿ ನೀವು ಖಂಡಿತವಾಗಿಯೂ ಸಾಲಕ್ಕಾಗಿ ಹೆಚ್ಚು ಅರ್ಹರಾಗುತ್ತೀರಿ.

ಬಾಕಿ ಇರುವ ಸಾಲ(ಗಳು)

ಗೃಹ ಸಾಲಕ್ಕಾಗಿ ಅರ್ಹತೆಯನ್ನು ಪರಿಶೀಲಿಸುವಾಗ ನೀವು ಹೊಂದಿರಬಹುದಾದ ಇತರ ಸಾಲಗಳು ಮತ್ತು ಋಣಗಳಿಂದಾಗಿ ದುಷ್ಪರಿಣಾಮವಾಗಲಾರದು. ಆದರೆ ಹಲವಾರು ತೀರಿಸದೇ ಇದ್ದ ಸಾಲಗಳಿದ್ದರೆ ಸಮಸ್ಯೆ ಉಂಟಾಗಬಹುದು. ಕಂತುಗಳನ್ನು ತಾರೀಖಿಗೆ ಸರಿಯಾಗಿ ಕಟ್ಟದೇ ಇರುವುದು ಮತ್ತು ಶಿಸ್ತುಬದ್ಧವಲ್ಲದ ಸಾಲದ ಇತಿಹಾಸವು ಸಾಲ ಮಂಜೂರಾತಿಯಲ್ಲಿ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ.

ಸಿಬಿಲ್ ಸ್ಕೋರ್ ವರದಿ

ನಿಮ್ಮ ಸಾಲದ ಇತಿಹಾಸವನ್ನು ನಿರ್ವಹಿಸುವಲ್ಲಿ ನೀವೆಷ್ಟು ಉತ್ತಮರೆಂಬುದನ್ನು ನಿಮ್ಮ ಸಿಬಿಲ್ ಸ್ಕೋರ್ ವರದಿ ತೋರಿಸುತ್ತದೆ. ನಿಮ್ಮ ಸಿಬಿಲ್ ಅಂಕ, ನಿಮ್ಮ ಸಾಲ ಮರುಪಾವತಿಯ ಇತಿಹಾಸ, ಕ್ರೆಡಿಟ್ ಕಾರ್ಡ್‌ಗಳ ಬಾಕಿ ಮತ್ತು ಈಗಾಗಲೇ ಇರುವ ಸಾಲಗಳಂಥ ಸಂಗತಿಗಳನ್ನು ಅವಲಂಬಿಸುತ್ತದೆ. ಸಾಮಾನ್ಯವಾಗಿ ಗೃಹ ಸಾಲಕ್ಕಾಗಿ ಅರ್ಹತೆಯ ಸಾಲ ಅಂಕ 300ರಿಂದ 900ರೊಳಗೆ 750 ಇರಬೇಕಾಗುತ್ತದೆ. ಸಿಬಿಲ್ ಸ್ಕೋರ್‌ನ್ನು ಪರಿಶೀಲಿಸುವ ಉದ್ದೇಶವೇ ನಿಮ್ಮ ಸಾಲ ಮರುಪಾವತಿಯ ಕ್ಷಮತೆ ಮತ್ತು ಆರ್ಥಿಕ ಸ್ಥಾನ-ಮಾನವನ್ನು ವಿಶ್ಲೇಷಿಸುವುದಾಗಿದೆ.

ಬಡ್ಡಿಯ ದರ

ಫಿಕ್ಸ್‌ಡ್ ರೇಟ್, ಫ್ಲೋಟಿಂಗ್ ರೇಟ್ ಅಥವಾ ಮಿಕ್ಸ್‌ ಇಂಟರೆಸ್ಟ್‌ ರೇಟ್ ಎಂಬ ಆಯ್ಕೆಗಳು ಲಭ್ಯವಿರುತ್ತವೆ. ಫ್ಲೋಟಿಂಗ್ ಬಡ್ಡಿಯ ದರವು ಭಾರತೀಯ ರಿಜರ್ವ್ ಬ್ಯಾಂಕ್‌ನ (RBI) ಪ್ರತಿಸ್ಪಂಧನೆಯ ಅನುಸಾರ ಹೆಚ್ಚು-ಕಡಿಮೆ ಆಗುತ್ತಲಿರುತ್ತದೆ. ಆರ್‌ಬಿಐ ಮಾರ್ಗದರ್ಶನಗಳ ಫಲಿತಾಂಶದ ಅನುಸಾರ ಇತ್ತೀಚಿನ ಬಡ್ಡಿಯ ದರಗಳು ಕಡಿಮೆಯಾಗಿದ್ದಲ್ಲಿ ನಿಮ್ಮ ಕಂತುಗಳ ಮೊಬಲಗು ಕೂಡ ಕಡಿಮೆಯಾಗುತ್ತದೆ ಮತ್ತು ಅದೇ ರೀತಿ ತದ್ವಿರುದ್ಧವೂ ಆಗಬಹುದು. ಫಿಕ್ಸ್‌ಡ್ ದರವೆಂದಾದಲ್ಲಿ ಅದು ಸಾಲದ ಅವಧಿಯುದ್ದಕ್ಕೂ ಒಂದೇ ಸಮಾನವಾಗಿರುತ್ತದೆ. ಮಿಶ್ರ ಬಡ್ಡಿಯ ದರದ ಸಾಲಗಳಲ್ಲಿ ಒಂದು ನಿಗದಿತ ಸಮಯದ ವರೆಗೆ ಆರಂಭದಲ್ಲಿ ಫಿಕ್ಸ್‌‌ಡ್ ಆಗಿದ್ದು ನಂತರ ಫ್ಲೋಟಿಂಗ್ ದರಕ್ಕೆ ಬದಲಾಗುತ್ತದೆ.

ಎಲ್‌ಟಿವಿ ಮತ್ತು ಆಸ್ತಿಯ ಮೌಲ್ಯ

ಸಾಲ ನೀಡುವವರು, ನೀವು ಸಾಲದ ಹಣದಿಂದ ಪಡೆಯುತ್ತಿರುವ ಆಸ್ತಿಯನ್ನೂ ಪರಿಗಣಿಸುತ್ತಾರೆ. ನಿಮ್ಮ ಕನಸಿನ ಮನೆಯ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದರೆ, ನೀವು ಹೆಚ್ಚಿನ ಮೊಲ್ಯದ ಸಾಲ ಪಡೆಯುವಿರಿ ಮತ್ತು ಅದೇ ರೀತಿ ಕಡಿಮೆಯಾಗಿದ್ದರೆ ತದ್ವಿರುದ್ಧವಾಗುತ್ತದೆ. ಆದ್ದರಿಂದ, ನೀವು ಸರಿಯಾದ ಮೌಲ್ಯವನ್ನು ಆರಿಸಿಕೊಂಡು ನಿಮ್ಮ ಮೊಬಲಗನ್ನು ಸಾಕಷ್ಟು ಹೆಚ್ಚಿಸಿಕೊಳ್ಳಬಹುದು.

ಬ್ಯಾಂಕ್‌ಗಳು ನೀವು ನೀಡುತ್ತಿರುವ ಡೌನ್ ಪೇಮೆಂಟ್ ಮತ್ತು ನಿಮಗೆ ಬೇಕಾಗಿರುವ ಸಾಲದ ಮೊಬಲಗನ್ನೂ ಪರಿಶೀಲಿಸುತ್ತವೆ. ಡೌನ್ ಪೇಮೆಂಟ್‌ಗಾಗಿ ನಿಮ್ಮಲ್ಲಿ 20% ಆದರೂ ಮೂಲಧನ ಮೊಬಲಗು ಇದ್ದರೆ ಗೃಹ ಸಾಲ ಪಡೆಯುವುದು ಸುಲಭವಾಗುತ್ತದೆ. ನಿಮಗೆ ಹೆಚ್ಚಿನ ಸಾಲ ಬೇಕಾದಲ್ಲಿ ನೀವು ಸಾಮಾನ್ಯವಾಗಿ ಹೆಚ್ಚಿನ ದರದಲ್ಲಿ ಬಡ್ಡಿ ನೀಡಬೇಕಾಗುತ್ತದೆ.

ವೇತನ ಪಡೆಯುತ್ತಿರುವ ವ್ಯಕ್ತಿಗಳು

ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ವೇತನ ಪಡೆಯುತ್ತಿರುವ ವ್ಯಕ್ತಿಗಳು ಗೃಹ ಸಾಲಕ್ಕಾಗಿ ಅರ್ಹರಾಗಿರುತ್ತಾರೆ. ಸರಕಾರಿ ಸಂಸ್ಥೆಗಳಲ್ಲಿ, ಎಮ್‌ಎನ್‌ಸಿಗಳಲ್ಲಿ, ಮಾಲಿಕತ್ವದ ಅಥವಾ ಭಾಗೀರಾದ ಕಂಪೆನಿಗಳಲ್ಲಿ ಕೆಲಸ ಮಾಡುವವರು ಕೂಡ ಅರ್ಹರಾಗುತ್ತಾರೆ. ಇಷ್ಟಲ್ಲದೆ, ಎನ್‌ಜಿಒಗಳಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುವವರೂ ಅರ್ಹರಾಗುತ್ತಾಾರೆ.

ಗೃಹ ಸಾಲಕ್ಕಾಗಿ ಅರ್ಹತೆಯ ಕನಿಷ್ಠ ಪ್ರಾಯ 21 ವರ್ಷಗಳು ಮತ್ತು ಗರಿಷ್ಠ ಪ್ರಾಯ 61 ವರ್ಷಗಳಾಗಿವೆ. ಆದರೆ, ಸರಕಾರಿ ವೃತ್ತಿಪರರಿಗೆ ಪೆನ್ಶನ್ ಬರುತ್ತಿರುವ ಕಾರಣ ಪ್ರಾಯದ ಮಿತಿಯು 70 ವರ್ಷಗಳ ವರೆಗೆ ಇರುತ್ತದೆ. ಅಂದರೆ ವ್ಯಕ್ತಿಗೆ ಸಂಪಾದನೆ ಇರುವ ವರೆಗೆ ಅವರು ಗೃಹ ಸಾಲ ಪಡೆಯುವುದು ಸಾಧ್ಯವಿದೆ.

ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸುವ ಬಗೆ ಹೇಗೆ?

ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಲು ನೀವು ಬಯಸುತ್ತಿದ್ದರೆ, ಈ ಕೆಳಗಿನ ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು:

 • ಉತ್ತಮ ಸಾಲದ ಅಂಕವಿರುವ ಅಹ-ಅರ್ಜಿದಾರರನ್ನು ಆರಿಸಿಕೊಳ್ಳಿ.
 • 750ಕ್ಕೆ ಮೀರಿದ ಸಿಬಿಲ್ ಸ್ಕೋರ್ ಉಳಿಸಿಕೊಳ್ಳಿ.
 • ನಿಮ್ಮ ಋಣಗಳನ್ನು ಯಾವಾಗಲೂ ಸಮಯಕ್ಕೆ ಸರಿಯಾಗಿ ಮರುಪಾವತಿಸಿರಿ.
 • ನಿಮ್ಮ ಅತಿರಿಕ್ತ ಆದಾಯ ಮೂಲಗಳಿದ್ದರೆ ಅವನ್ನು ಘೋಷಿಸಿರಿ.
 • ಗೃಹ ಸಾಲ ಮರುಪಾವತಿಗಾಗಿ ದೀರ್ಘ ಕಾಲಾವಧಿಯನ್ನು ಆರಿಸಿಕೊಳ್ಳಿ.
 • ಆದಾಯ ನಿಗದಿತ ದಾಯಿತ್ವಗಳ ಅನುಪಾತವನ್ನು 40%ಕ್ಕೂ ಕಡಿಮೆ ಇರಿಸಿರಿ.
 • ಡೌನ್ ಪೇಮೆಂಟ್‌ನ ರೂಪದಲ್ಲಿ ಹೆಚ್ಚು ಹಣ ನೀಡಿರಿ.

ಆಗಾಗ ಕೇಳಿಬರುವ ಪ್ರಶ್ನೆಗಳು

ಗೃಹ ಸಾಲ ಪಡೆಯಬೇಕಾದರೆ ಕನಿಷ್ಠ ವೇತನ ಎಷ್ಟಿರಬೇಕು?
piramal faqs

ನನ್ನ ವೇತನಕ್ಕೆ ತಕ್ಕಂತೆ ನನಗೆಷ್ಟು ಗೃಹ ಸಾಲ ದೊರಕಬಹುದು?
piramal faqs

ಗೃಹ ಸಾಲ ಅರ್ಹತೆಯ ಕ್ಯಾಲ್ಕುಲೇಟರ್ ಬಳಸಿದರೆ ಲಾಭವಿದೆಯೇ?
piramal faqs

ಬ್ಯಾಂಕ್‌ನಿಂದ ನಾನು ಎಷ್ಟು ಗೃಹ ಸಾಲವನ್ನು ಪಡೆಯಬಹುದು?
piramal faqs

ಗೃಹ ಸಾಲ ಅರ್ಹತೆಗಾಗಿ ಬೇಕಾಗುವ ದಾಖಲೆಗಳು ಯಾವುವು?
piramal faqs

ಗೃಹ ಸಾಲದ ಅರ್ಹತೆಯಲ್ಲಿ ಸಹ-ಅರ್ಜಿದಾರರ ಪಾತ್ರವೇನು?
piramal faqs

ಗೃಹ ಸಾಲ ಸಬ್ಸಿಡಿಗಾಗಿ ಅರ್ಹತೆಯ ಮಾನದಂಡಗಳೇನು?
piramal faqs

ಈಗಾಗಲೇ ಇರುವ ನನ್ನ ಸಾಲಕ್ಕೆ ಅತಿರಿಕ್ತವಾಗಿ ನಾನು ಟಾಪ್-ಅಪ್ ಸಾಲವನ್ನು ಪಡೆಯಬಹುದೇ?
piramal faqs

ನಿರ್ಮಾಣ ಹಂತದಲ್ಲಿರುವ ಆಸ್ತಿಗಾಗಿ ನಾನು ಸಾಲ ಪಡೆಯಬಹುದೇ?
piramal faqs

ಜಂಟಿ ಗೃಹಸಾಲಕ್ಕಾಗಿ ಯಾರು ಅರ್ಹರಾಗುತ್ತಾರೆ?
piramal faqs

ನನ್ನ ಮಕ್ಕಳು ನನ್ನ ಗೃಹ ಸಾಲಕ್ಕಾಗಿ ಸಹ-ಅರ್ಜಿದಾರರಾಗಬಹುದೇ?
piramal faqs

ಗೃಹ ಸಾಲ ಪಡೆದಾಗ ನಾನು ತೆರಿಗೆ ಲಾಭಗಳಿಗೆ ಅರ್ಹನಾಗುವೆನೇ?
piramal faqs

ನನ್ನ ಸಾಲದ ಅಂಕ ಕೆಟ್ಟದಿದ್ದರೆ ನಾನು ಗೃಹ ಸಾಲಕ್ಕೆ ಅರ್ಹನಾಗುವೆನೇ?
piramal faqs

ನಿರ್ಮಾಣ ಹಂತದಲ್ಲಿರುವ ಆಸ್ತಿಗಾಗಿ ಸಾಲ ವಿತರಣೆಯ ಪದ್ದತಿ ಹೇಗಿರುತ್ತದೆ?
piramal faqs

ಗೃಹ ಸಾಲಕ್ಕಾಗಿ ಅರ್ಜಿ ಮಾಡಿದಾಗ ಯಾವ ಭದ್ರತೆಯನ್ನು ಒದಗಿಸಬೇಕಾಗುತ್ತದೆ?
piramal faqs

ಹೊಸ ಆಸ್ತಿ ಖರೀದಿಸಲಿಕ್ಕಾಗಿ ನಾನು ನನ್ನ ಸದ್ಯದ ಸಾಲ ಖಾತೆಯ ಮೂಲಕ ಹೆಚ್ಚಿನ ಸಾಲ ಪಡೆಯಬಹುದೇ?
piramal faqs