ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್

ಪಿರಮಲ್ ಫೈನಾನ್ಸ್ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ಹೋಮ್ ಲೋನ್‌ನಲ್ಲಿ EMI ಅನ್ನು ನಿರ್ಧರಿಸಿ

ನೀವು Home Loan ಪಡೆಯಲು ಬಯಸುತ್ತಿರುವಿರಿ ಮತ್ತು ಕಂತು ಎಷ್ಟು ಕಟ್ಟಬೇಕಾಗುತ್ತದೆ ಎಂದು ನಿಮಗೆ ತಿಳಿದಿಲ್ಲವೇ? ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್ ನೀವು ಎಲ್ಲಿಂದ ಸಾಲ ಪಡೆಯುತ್ತಿರುವಿರೋ ಅವರಿಗೆ ತಿಂಗಳ ಕಂತಿನ ರೂಪದಲ್ಲಿ ಎಷ್ಟು ಹಣ ನೀಡಬೇಕಾಗುತ್ತದೆ ಎಂಬುದನ್ನು ತಿಳಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ನೀವು ನಿಮ್ಮ ಕನಸಿನ ಮನೆಯನ್ನು ಖರೀದಿಸುವಾಗ ಚತುರ ನಿರ್ಧಾರ ತಳೆಯುವುದನ್ನು ನಮ್ಮ ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್ ಖಚಿತಪಡಿಸುತ್ತದೆ.

ನಮ್ಮ ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್ ನಿಮ್ಮ ಮಾಸಿಕ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಪೀರಾಮಲ್ ಫೈನಾನ್ಸ್‌‌ನ ಮೇಲೆ ವಿಶ್ವಾಸವಿರಿಸುವ ಮೂಲಕ ನೀವು ಹಿತಕರ ಗೃಹ ಸಾಲವನ್ನು ಕಡಿಮೆ ಬಡ್ಡಿ-ದರದಲ್ಲಿ ಮತ್ತು ಸುದೀರ್ಘ ಮರುಪಾವತಿಯ ಕಾಲಾವಧಿಯೊಂದಿಗೆ ಪಡೆಯಬಹುದು. ನಮ್ಮ Home Loan Interest Rate ಬಳಸಿಕೊಂಡು ಮೂಲ ರಾಶಿಯ ಮೇಲೆ ಎಷ್ಟು ಬಡ್ಡಿಯು ಒಟ್ಟುಗೂಡುತ್ತಿದೆ ಎಂಬುದನ್ನು ನೀವೇ ಕಂಡುಕೊಳ್ಳಬಹುದು.

5 ಲಕ್ಷ5 ಕೋಟಿ
ವರ್ಷ
5 ವ30 ವ
%
10.50%20%
ನಿಮ್ಮ ವ್ಯಾಪಾರ ಸಾಲದ ಕಂತು
ಮೂಲ ಮೊಬಲಗು
ರೂ0
ಬಡ್ಡಿಯ ಮೊಬಲಗು
ರೂ0
Disclaimer
Results generated by the calculator is indicative in nature. Piramal Capital Housing Finance Limited (“PCHFL”) does not guarantee accuracy, commitment, undertaking, completeness, or correct sequence of any the details provided therein and therefore no reliance should be placed by the user for any purpose whatsoever on the information contained / data generated herein or on its completeness/accuracy.

The calculator is only a tool that assists the users to arrive at results of various illustrative scenarios generated from the data input by the users. The user should exercise due care and caution (including if necessary, obtaining of advise of tax/legal/accounting/financial/other professionals) prior to taking of any decision, acting, or omitting to act, on the basis of the information contained/data generated herein.

PCHFL does not undertake any liability or responsibility to update any data. No claim (whether in contract, tort (including negligence) or otherwise) shall arise out of or in connection with the services against PCHFL. Neither PCHFL nor any of its agents or licensors or group companies shall be liable to user/any third party, for any direct, indirect, Incidental, special, or consequential loss or damages (including, without limitation for loss of profit, business opportunity or loss of goodwill) whatsoever, whether in contract, tort, misrepresentation or otherwise arising from the use of these tools/information contained/data generated herein.
Read more

ಕಂತಿನ ಲೆಕ್ಕಾಚಾರ ಅಥವಾ ಚಾರ್ಟ್

ಮೂಲ ಮೊತ್ತ ಅವಧಿ ಬಡ್ಡಿಯ ದರ ಕಂತು
₹ 10 ಲಕ್ಷ
10 ವರ್ಷ
11%*
₹ 13,775
₹ 25 ಲಕ್ಷ
10 ವರ್ಷ
11%*
₹ 34,438
₹ 50 ಲಕ್ಷ
20 ವರ್ಷ
11%*
₹ 51,609
₹ 50 ಲಕ್ಷ
25 ವರ್ಷ
11%*
₹ 49,006
₹ 75 ಲಕ್ಷ
25 ವರ್ಷ
11%*
₹ 73,508

ಗೃಹ ಸಾಲದ ಕಂತು ಎಂದರೇನು?

ಕಂತು ಅಥವಾ ಇಎಮ್‌ಐ ಅಂದರೆ ಇಕ್ವೇಟೆಡ್ ಮಂಥ್ಲಿ ಇನ್‌ಸ್ಟಾಲ್‌ಮೆಂಟ್. ಇದು ಪ್ರತಿ ತಿಂಗಳೂ ನೀವು ಸಂದಾಯ ಮಾಡಬೇಕಾಗುವ ಮೊತ್ತವಾಗಿದೆ. ನಿಮ್ಮ ಗೃಹ ಸಾಲದ ಬಾಕಿ ಇರುವ ಮೊಬಲಗಿಗೆ ಬಡ್ಡಿಯನ್ನು ಸೇರಿಸಿ ನೀವು ಗೃಹ ಸಾಲದ ಕಂತನ್ನು ಲೆಕ್ಕ ಮಾಡಬಹುದು. ಕಂತನ್ನು ಕಡಿಮೆ ಮಾಡಲು ನೀವು ಇಚ್ಛಿಸುತ್ತಿದ್ದರೆ, ಮರುಪಾವತಿಯ ಕಾಲಾವಧಿಯನ್ನು ಹೆಚ್ಚಿಸಿಕೊಳ್ಳಿರಿ. ಪೀರಾಮಲ್ ಫೈನಾನ್ಸ್‌ನಿಂದ ನೀವು ಪಡೆಯಬಹುದಾದ ಗರಿಷ್ಠ ಮರುಪಾವತಿಯ ಸಮಯ 25 ವರ್ಷಗಳು.

ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಕ್ಯಾಲ್ಕುಲೇಟರ್ ಹೇಗೆ ಬಳಸುವಿರಿ?

ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಕ್ಯಾಲ್ಕುಲೇಟರ್ ಬಳಸುವುದು ತುಂಬಾ ಸುಲಭ. ಗೃಹ ಸಾಲ ಕಂತು ಎಷ್ಟೆಂದು ಅರಿಯಲು ನೀವು ಈ ಕೆಳಗಿನ ಮಾಹಿತಿಯನ್ನು ದಾಖಲು ಮಾಡಬೇಕಾಗುತ್ತದೆ :

  • ಸಾಲದ ಮೊತ್ತ :ನೀವು ಪಡೆಯಲು ಬಯಸುತ್ತಿರುವ ಸಾಲದ ಮೊತ್ತವನ್ನು ಸೂಚಿಸಿರಿ
  • ಅವಧಿ :ಸಾಲವನ್ನು ಮರುಪಾವತಿ ಮಾಡಲು ನಿಮಗೆ ಬೇಕಾಗುವ ಕಾಲಾವಧಿಯನ್ನು ಸೂಚಿಸಿರಿ. ನೆನಪಿರಲಿ, ನೀವೆಷ್ಟು ದೀರ್ಘ ಅವಧಿಯನ್ನು ಬಯಸುವಿರೋ ನಿಮ್ಮ ಸಾಲದ ಅರ್ಹತೆ ಅಷ್ಟೇ ಹೆಚ್ಚಾಗುತ್ತದೆ.
  • ಬಡ್ಡಿಯ ದರ : ಸಾಲ ನೀಡುವವರು ಹೇರುತ್ತಿರುವ ಬಡ್ಡಿಯ ದರವನ್ನು ಸೂಚಿಸಿರಿ.

ನಿಮ್ಮ ಕನಸಿನ ಮನೆಯನ್ನು ಖರೀದಿಸುವಾಗ ಸರಿಯಾಗಿ ಯೋಜಿಸಲು ಕಂತಿನ ಲೆಕ್ಕಾಚಾರ ಹೇಗೆ ಸಹಾಯ ಮಾಡುತ್ತದೆ?

ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಮರುಪಾವತಿಯ ಕ್ಯಾಲ್ಕುಲೇಟರ್ ನಿಮಗೆ ಸಾಲ ನೀಡುವವರಿಗೆ ಪ್ರತಿ ತಿಂಗಳೂ ನೀವು ಎಷ್ಟು ಹಣ ಸಂದಾಯ ಮಾಡಬೇಕಾಗುತ್ತದೆ ಎಂಬುದರ ಸ್ಪಷ್ಟ ಚಿತ್ರ ನಿಮ್ಮೆದುರು ಇರಿಸುತ್ತದೆ. ಇದರಿಂದಾಗಿ ನಿಮ್ಮ ಮಾಸಿಕ ಆದಾಯದಿಂದ ಗೃಹ ಸಾಲಕ್ಕಾಗಿ ಎಷ್ಟು ಹೋಗುತ್ತದೆ ಎಂಬುದರ ಬಗ್ಗೆ ನಿಮಗೆ ಮೊದಲಿಂದಲೇ ತಿಳಿದಿರುವ ಖಾತರಿ ಇರುತ್ತದೆ.

ಫಲಸ್ವರೂಪವಾಗಿ, ನೀವು ನಿಮ್ಮ ಆರ್ಥಿಕತೆಯನ್ನು ಚೆನ್ನಾಗಿ ಯೋಜಿಸಿ ಕಂತಿನ ಪಾವತಿಯನ್ನು ತಪ್ಪದೇ ಮಾಡುವುದನ್ನು ಖಚಿತಪಡಿಸಬಹುದು. ನೆನಪಿರಲಿ, ಕಂತುಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟದೇ ಇದ್ದಲ್ಲಿ ಬವಿಷ್ಯದಲ್ಲಿ ನಿಮಗೆ ಬೇರೇನಾದರೂ ಭದ್ರತಾ ಸಾಲ ಬೇಕಾದಲ್ಲಿ ಕಷ್ಟವಾಗಬಹುದು. ಆದ್ದರಿಂದ ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್ ನಿಮ್ಮ ಮನೆ ಖರೀದಿಸುವ ಪಯಣವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್‌ನ ವೈಶಿಷ್ಟ್ಯಗಳು ಮತ್ತು ಲಾಭಗಳು

ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್‌ನ ವೈಶಿಷ್ಟ್ಯಗಳು ಮತ್ತು ಲಾಭಗಳು ಈ ಕೆಳಗಿನಂತಿವೆ :

ಸಮಯ ಉಳಿಸಿರಿ

ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್‌ನಲ್ಲಿ ನೀವು ಸರಿಯಾದ ವಿವರಗಳನ್ನು ದಾಖಲು ಮಾಡಿದ ತಕ್ಷಣವೇ ಫಲಿತಾಂಶ ನಿಮಗೆ ದೊರಕುತ್ತದೆ. ಅದೇ ಕೈಗಳಿಂದ ಲೆಕ್ಕ ಮಾಡಲು ತುಂಬಾ ಸಮಯ ಬೇಕಾಗುತ್ತದೆ.

ನಿಖರವಾದ ಫಲಿತಾಂಶ

ಗೃಹ ಸಾಲದ ಕಂತನ್ನು ಕೈಗಳಿಂದ ಲೆಕ್ಕ ಮಾಡುವಾಗ ತಪ್ಪಾಗುವ ಸಾಧ್ಯತೆ ಇದೆ. ಆದರೆ ನೀವು ದಾಖಲು ಮಾಡಿದ ಎಲ್ಲಾ ಮಾಹಿತಿ ಸರಿಯಾಗಿದ್ದರೆ, ನಮ್ಮ ಸಾಧನ ಯಾವಾಗಲೂ ಅತ್ಯಂತ ನಿಖರವಾದ ಫಲಿತಾಂಶ ನೀಡುತ್ತದೆ.

ವೈಯಕ್ತಿಕ ಮಾಹಿತಿ ನೀಡುವ ಅವಶ್ಯಕತೆ ಇಲ್ಲ :

ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್ ಬಳಸುವಾಗ ನೀವು ನಿಮ್ಮ ಹೆಸರು ಮತ್ತು ಸಂಪರ್ಕದ ಮಾಹಿತಿಯಂಥ ಯಾವುದೇ ವೈಯಕ್ತಿಕ ವಿವರಗಳನ್ನು ನೀಡುವ ಅಗತ್ಯವಿಲ್ಲ. ಆದ್ದರಿಂದ, ಇದು ಗೃಹ ಸಾಲ ಕಂತುಗಳು ಎಷ್ಟುಂದು ಲೆಕ್ಕ ಮಾಡುವ ಅತ್ಯಂತ ಸುರಕ್ಷಿತ ಉಪಾಯವಾಗಿದೆ.

ಇದನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬಳಸಿರಿ

ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಕ್ಯಾಲ್ಕುಲೇಟರ್‌ನ ಅತ್ಯುತ್ತಮ ಸಂಗತಿ ಎಂದರೆ, ಇದನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬಳಸಬಹುದು. ಕಂತಿನ ಕ್ಯಾಲ್ಕುಲೇಟರನ್ನು ನೀವು ಎಷ್ಟು ಬಾರಿ ಬೇಕಾದರೂ ಬಳಸಬಹುದು, ಪೂರ್ತಿ ಉಚಿತವಾಗಿ. ಆದ್ದರಿಂದ ಸಾಲ ನೀಡುವ ಬೇರೆ ಬೇರೆ ಸಂಸ್ಥೆಗಳ ಗೃಹ ಸಾಲಗಳಿಂದ ನಿಮಗೆ ಯಾವುದು ಅನುಕೂಲಕರವೆಂಬುದನ್ನು ಅರಿಯುವಲ್ಲಿ ಇದು ಸಹಾಯಕವಾಗುತ್ತದೆ.

ಸುಲಭದಲ್ಲಿ ಲೆಕ್ಕ ಮಾಡಬಹುದು

ಗೃಹ ಸಾಲ ಕಂತುಗಳ ಲೆಕ್ಕ ಮಾಡುವುದು ಅದೊಂದು ಜಟಿಲ ಪ್ರಕ್ರಿಯೆ, ಆದರೆ ಇದು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ಕೈಗೊಳ್ಳಬೇಕಾದ ಒಂದು ಅತ್ಯಗತ್ಯವಾದ ಹೆಜ್ಜೆ. ಗೃಹ ಸಾಲ ಕಂತಿನ ಕ್ಯಾಲ್ಕುಲೇಟರ್ ಕೈಗಳಿಂದ ಲೆಕ್ಕ ಮಾಡುವ ಪ್ರಕ್ರಿಯೆಯನ್ನು ತೊಲಗಿಸಿ ಜೀವನವನ್ನು ಸುಗಮಗೊಳಿಸುತ್ತದೆ. ನೀವು ಸರಿಯಾದ ವಿವರಗಳನ್ನು ದಾಖಲು ಮಾಡಿದರಷ್ಟೇ ಸಾಕು, ಈ ಸಾಧನವು ಬಾಕಿ ಕೆಲಸವನ್ನು ನಿಮಗಾಗಿ ತಾನೇ ಮಾಡುತ್ತದೆ.

ಕಂತಿನ ಲೆಕ್ಕಾಚಾರದ ಸೂತ್ರ

ಗೃಹ ಸಾಲ ಕಂತಿನ ಲೆಕ್ಕದ ಸೂತ್ರ ಈ ಕೆಳಗಿನಂತಿದೆ :


P x R x (1+R)^N / [(1+R)^N-1]


ಇಲ್ಲಿ,

P = ಮೂಲ ಸಾಲದ ಮೊತ್ತ ಅಥವಾ ನೀವು ಪಡೆದಿರುವ ಸಾಲದ ಮೊತ್ತ

R = ಸಾಲ ನೀಡುವವರು ಹೇರುವ ಮಾಸಿಕ ಬಡ್ಡಿಯ ದರ

N = ಸಾಲದ ಅವಧಿ ತಿಂಗಳುಗಳಲ್ಲಿ

ನಿಮ್ಮ ಗೃಹ ಸಾಲದ ಮೇಲಿನ ಬಡ್ಡಿಯ ದರವನ್ನು ಮಾಸಿಕ-ಆಧಾರದಲ್ಲಿ ಲೆಕ್ಕ ಮಾಡಲಾಗುತ್ತದೆ. ಆದ್ದರಿಂದ,

R = ವಾರ್ಷಿಕ ಬಡ್ಡಿಯ ದರ/12/100

ಒಂದು ವೇಳೆ ವಾರ್ಷಿಕ ದರ 10% ಎಂದಾದಲ್ಲಿ, ಆಗ R = 11/ 12/ 100 = 0.009

ಕಂತಿನ ಲೆಕ್ಕಾಚಾರದ ಉದಾಹರಣೆ

ಉದಾಹರಣೆಗೆ, ನೀವು 11% ವಾರ್ಷಿಕ ಬಡ್ಡಿಯಲ್ಲಿ ಕಂತಿನಲ್ಲಿ 30 ಲಕ್ಷದ ಸಾಲಕ್ಕಾಗಿ ಅರ್ಜಿ ಮಾಡುತ್ತಿದ್ದು, 240 ತಿಂಗಳ (20 ವರ್ಷ) ಸಾಲದ ಅವಧಿಯನ್ನು ಬಯಸುತ್ತೀರೆಂದು ಪರಿಗಣಿಸೋಣ. ಈ ಸಂದರ್ಭದಲ್ಲಿ, ಸೂತ್ರವನ್ನು ಬಳಸಿ ನೀವು ಕಂತನ್ನು ಈ ರೀತಿ ಲೆಕ್ಕ ಮಾಡುವಿರಿ :


ಕಂತು = ₹ 30,00,000 * 0.009 * (1 + 0.009) 240 / [(1 + 0.009) 240 - 1) = ₹30,966


ಕಾಗದ-ಪೆನ್ ತೆಗೆದುಕೊಂಡು ಕೈಗಳಿಂದ ಕಂತನ್ನು ಲೆಕ್ಕ ಮಾಡುವುದು ತುಂಬಾ ಕಷ್ಟದ ಕೆಲಸ. ಅಷ್ಟಲ್ಲದೆ, ಕೈಗಳಿಂದ ಲೆಕ್ಕ ಮಾಡುವಾಗ ತಪ್ಪುು ಜರಗುವುದೂ ಸಾಧ್ಯವಿದೆ. ಆದ್ದರಿಂದಲೇ ಗೃಹ ಸಾಲದ ಕಂತು ಎಷ್ಟೆಂದು ಹೇಗೆ ಲೆಕ್ಕ ಮಾಡಲಿ ಎಂದು ನೀವು ಚಿಂತಿಸಿದಾಗಲೆಲ್ಲಾ, ಪೀರಾಮಲ್ ಫೈನಾನ್ಸ್‌ ಗೃಹ ಸಾಲ ಕಂತುಗಳ ಕ್ಯಾಲ್ಕುಲೇಟರ್ ನಿಮ್ಮ ಸಹಾಯಕ್ಕೊದಗುತ್ತದೆ.

ಆಗಾಗ ಕೇಳಿಬರುವ ಪ್ರಶ್ನೆಗಳು

ಇಎಮ್‌ಐ ಎಂದರೇನು?
piramal faqs

ಗೃಹ ಸಾಲಕ್ಕಾಗಿ ಕಂತಿನ ಕ್ಯಾಲ್ಕುಲೇಟರ್ ಉಪಯೋಗಿಸುವುದರಿಂದ ಲಾಭಗಳೇನು?
piramal faqs

ಆಂಶಿಕ-ಪಾವತಿಯಿಂದ ನಿಮ್ಮ ಕಂತಿನ ಮೇಲೆ ಯಾವ ರೀತಿಯ ಪ್ರಭಾವವಾಗುತ್ತದೆ?
piramal faqs

ನಿಮ್ಮ ಗೃಹ ಸಾಲದ ಮರುಪಾವತಿ ಹೇಗೆ ಕೆಲಸ ಮಾಡುತ್ತದೆ?
piramal faqs

ಗೃಹ ಸಾಲಕ್ಕಾಗಿ ಅರ್ಜಿ ಮಾಡಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ?
piramal faqs

ಗೃಹ ಸಾಲ ಅಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
piramal faqs

ನಾನು ಪಡೆಯಬಹುದಾದ ಗರಿಷ್ಠ ಗೃಹ ಸಾಲದ ಮೊಬಲಗು ಎಷ್ಟು?
piramal faqs

ನನ್ನ ಗೃಹ ಸಾಲದ ಕಂತಿನ ಮೊತ್ತವನ್ನು ನಾನು ಹೇಗೆ ಕಡಿಮೆ ಮಾಡಿಕೊಳ್ಳಬಹುದು?
piramal faqs

ಗೃಹ ಸಾಲ ಕಂತುಗಳನ್ನು ಸಂದಾಯ ಮಾಡುತ್ತಿರುವುದರಿಂದ ತೆರಿಗೆ ಲಾಭಗಳೇನಿವೆ?
piramal faqs

ಗೃಹ ಸಾಲವನ್ನು ಹೇಗೆ ಮರು ಪಾವತಿ ಮಾಡುವಿರಿ?
piramal faqs

ಸಾಲದ ಮೊಬಲಗಿನ ಅಂದಾಜು ಪತ್ರವನ್ನು ನಾನು ಹೇಗೆ ಪಡೆಯಲಿ?
piramal faqs

ಸಂಪೂರ್ಣ ಮೊತ್ತಕ್ಕಾಗಿ ನಾನು ಗೃಹ ಸಾಲ ಪಡೆಯುವುದುಸಾಧ್ಯವೇ?
piramal faqs