Dream Mobile

ಪ್ಯಾನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಹೇಗೆ ಲಿಂಕ್ ಮಾಡುವುದು

Planning
19-12-2023
blog-Preview-Image

ಭಾರತದಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳು ಸಾಮಾನ್ಯ ಗುರುತಿನ ಪುರಾವೆಗಳಾಗಿವೆ. ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ನಾಗರಿಕರು ತಮ್ಮ ಆಧಾರ್, ಪ್ಯಾನ್, LPG ಸಂಪರ್ಕ ಮತ್ತು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಬೇಕು. ಇದು ನಾಗರಿಕರ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ಇಡಲು ಸರ್ಕಾರಕ್ಕೆ ಸಹಾಯವಾಗುತ್ತದೆ ಮತ್ತು ತೆರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. 

ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಸರಳವಾದ ಪ್ರಕ್ರಿಯೆಯಾಗಿದೆ. ನಿಮ್ಮ ಮನೆಯಿಂದಲೇ ನೀವು ಆನ್ ಲೈನ್ ನಲ್ಲಿ ಲಿಂಕ್ ಮಾಡಬಹುದು. ಈ ಲೇಖನವು ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಹಂತಗಳನ್ನು ವಿವರಿಸುತ್ತದೆ. 

ಆಧಾರ್ ಮತ್ತು ಪ್ಯಾನ್ ಎಂದರೇನು?

ಆಧಾರ್ ಕಾರ್ಡ್ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ನೀಡಲಾಗುವ ವಿಶಿಷ್ಟ ಗುರುತಿನ ದಾಖಲೆಯಾಗಿದೆ. ಇದರಲ್ಲಿ ವಯಸ್ಸು, ಲಿಂಗ ಮತ್ತು ವೃತ್ತಿ ತಾರತಮ್ಯವಿಲ್ಲ. ಸಂಪರ್ಕ ವಿವರಗಳು ಮತ್ತು ಬಯೋಮೆಟ್ರಿಕ್ ಮಾಹಿತಿಯೊಂದಿಗೆ 12 ವಿಶಿಷ್ಟ ಅಂಕಿಗಳನ್ನು ಒಳಗೊಂಡಿದೆ. 

ಆದಾಯ ತೆರಿಗೆ ಇಲಾಖೆಯು ಭಾರತದ ನಾಗರಿಕರಿಗೆ ಪ್ಯಾನ್ ಕಾರ್ಡ್ ಗಳನ್ನು ಮಂಜೂರು ಮಾಡುತ್ತದೆ. ಪ್ಯಾನ್ ಕಾರ್ಡ್ ಹತ್ತು-ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಒಳಗೊಂಡಿದೆ. ಪ್ರತಿಯೊಬ್ಬ ತೆರಿಗೆದಾರರು ಸರ್ಕಾರದಿಂದ ನೀಡಲಾದ ಪ್ಯಾನ್ ಕಾರ್ಡ್ ಹೊಂದಿರಬೇಕು. 

ಪ್ಯಾನ್ ಕಾರ್ಡ್ ದೊಂದಿಗೆ ಆಧಾರ್ ಹೇಗೆ ಲಿಂಕ್ ಮಾಡುವುದು? 

ಭಾರತ ಸರ್ಕಾರವು ಆಧಾರ್ ಮತ್ತು ಪ್ಯಾನ್ ಲಿಂಕ್ ದಿನಾಂಕಗಳನ್ನು ಡಿಸೆಂಬರ್ 31, 2023 ರವರೆಗೆ ವಿಸ್ತಿರಿಸಿದೆ. ರೂ.1000 ದಂಡವಿಲ್ಲದೇ ಲಿಂಕ್ ಮಾಡುವುದಕ್ಕೆ ಮಾರ್ಚ್ 31, 2022 ಕೊನೆಯ ದಿನಾಂಕವಾಗಿದೆ.

ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು. ಅಧಿಕೃತ ಆದಾಯ ತೆರಿಗೆ ಪೋರ್ಟಲ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು. ಇದಲ್ಲದೇ ನೀವು ಆಫ್ ಲೈನ್ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ನಮೂದಿಸಲಾದ ದಾಖಲೆಗಳನ್ನು ಸಲ್ಲಿಸಬಹುದು. 

ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ದಾಖಲೆಗಳು

  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್ 

ಈ ಕೆಳಗಿನ ಹಂತಗಳನ್ನು ಅನುಸರಿಸುವುದರೊಂದಿಗೆ ಆನ್ ಲೈನ್ ಮೂಲಕ ನೀವು ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡಬಹುದು. 

ಹಂತ 1: ಲೀಟ್ಲ ಹೆಡ್ (500) ಮತ್ತು ಮೇಜರ್ ಹೆಡ್ (0021) ಅಡಿ NSDL ಮೇಲೆ ರೂ. 1000 ಶುಲ್ಕವನ್ನು ಪಾವತಿಸಿ 

  1. ನೀವು ಆದಾಯ ತೆರಿಗೆ ಪಾವತಿ ಪೇಜ್ ಗೆ ಭೇಟಿ ನೀಡಬಹುದು ಮತ್ತು TDS-ಏತರ ವಿಭಾಗದ ಅಡಿಯಲ್ಲಿ ಚಲನ್ ನಂ. ITNS 280 ಆಯ್ಕೆ ಮಾಡಬಹುದು. 
  1. ಮುಂದಿನ ಪೇಜ್ ನಲ್ಲಿ ನೀವು (0021) ಮತ್ತು (500) ಆಯ್ಕೆ ಮಾಡಬಹುದು. 
  1. FY 2023–24 ಗಾಗಿ ವಿಳಾಸ, ಸಂಪರ್ಕ ಮತ್ತು ಪ್ಯಾನ್ ಕಾರ್ಡ್ ವಿವರಳಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ. 
  1. ಶುಲ್ಕಳ ಪಾವತಿ ರೀತಿಯನ್ನೀಗ ಆಯ್ಕೆ ಮಾಡಿ. 

 ಹಂತ 2: 2023-2024ಕ್ಕಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ವಿನಂತಿಗಳನ್ನು ಸಂಗ್ರಸಿ. 

ಪೇಜ್ ಅನುಸರಿಸಿ, ಪ್ಯಾನ್ ಮತ್ತು ಆಧಾರ್ ಲಿಂಕ್ ಗಾಗಿ ಅಂತಿಮ ಅರ್ಜಿಯನ್ನು ಸಲ್ಲಿಸಲು ಪಾವತಿ ಮಾಡಿ. ಅವುಗಳನ್ನು ನವೀಕರಿಸಲು ಮತ್ತು ಲಿಂಕ್ ಮಾಡಲು ಸಾಮಾನ್ಯವಾಗಿ 4-5 ದಿನಗಳನ್ನು ತೆಗೆದುಕೊಳ್ಳುತ್ತದೆ. 

ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇನ್ನೂ ಮೂರು ವಿಧಾನಗಳಿವೆ. 

ವಿಧಾನ 1: ನೀವು SMS ಮೂಲಕ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು. 

ವಿಧಾನ 2: ನಿಮ್ಮ ಅಕೌಂಟ್ ನಲ್ಲಿ ಲಾಗಿಂಗ್ ಆಗುವ ಮೂಲಕ ನೀವು ಲಿಂಕ್ ಮಾಡಬಹುದು

ವಿಧಾನ 3: ನಿಮ್ಮ ಖಾತೆಯಲ್ಲಿ ಲಾಗಿಂಗ್ ಆಗದೆಯೇ ನೀವು ಲಿಂಕ್ ಆಗಬಹುದು. 

ನೀವು ಆಧಾರ್ ಮತ್ತು ಪ್ಯಾನ್ ಲಿಂಕ್ ವಿಧಾನಗಳ ಪ್ರತಿ ಹಂತವನ್ನು ಪರೀಕ್ಷಿಸಬಹುದು. ನೀವು ಜಾಣತನದಿಂದ ಆಯ್ಕೆ ಮಾಡಬಹುದು. 

ವಿಧಾನ 1: SMS ಮೂಲಕ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ನೀವು ಲಿಂಕ್ ಮಾಡಬಹುದು. 

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567678 and 56161 ಗೆ SMS ಕಳುಹಿಸಿ. SMS ಗೆ ಕಳುಹಿಸಿ.

UIDPAN<ಸ್ಪೇಸ್ ><12 ಅಂಕಿಗಳ ಆಧಾರ್ ><ಸ್ಪೇಸ್ ><10Fಡಿಜಿಟ್ ಪ್ಯಾನ್>

ಉದಾಹರಣೆಗಾಗಿ, UIDPAN 123456789123 HMRP1234L

ವಿಧಾನ 2: ನಿಮ್ಮ ಖಾತೆಯಲ್ಲಿ ಲಾಗಿಂಗ್ ಆಗುವ ಮೂಲಕ ನೀವು ಲಿಂಕ್ ಮಾಡಬಹುದು. 

ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನೀವು ನೋಂದಣಿ ಮಾಡಿಸಿರದಿದ್ದರೆ ಮಾಡಿರಿ. 

ಹಂತ 2: ಪೋರ್ಟಲ್ ದಲ್ಲಿ ಲಾಗ್ ಆಗಲು ನಿಮ್ಮ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಭರ್ತಿಮಾಡಿ. 

ಹಂತ 3: ಮೈ ಪ್ರೊಫೈಲ್ ಗೆ ಹೋಗಿ ಮತ್ತು "Personal Details" ಆಯ್ಕೆಗಳ ಅಡಿಯಲ್ಲಿ "Link Aadhaar" ಆಯ್ಕೆಮಾಡಿ

ಹಂತ 4: ಇ-ಫಾರ್ಮ ನಲ್ಲಿ ಕೇಳಲಾದ ಹೆಸರು, ಲಿಂಗ, DOB ಯಂತಹ ಮತ್ತು ಇತರ ಎಲ್ಲ ವಿವರಗಳನ್ನು ನಮೂದಿಸಿ. 

ಮುಂದುವರಿಯಲು ನಿಮ್ಮ ಒಪ್ಪಿಗೆಯನ್ನು ನೀಡಿ ಮತ್ತು ಲಿಂಕ್ ಆಧಾರ್ ಬಟನ್ ಒತ್ತಿರಿ. 

ಹಂತ 5: ಅರ್ಜಿಯನ್ನು ಅಂಗೀಕರಿಸಲು ನಿಮಗೆ ಮಾಹಿತಿ ನೀಡುವ ಪಾಪ್-ಅಪ್ ಸಂದೇಶಗಳನ್ನು ಸ್ಕ್ರೀನ್ ತೋರಿಸುವುದು. 

ವಿಧಾನ 3: ಖಾತೆಯಲ್ಲಿ ಲಾಗಿಂಗ್ ಆಗದೇ ನೀವು ಲಿಂಕ್ ಮಾಡಬಹುದು. 

ಹಂತ 1: www.incometax.gov.in ಗೆ ಭೇಟಿ ನೀಡಿ. ಸ್ಕ್ರೀನ್ ತಳಭಾಗದಿಂದ "Our Services"ಟ್ಯಾಬ್ ಆಯ್ಕೆಮಾಡಿ. 

ಹಂತ 2: ಪೇಜ್ ನಲ್ಲಿ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ ಮತ್ತು ಮುಂದುವರಿಕೆ ಮೇಲೆ ಕ್ಲಿಕ್ ಮಾಡಿ. 

ಇ-ಪೈಲಿಂಗ್ ಪೋರ್ಟ್ಲಲ್ ನಲ್ಲಿ ಪಾವತಿ ಸಂದೇಶವನ್ನು ಪೇಜ್ ತೋರಿಸುತ್ತದೆ. "Continue" ಮತ್ತು "Link Aadhaar” ಕ್ಲಿಕ್ ಮಾಡುವ ಮೂಲಕ ನೀವು ಪರಿಶೀಲನೆಮಾಡಿ. 

ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಗಳನ್ನು ಯಶಸ್ವಿಯಾಗಿ ನೀವು ಲಿಂಕ್ ಮಾಡಿದ್ದೀರಿ. 

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಸ್ಥಿತಿಯನ್ನು ಪರೀಕ್ಷಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ಆದಾಯ ತೆರಿಗೆ ಇಲಾಖೆಯ ಫೈಲಿಂಗ್ ಪೋರ್ಟಲ್ ಗೆ ಭೇಟಿ ನೀಡಿ. 

ಹಂತ 2: ಹೋಮ್ ಪೇಜ್ ಮೇಲೆ 'Quick Links" ಗೆ ಹೋಗಿ ಮತ್ತು "Link Aadhaar Status” ಆಯ್ಕೆ ಮಾಡಿ. 

ಹಂತ 3: ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ನಮೂದಿಸಿ.

ಹಂತ 4: "View Link Aadhaar Status" ಕ್ಲಿಕ್ ಮಾಡಿ ಮತ್ತು ಸ್ಥಿತಿಯನ್ನು ತಿಳಿಯಿರಿ. 

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಸ್ಥಿತಿಯನ್ನು ವೆಬ್ ಸೈಟ್ ನಿಮಗೆ ತೋರಿಸುತ್ತದೆ. 

ಕಾರ್ಡ್ ಗಳನ್ನು ಲಿಂಕ್ ಮಾಡಿದ ನಂತರ ನೀವು ಐಟಿ ರಿಟರ್ನ್ ಅರ್ಜಿಯನ್ನು ಭರ್ತಿ ಮಾಡಬಹುದು. ಕಾರ್ಡ್ ಗಳು ಲಿಂಕ್ ಆಗದಿದ್ದರೆ ಸ್ಕ್ರೀನ್ ಕೆಳಗಡೆ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. 

ಈಗ, ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಜೊತೆ ಲಿಂಕ್ ಆಗದಿದ್ದರೆ, ನೀವು ಈ ಕೆಳಗಿನ ಹಂತಗಳನ್ನು ಪರೀಕ್ಷಿಸಬಹುದು. 

ಮೊಬೈಲ್ ಸಂಖ್ಯೆಯೊಂದಿಗೆ ಹೇಗೆ ಆಧಾರ್ ಲಿಂಕ್ ಮಾಡುವುದು? 

ನಿಮ್ಮ ಮೊಬೈಲ್ ಆಪರೇಟರ್ ಭೇಟಿ ಮಾಡದೇ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವ ಮಾರ್ಗಗಳು ಈ ಕೆಳಗಿನಂತಿವೆ. 

ಹೊಸ ಸಿಮ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಬಹುದು. 

ಹೊಸ ಸಿಮ್ ಪಡೆಯಲು ಮತ್ತು ತಮ್ಮ ಆಧಾರ್ ಲಿಂಕ್ ಮಾಡಲು ಬಯಸುವವರು ಸಮಿಪದ ಮೊಬೈಲ್ ಆಪರೇಟರ್ ಗೆ ಭೇಟಿ ಮಾಡಬಹುದು. ಕೆಳಗಿನ ಹಂತಗಳನ್ನು ಅನುಸರಿಬಹುದು.

  • ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಮತ್ತು ಎಲೆಕ್ಟ್ರಿಕ್ ಬಿಲ್ ಒದಗಿಸಿ ಸಿಮ್ ಕಾರ್ಡ್ ಕೊಂಡುಕೊಳ್ಳಿ.
  • ನಿಮ್ಮ ಆಧಾರ್ ಪರಿಶೀಲಿಸಲು ಬಯೋಮೆಟ್ರಿಕ್ ಸ್ಕ್ಯಾನ್ ಪೂರ್ಣಗೊಳಿಸಿ.
  • ಪರಿಶೀಲನೆ ನಂತರ ನೀವು ನಿಮ್ಮ ಹೊಸ ಸಿಮ್ ಪಡೆಯಬಹುದು; ಒಂದು ಗಂಟೆಯಲ್ಲಿ ಅದು ಸಕ್ರಿಯಗೊಳ್ಳುತ್ತದೆ. 

OTP ಬಳಸಿ ಆನ್ ಲೈನ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೀವು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬಹು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ. 

  • ನಿಮ್ಮ ಫೋನ್ ನಿಂದ ಟೆಲಿಕಾಮ್ ಆಪರೇಟರ್ ಪೋರ್ಟಲ್ ವೆಬ್ ಸೈಟ್ ಗೆ ಹೋಗಿ
  • ಮೊಬೈಲ್ ಸಂಖ್ಯೆ ಮತ್ತು ವಿನಂತಿ OTP ನಮೂದಿಸಿ. 
  • OTP ಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ನಿಮ್ಮ OTPಯನ್ನು 
  • ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡಲು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಮುಂದುವರೆಯಿರಿ ಕ್ಲಿಕ್ ಮಾಡಬೇಕು. 
  • ಪರಿಶೀಲನೆ ನಡೆಸಲಾದ ಮೊಬೈಲ್ ಸಂಖ್ಯೆ ಕುರಿತ ದೃಢೀಕಣವನ್ನು ಬಳಕೆದಾರರು ಪಡೆಯುವರು

ಸಮಾರೋಪ

ತಮ್ಮ ಮೊಬೈಲ್ ಸಂಖ್ಯೆಗಳೊಂದಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಭಾರತ ಸರ್ಕಾರವು ನಾಗರಿಕರನ್ನು ಒತ್ತಾಯಿಸುತ್ತದೆ. ಇದು ಹಣಕಾಸಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. 

ಇಂತಹ ಹೆಚ್ಚಿನ ಮಾಹಿತಿಯುಕ್ತ ಲೇಖನಗಳಿಗಾಗಿ ಪೀರಾಮಲ್ ಫೈನಾನ್ಸ್‌ ಗೆ ಭೇಟಿ ನೀಡಿ. ಅವರು ವ್ಯಾಪಕ ಶ್ರೇಣಿಯ ಹಣಕಾಸು ಉತ್ಪನ್ನಗಳು ಮತ್ತು ಸೇವೆಯನ್ನು ಸಹ ನೀಡುತ್ತಾರೆ. ಆಫರ್ ನಲ್ಲಿರುವ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಭ್ರೌಸ್ ಮಾಡಬಹುದು. 

;