Education

ಆನ್ ಲೈನ್ ನಲ್ಲಿ EPF ಖಾತೆಯೊಂದಿಗೆ ಪ್ಯಾನ್ ಹೇಗೆ ಲಿಂಕ್ ಮಾಡುವುದು?

Planning
19-12-2023
blog-Preview-Image

ಆನ್ ಲೈನ್ ನಲ್ಲಿ ನನ್ನ EPF ಖಾತೆಯೊಂದಿಗೆ ನನ್ನ ಪ್ಯಾನ್ ಲಿಂಕ್ ಹೇಗೆ ಮಾಡಬಹುದು? ಆನ್ ಲೈನ್ ನಲ್ಲಿ ಮಾಡಬಹುದೇ? EPF ಖಾತೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಅತ್ಯಂತ ತ್ವರಿತವಾದ ಮಾರ್ಗ ಯಾವುದು? EPF ಖಾತೆ ಪ್ರವೇಶಿಸಲು ಮತ್ತು ಅದು ನಿರ್ವಹಿಸಲು ನಿಮ್ಮ ಖಾತೆಗೆ ಎಲ್ಲ ಕಾಗದ ಪತ್ರಗಳನ್ನು ನೀವು ಲಗತ್ತಿಸಬೇಕು. ನಿಮ್ಮ ಗೌಪ್ಯತೆಯನ್ನು ಕಾಪಾಡಲು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಗಳು ದುರಳರ ಕೈಗೆ ಸೇರದಂತೆ ನೋಡಿಕೊಳ್ಳುವುದಕ್ಕೆ EPFO ಬದ್ಧವಾಗಿದೆ. 

ಇದರಿಂದಾಗಿ ತಮ್ಮ EPF ಖಾತೆಗೆ ಆಧಾರ್ ಸಂಪರ್ಕಿಸಲು ಮತ್ತು EPF ಖಾತೆಗೆ ಅವರ ಪ್ಯಾನ್ ಲಿಂಕ್ ಮಾಡಲು ಸಂಬಂಧಿಸಿದ KYC ಪೇಪರ್ ಸಿದ್ಧಪಡಿಸುವಂತೆ EPFO ತನ್ನ ಸದಸ್ಯರನ್ನು ಕೇಳುತ್ತದೆ.ನೀವು  ಈ ಬ್ಲಾಗ್ ಲೇಖನವನ್ನು ಓದುವದನ್ನು ಮುಗಿಸಿದಾಗ , ನಿಮ್ಮ  EPF ಖಾತೆಗೆ ನಿಮ್ಮ ಪ್ಯಾನ್ ಲಿಂಕ್ ಏಕೆ ಮಾಡಲಾಗುತ್ತದೆ ಮತ್ತು ನೀವು ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳುತ್ತೀರಿ.    

 EPF ಖಾತೆ ತ್ವರಿತ ಪರಿಶೀಲನೆ 

ಭಾರತದಲ್ಲಿ ವೇತನ ಪಡೆಯುವ ಉದ್ಯೋಗಿಗಳು ಭಾರತೀಯ ಸರ್ಕಾರದ ಕಾನೂನುಗಳ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯಿಂದ (EPF) ನಿವೃತ್ತಿ ಯೋಜನೆಗಳಿಗೆ ಅರ್ಹರಾಗಿರುತ್ತಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ EPFO ಇದರ ಉಸ್ತುವಾರಿ ವಹಿಸಿದೆ. ಇಪ್ಪತ್ತಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಯಾವುದೇ ಸಂಸ್ಥೆ ಅಥವಾ ಕಂಪನಿಯು ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ಸೇರ್ಪಡೆಯಾಗಬೇಕು. ಉದ್ಯೋಗಿಗಳು ತಮ್ಮ ಗಳಿಕೆಯ ಒಂದು ಭಾಗವನ್ನು ಭವಿಷ್ಯದ ಬಳಕೆಗಾಗಿ ಉಳಿಸುವ ಅವಕಶವನ್ನು ಹೊಂದಿರುತ್ತಾರೆ. ಸಂಸ್ಥೆಯು ಕೆಲಸಗಾರನನ್ನು ನೇಮಿಸಿದರೂ ಅವರು ತುರ್ತು ಪರಿಸ್ಥಿತಿಯಲ್ಲಿ EPF ಖಾತೆಯಲ್ಲಿ ಸಂಗ್ರಹಿಸಲಾದ ಹಣವನ್ನು ಪಡೆಯಬಹುದು ಅಥವಾ ಖಾತೆಯನ್ನು ಪ್ರವೇಶಿಸಬಹುದು. ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸಲು EPF ದೊಂದಿಗೆ ಪ್ಯಾನ್ ಲಿಂಕ್ ಮಾಡಬೇಕು. 

ಐಡಿಗಳಿಗೆ ಸಂಗ್ರಾಗಾರವಾಗಿ ನಿರ್ವಹಿಸುವ UAN

UANಯು ಯುನಿವರ್ಸಲ್ ಅಕೌಂಟ್ ನಂಬರ್ ಸಂಕ್ಷಿಪ್ತ ರೂಪವಾಗಿದೆ. UAN ವಿವಿಧ ಸಂಸ್ಥೆಗಳಿಂದ ವಿತರಿಸಲಾದ ಎಲ್ಲಾ ಸಂಬಂಧಿತ ಸದಸ್ಯ ಐಡಿಗಳಿಗೆ ಸಂಗ್ರಾಹಗಾರವಾಗಿ ಕಾರ್ಯನಿರ್ವಹಿಸುತ್ತದೆ. ಒಂದೇ ಸಾರ್ವತ್ರಿಕ ಖಾತೆ ಸಂಖ್ಯೆಯ ಅಡಿಯಲ್ಲಿ ನೀಡಲಾದ ಹಲವಾರು ಸದಸ್ಯ ಐಡಿಗಳೊಂದಿಗೆ ಒಬ್ಬ ಸದಸ್ಯರನ್ನು ಸಂಯೋಜಿಸುವುದು ಉದ್ದೇಶವಾಗಿದೆ. ಸದಸ್ಯ M.I.N. (ಸದಸ್ಯರ ಐಡಿ) ಪ್ರದರ್ಶನವು ಎಲ್ಲಾ ಸಂಬಂಧಿ M.I.N.ಗಳನ್ನು (ಸದಸ್ಯರ ಐಡಿಗಳು) ಪ್ರದರ್ಶಿಸುತ್ತದೆ. UAN ನಿಯೋಜಿಸಿದ ಸದಸ್ಯರು ಹೊಸ ಕಂಪನಿಯನ್ನು ಸೇರುವಾಗ ಆ ಸಂಖ್ಯೆಯನ್ನು ಒದಗಿಸಬೇಕು. ಸಂಸ್ಥೆಯು ಈಗ ಸದಸ್ಯ ಐಡಿ ಗೆ UANಯನ್ನು ನಿಯೋಜಿಸಲು ಉದ್ಯೋಗದಾತರಿಗೆ UAN ಅಗತ್ಯವಿದೆ. ಸದಸ್ಯರು ತಮ್ಮ UAN ಒದಗಿಸದಿದ್ದರೆ ಉದ್ಯೋಗದಾತರಿಗೆ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆನ್ ಲೈನ್ ನಲ್ಲಿ EPF ಖಾತೆಯನ್ನು ಹೊಂದಿರುವುದು ಉತ್ತಮ ಪ್ರಯೋಜನವಾಗಿದೆ. 

EPF ಖಾತೆಯೊಂದಿಗೆ ಪ್ಯಾನ್ ಹೇಗೆ ಲಿಂಕ್ ಮಾಡುವುದು?

ನಿಮ್ಮ EPF ಖಾತೆಗೆ ಪ್ಯಾನ್ ಖಾತೆಯನ್ನು ಸಂಪರ್ಕಿಸಲು ಈ ಆನ್ ಲೈನ್ ಮಾರ್ಗದರ್ಶಿಯಲ್ಲಿ ವಿವರಿಸುವ ಕಾರ್ಯವಿಧಾನಗಳು:

  • EPFOಗಳ ಆನ್ ಲೈನ್ ಸೇವೆಗಳನ್ನು ಬಳಸಲು ನಿಮ್ಮ UAN ಮತ್ತು ಪಾಸ್ ವರ್ಡ್ ನಮೂದಿಸಿ
  • "Know Your Customer" ಪೇಜ್ ಪ್ರವೇಶಿಸಲು ಮೇಲಿನ ಮೆನುವಿನಿಂದ "Manage"ಆಯ್ಕೆಮಾಡಿ, ನಂತರ "KYC." ಪ್ರವೇಶಿಸಿ.
  • ಅನಂತರ, ನಿಮ್ಮನ್ನು KYC ಪುಟಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ದಾಖಲೆ ಪ್ರಕಾರಕ್ಕಾಗಿ ಡ್ರಾಪ್ ಡೌನ್ ಬಾಕ್ಸ್ ಮತ್ತು ತಿದ್ದುಪಡಿ ಮಾಡಬೇಕಾದ ದಾಖಲೆಗಳ ಪಟ್ಟಿಯನ್ನು ನೀವು ಗಮನಿಸಬಹುದು. 
  • ನಿಮ್ಮ EPF ಖಾತೆಗೆ ನಿಮ್ಮ ಫ್ಯಾನ್ ಸಂಪರ್ಕಿಸುವುದನ್ನು ನೀವೀಗ ತಳಿಯುತ್ತೀರಿ. ಇದಕ್ಕಾಗಿ ನಿಮ್ಮ EPF ಖಾತೆಯ ಮುಖ್ಯ ಮೆನುಗೆ ಹೋಗಿ ಮತ್ತು ಪ್ಯಾನ್ ಆಯ್ಕೆಯನ್ನು ಆರಿಸಿರಿ.
  • ನಿಮ್ಮ ಪ್ಯಾನ್ ಕಾರ್ಡ್ ಮೇಲೆ ಕಾಣಿಸಿಕೊಳ್ಳುವ ನಿಖರವಾದ ಸಂಪೂರ್ಣ ಹೆಸರನ್ನು ನಮೂದಿಸಿ, "Save” ಕ್ಲಿಕ್ ಮಾಡಿ 
  • ನೀವು ಒದಗಿಸಿದ ನಿಮ್ಮ ಹೆಸರು ಮತ್ತು ಪ್ಯಾನ್ ಕಾರ್ಡ್ ಮಾನ್ಯವಾಗಿವೆ ಎಂದು ಆದಾಯ ತೆರಿಗೆ ಇಲಾಖೆ ದೃಢೀಕರಿಸಿದ ನಂತರ ನಿಮ್ಮ ಪ್ಯಾನ್ ಗೆ EPF ಖಾತೆ ಸಂಪರ್ಕ ಹೊಂದುವುದು. 
  • ನೀವು ಪ್ಯಾನ್ ಕಾರ್ಡ್ ಅನ್ನು EPF ಖಾತೆಗೆ ಸಂಪರ್ಕ ಮಾಡಿದಾಗ EPFO ವೆಬ್ ಸೈಟ್ ಗೆ ಭೇಟಿ ನೀಡುವ ಹಾಗೂ ಮತ್ತು ಮುಖ್ಯ ಪೇಜ್ ನಲ್ಲಿ "Manage Profile" ಕ್ಲಿಕ್ ಮಾಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. 

ಆನ್ ಲೈನ್ ಗೆ ಹೋಗದೇ ನಿಮ್ಮ EPF ಅಕೌಂಟ್ ಗೆ ನಿಮ್ಮ ಪ್ಯಾನ್ ಹೇಗೆ ಸಂಪರ್ಕಸುವುದು? 

ಕಂಪ್ಯೂಟರ್ ಬಳಸದೇ ನಿಮ್ಮ ಪ್ಯಾನ್ ಕಾರ್ಡ್ ಗೆ ನಿಮ್ಮ EPF ಹೇಗೆ ಸಂಪರ್ಕಿಸುವುದೆಂಬುದರ ವಿವರ ಇಲ್ಲಿದೆ: 

  • EPF ದೊಂದಿಗೆ ಪ್ಯಾನ್ ಲಿಂಕ್ ಮಾಡಲು EPFO ಕಚೇರಿಗೆ ಕರೆ ಮಾಡುವುದು ಅಥವಾ ಭೇಟಿ ನೀಡುವುದು ಅತ್ಯಂತ ಅನುಕೂಲಕರವಾಗಿದೆ. 
  • ವಿನಂತಿಯೊಂದಿಗೆ ನೀವು ಮುಂದುವರಿಯಲು ಬಯಸಿದರೆ, ನಿಮ್ಮ ಪ್ಯಾನ್, UAN, ಹೆಸರು ಮತ್ತು ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಅರ್ಜಿಯನ್ನು ಎರಡೆರಡು ಬಾರಿ ಪರೀಕ್ಷಿಸಬೇಕು.  
  • EPF-PAN ಸಂಪರ್ಕ ಅರ್ಜಿ ಸಲ್ಲಿಸುವಾಗ ಸ್ವಯಂ ದೃಢಿಕರಿಸಿದ PAN ಕಾರ್ಡ್ ಹಾಗು UAN ಪ್ರತಿಯನ್ನು ಸೇರಿಸಿ.
  • ನೀವು ಸಲ್ಲಿಸಿದಿ ಕಾಗದ ಪತ್ರಗಳು ಹಾಗು ನಿಮ್ಮ ಅರ್ಜಿಯನ್ನು ಆಡಳಿತಾಧಿಕಾರಿಯೊಬ್ಬರು ಪರಾಮರ್ಶಿಸುವರು. ಇದು ಅಧಿಕೃತವಾಗಿದ್ದರೆ ನಿಮ್ಮ ಪ್ಯಾನ್ ನಿಮ್ಮ EPF ಖಾತೆ ಜೊತೆ ಸಂಪರ್ಕಹೊಂದುವುದು.
  • ನಿಮ್ಮ EPF-PAN ಸಂಪರ್ಕ ಬದಲಾವಣೆ ಸಂದರ್ಭದಲ್ಲಿ ಮೇಲ್ ಮತ್ತು ಟಕ್ಸ್ಟ್ ಸಂದೇಶ ಮೂಲಕ ನಿಮ್ಮನ್ನು ಎಚ್ಚರಿಸಲಾಗುತ್ತದೆ. 

ನನ್ನ ಪ್ಯಾನ್ ಗೆ ಉಪಯೋಗಿಸುವ ನನ್ನ PF ಖಾತೆಯನ್ನು ನಾನು ಪರೀಕ್ಷಿಸಬಹುದೇ? 

ನಿಮ್ಮ ಪ್ಯಾನ್ ಕಾರ್ಡ್ ಗೆ ಉಪಯೋಗಿಸುವ ನಿಮ್ಮ PF ಖಾತೆ ಸಂಖ್ಯೆಯನ್ನು ನೀವು ಪಡೆಯಬಹುದು. ನಿಮ್ಮ UAN ಸಕ್ರಿಯಗೊಳಿಸಿದ ನಂತರ ನೀವು ಆರಂಭಿಸುವ ಮೊದಲು ಕೆಲವು ಮೂಲ ಹಂತಗಳನ್ನು ನೀವು ಪೂರ್ಣಗೊಳಿಸಬೇಕು.  

  • EPF ಸಂಖ್ಯಾ ಸೈಟ್ ಲಾಗಿನ್ ಆದನಂತರ, "Activate UAN" ಕ್ಲಿಕ್ ಮಾಡಿ. 
  • ನಿರ್ದಿಷ್ಟ ಬಾಕ್ಸ್ ನಲ್ಲಿ ನಿಮ್ಮ ಹೆಸರು, ಪ್ಯಾನ್ ಸಂಖ್ಯೆ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ 
  • ಪಟ್ಟಿಯಿಂದ ದಯವಿಟ್ಟು "Get Authorization PIN" ಆಯ್ಕೆ ಮಾಡಿ. 
  • ಅನುಮತಿಗಾಗಿ ಒಂದುಬಾರಿ PIN (OTP)ಯನ್ನು ನಿಮ್ಮ ನೋಂದಾಯಿತ ಫೋನ್ ನಂಬರ್ ಗೆ ಕಳುಹಿಸಲಾಗುವುದು.
  • "Validate OTP and Activate UAN" ಬಟನ್ ಕ್ಲಿಕ್ ಮಾಡುವಾಗ ಈ PIN ಬೇಕಾಗುತ್ತದೆ. 
  • ಈ ಹಂತಗಳನ್ನು ನೀವು ಪೂರ್ಣಗೊಳಿಸಿದ ನಂತರ ನಿಮ್ಮ UAN ಸಕ್ರಿಯಗೊಳ್ಳುವುದು. 
  • ಸೈನ್ ಅಪ್ ಮಾಡುವಾಗ ನೀವು ಒದಗಿಸಿದ ಮೊಬೈಲ್ ಸಂಖ್ಯೆಗೆ ಟಕ್ಸ್ಟ್ ಸಂದೇಶ ಮೂಲಕ UAN ಮತ್ತು ಪಾಸ್ ವರ್ಡ್ ಬಿಡುಗಡೆಯಾಗುವುದು. 

EPF ಖಾತೆ ತೆರೆಯುವುದು ಏಕೆ ಒಂದು ಉತ್ತಮ ಉಪಾಯವಾಗಿದೆ?  

EPF ಸೇರುವುದರಿಂದಾಗುವ ಪ್ರಯೋಜನಗಳು ಈ ಕೆಳಗಿನಂತಿವೆ:

  • ಕಾರ್ಮಿಕರು EPFO ವನ್ನು ಬಳಸುವ ಮೂಲಕ ದೂರುಗಳನ್ನು ಸ್ವೀಕರಿಸುವದು ಮತ್ತು ಅನುಸರಣೆ, ಸವಲತ್ತುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತರಗಳನ್ನು ಪಡೆಯವುದು ಸುಲಭವಾಗುತ್ತದೆ. 
  • EPFO ಒಂದು ಸರ್ಕಾರಿ ಸಂಸ್ಥೆಯಾಗಿರುವುದರಿಂದ ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಅನುಸರಿಸಲು ಎಲ್ಲ ವ್ಯವಹಾಳಗಳು ಮತ್ತು ಅದರ ಸ್ಥಾಪಿತ ಕಾನೂನು, ನಿಬಂಧನೆಗಳನ್ನು ಅನುಸರಿಸಬೇಕು. ನೀವು EPF ಖಾತೆ ತೆರೆಯಬೇಕು. 
  • ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಆನ್ ಲೈನ್ ಸೇವೆ ಪಡೆಯುವುದನ್ನು ಸರಳಗೊಳಿಸಿದೆ. 
  • EPF ಪ್ರಯತ್ನಗಳಿಂದಾಗಿ ಬೇಡಿಕೆಯನ್ನು ಇತ್ಯರ್ಥಪಡಿಸಲು ಸರಾಸರಿ ಸಮಯವು ಇಪ್ಪತ್ತರಿಂದ ಮೂರು ದಿನಗಳಿಗೆ ಮಿತಿಗೊಂಡಿದೆ. 
  • EPF ವಿವಿಧ ರೀತಿಯ ಸ್ವಯಂ ಪ್ರೇರಣೆಯಿಂದ ಜಾರಿಗೊಳಿಸಬಹುದಾದ ಅನುಸರಣೆಯನ್ನು ವಿಸ್ತರಿಸಲು ಮತ್ತು ಬದ್ಧಗೊಳಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. 
  • ನೌಕರರ ಭವಿಷ್ಯ ನಿಧಿ (EPF)ಯು ನಿವೃತ್ತರಿಗಾಗಿ ದೊಡ್ಡ ಮೊತ್ತವನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ EPF ಖಾತೆ ಹೊಂದುವುದು ಅತ್ಯಂತ ಮಹತ್ವದ್ದಾಗಿದೆ
  • ನೌಕರರ ಭವಿಷ್ಯ ನಿಧಿ (EPF) ಗೆ ಕೊಡುಗೆ ನೀಡುವ ವೃತ್ತಿಪರರು ಪ್ರತಿ ತಿಂಗಳು ತಮ್ಮ ವೇತನದಿಂದ ಉಳಿಸಿ ದೊಡ್ಡ ಮೊತ್ತದೆ ಹಣವನ್ನು ಹೂಡಿಕೆ ಮಾಡುವುದಕ್ಕಿಂತ ಭವಿಷ್ಯದ ಅಗತ್ಯಗಳಿಗಾಗಿ ಗಮನಾರ್ಹ ಮೊತ್ತವನ್ನು ಉಳಿಸಲು ಇದು ಸರಳ ಮತ್ತು ಹೆಚ್ಚು ಅನುಕೂಲಕರವಾಗಿದೆ. 
  • ಉದ್ಯೋಗಿಗಳು ತುರ್ತು ಪ್ರಸಂಗಗಳಲ್ಲಿ EPF ನಿಧಿಯ ಎಲ್ಲವನ್ನು ಅಥವಾ ಭಾಗವನ್ನು ಬಳಸಿಕೊಳ್ಳಬಹುದು, 
  • ತೆರಿಗೆ ಪಾವತಿ ಆದಾಯವನ್ನು ಕಡಿಮೆ ಮಾಡಲು EPF ಖಾತೆ ಒಂದು ಅಗತ್ಯ ಸಾಧನವಾಗಿದೆ

ಸಾರಾಂಶ 

ನಿಮ್ಮ EPF ಖಾತೆ ಮೂಲಕ ನೀವು ಎಲ್ಲಾ EPFO ಸಂಪನ್ಮೂಲಗಳ ಲಾಭವನ್ನು ಪಡೆಯುತ್ತೀರಿ ಎಂದು ನಾವು ಭಾವಿಸುತ್ತೇವೆ. EPFO ವೆಬ್ ಸೈಟ್ ನಲ್ಲಿ ನಿಮ್ಮ PF ಖಾತೆಯನ್ನು ಹಿಂಪಡೆಯಲು ನಿಮ್ಮ ಪ್ಯಾನ್ ಕಾರ್ಡ್ ಸಹ ನೀವು ಬಳಸಬಹುದು. ಇದಕ್ಕಾಗಿ ನೀವು EPF ಖಾತೆ ತೆರೆಯಬಹುದು. 

EPF ಖಾತೆಯನ್ನು ತೆರೆಯಲು ಉದ್ಯೋಗಿಗಳಿಗೆ ಆನ್ ಲೈನ್ ಆಯ್ಕೆಗಳನ್ನು ಬಳಸುವುದು ಅನಾನುಕೂಲ ಅಥವಾ ಕಷ್ಟಕರವಾಗಿದ್ದರೆ, ಅವರು ಹತ್ತಿರದ EPF ಕಚೇರಿಗೆ ಭೆಟಿ ನೀಡಿಬಹುದು. EPF-PAN ಲಿಂಕ್ ಅರ್ಜಿಯನ್ನು ಸ್ವತಃ ಭರ್ತಿ ಮಾಡಿಬಹುದು. ಪ್ಯಾನ್ ಕಾರ್ಡ್ ಮತ್ತು ಸ್ವಯಂ ದೃಢೀಕರಿಸಿದ UAN ಪ್ರತಿಯನ್ನು ಸಲ್ಲಿಸಬಹುದು. ಪೀರಾಮಲ್ ಫೈನಾನ್ಸ್‌ ನಲ್ಲಿ ಇನ್ನೂ ವಿಸ್ತೃತವಾದ ವಿಭಿನ್ನ ವಿಷಯಗಳು ಹಾಗೂ ಮಾಹಿತಗಳನ್ನು ಒಳಗೊಂಡ ಲೇಖನಗಳಿವೆ

;