Education

ಆನ್ ಲೈನ್ ನಲ್ಲಿ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ ಲಿಂಕ್ ಮಾಡುವುದು ಹೇಗೆ: ಹಂತ-ಹಂತದ ಮಾರ್ಗದರ್ಶಿ

Planning
19-12-2023
blog-Preview-Image

ಆಧಾರ್ ಕಾರ್ಡ್ ಗಳೊಂದಿಗೆ ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಡುವುದು ಸುಲಭ. ಇದಕ್ಕಾಗಿ ಹಲವು ಮಾರ್ಗಗಳಿವೆ. ಆನ್ ಲೈನ್ ನಲ್ಲಿ ಪ್ಯಾನ್ ಪ್ಯಾನ್ ಕಾರ್ಡ್ ಗೆ ಆಧಾರ್ ಹೇಗೆ ಸಂಪರ್ಕಿಸುವುದು ಎಂಬುದನ್ನು ಈ ಪೋಸ್ಟ್ ನಲ್ಲಿ ತಿಳಿಯಿರಿ. 

ಆಧಾರ್-ಪ್ಯಾನ್ ಲಿಂಕ್ ಗೆ ಗಡುವು

ಭಾರತ ಸರ್ಕಾರವು ಆಧಾರ್ - ಪ್ಯಾನ್ ಲಿಂಕ್ ಮಾಡುವುದಕ್ಕೆ ಮಾರ್ಚ್ 31,2023ರ ವರೆಗೆ ವಿಸ್ತರಿಸಿದೆ. ಈ ಹಿಂದೆ ಈ ಗಡುವು 31,2022 ಆಗಿತ್ತು. 

ಈಗಾಗಲೇ ನಿದಗದಿಪಡಿಸಿದ ಎಪ್ರಿಲ್ 1, 2022 ರೊಳಗೆ ಆಧಾರ್ ಗೆ ಪ್ಯಾನ್ ಲಿಂಕ್ ಮಾಡದಿದ್ದರೆ ಬೆಲೆ ತೆರಬೇಕಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಘೋಷಿಸಿದೆ. 

ಜೂನ್ 30, 2022ರ ವೇಳೆಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿದರೆ ರೂ.500 ದಂಡ ವಿಧಿಸಲಾಗುವುದು. 2022, ಜುಲೈ 1ರ ನಂತರ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿದರೆ ರೂ. 1000 ದಂಡ ಭರಿಸಬೇಕಾಗುವುದು. 

ಆಧಾರ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದುರಿಂದ ಪ್ರಯೋಜನ

ಎಲ್ಲ ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರದೊಂದಿಗೆ ಪ್ಯಾನ್ ಲಿಂಕ್ ಮಾಡುವುದರ ಮಹತ್ವ ಕಾರಣಗಳು ಇಲ್ಲಿವೆ. 

  • ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಯನ್ನು ಇದು ತೆಗೆದು ಹಾಕುತ್ತದೆ.  
  • ಆಧಾರ-ಪ್ಯಾನ್ ಲಿಂಕ್ ಮಾಡುವುದುರಿಂದ ಯಾವುದೇ ತೆರಿಗೆ ವಂಚನೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.
  • ಜನರು ತಮ್ಮ ಆದಾಯ ತೆರಿಗೆ ರಿಟರ್ನ್ ಭರ್ತಿ ಮಾಡುವಾಗ ಪುರಾವೆಗಳನ್ನು ನೀಡುವ ಅಗತ್ಯವಿಲ್ಲ. ಇದರಿಂದಾಗಿ ಆದಾಯ ತೆರಿಗೆ ರಿಟರ್ನ್ ಮಾಡುವುದು ಸುಲಭವಾಗಿದೆ. 
  • ಆಧಾರ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದರಿಂದ ಪ್ಯಾನ್ ಹಿಂತೆಗೆದುಕೊಳ್ಳಲು ಅವಕಾಶವಿಲ್ಲ

ಆಧಾರ-ಪ್ಯಾನ್ ಲಿಂಕ್ ಮಾಡುವುದರ ಮಹತ್ವ 

ನೋಂದಣಿ ಮತ್ತು ಗುರುತಿನ ಪರಿಶೀಲನೆಗಾಗಿ ಪ್ಯಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ನಂತಹ ವಿಶಿಷ್ಟ ಗುರುತಿ ಕಾರ್ಡ್ ಗಳು ಅಗತ್ಯ ಇವೆ. ಆಧಾರ್-ಪ್ಯಾನ್ ಲಿಂಕ್ ಮಾಡುವ ಕುರಿತು ಸರ್ಕಾರ ಎಲ್ಲ ಸಂಸ್ಥೆಗಳಿಗೆ ಸಲಹೆ ನೀಡಿದೆ. ಕೆಳಗಿನ ಗುರಿಗಳು ಈ ಕ್ರಿಯೆಯನ್ನು ಪ್ರೇರೇಪಿಸುತ್ತವೆ. 

  • ತೆರಿಗೆ ವಂಚನೆಯನ್ನು ನಿಭಾಯಿಸುವುದು

ಆಧಾರ್-ಪ್ಯಾನ್ ಲಿಂಕ್ ಮಾಡುವ ಮೂಲಕ ನಿರ್ದಿಷ್ಟ ವ್ಯಕ್ತಿ ಅಥವಾ ಕಂಪನಿಯ ತೆರಿಗೆಯ ಚಟುವಟಿಕಯ ಮೇಲ್ವಿಚಾರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ ಮತ್ತು ಅವರ ಆಧಾರ್ ಕಾರ್ಡ್ ಅವರ ಗುರುತು ಮತ್ತು ನಿವಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರರ್ಥ ಸರ್ಕಾರವು ತೆರಿಗೆ ವಿಧಿಸ ಬಹುದುದಾ ಪ್ರತಿಯೊಂದು ವ್ಯಾಪಾರ ಅಥವಾ ಚಟುವಟಿಕೆಯ ಮೇಲೆ ನಿಗಾ ಇಡುತ್ತದೆ. 

ಪ್ರತಿ ಸಂಸ್ಥೆಗೆ ತೆರಿಗೆ ನೀಡುವುದಕ್ಕೆ ಪ್ರೇರೇಪಿಸಲು ಎಲ್ಲಾ ಹಣಕಾಸಿನ ಪ್ರಸಂಗಗಳ ಸಂಪೂರ್ಣ ದಾಖಲೆಯನ್ನು ಸರ್ಕಾರವು ಈಗಾಗಲೇ ಹೊಂದಿರುವದಿಂದ ತೆರಿಗೆ ದೀರ್ಘಾವಧಿ ತೆರಿಗೆ ವಂಚನೆ ಸಂಭವಿಸುವುದಿಲ್ಲ.

  • ಹಲವಾರು ಪ್ಯಾನ್ ಕಾರ್ಡ್ ಗಳು 

ಸರ್ಕಾರವನ್ನು ವಂಚಿಸಲು ಜನರು ಹಲವಾರು ಪ್ಯಾನ್ ಕಾರ್ಡ್ ಗಳನ್ನು ಪಡೆಯುವುದನ್ನು ತಡೆಯಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಮತ್ತೊಂದು ಕಾರಣವಾಗಿದೆ. 

ಒಂದು ಘಟಕವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಗಳಿಗೆ ಅರ್ಜಿಸಲ್ಲಿಸುವ ಮೂಲಕ ನಿರ್ದಿಷ್ಟ ಆರ್ಥಿಕ ವ್ಯವಹಾರಗಳು ಮತ್ತು ಸಂಬಂಧಿತ ತೆರಿಗೆಗಳಿಗಾಗಿ ಪ್ಯಾನ್ ಕಾರ್ಡ್ ಗಳಲ್ಲಿ ಒಂದನ್ನ ಬಳಸಬಹುದು. ಇತರ ಪ್ಯಾನ್ ಕಾರ್ಡ್ ಅನ್ನು ವಹಿವಾಟುಗಳು ಅಥವಾ ಖಾತೆಗಳಿಗೆ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಆದಾಯ ತೆರಿಗೆ ಇಲಾಖೆಯಿಂದ ಮರೆಮಾಡಲು ಬಯಸುವ ಖಾತೆಗಳನ್ನು ಬಹಸಬಹುದಾಗಿದೆ.

ಸರ್ಕಾರವು ಆಧಾರ ಕಾರ್ಡ್ ಮೂಲಕ ಘಟಕವನ್ನು ಗುರುತಿಸಬಹುದು, ನಂತರ ಆಧಾರ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಆದಾರ್ ಪ್ಯಾನ್ ಮೂಲಕ ಮಾಡಿದ ಎಲ್ಲಾ ಹಣದ ವಹಿವಾಟಿನ ದಾಖಲೆಗಳನ್ನು ಪಡೆಯಬಹುದು. ಇದರಿಂದ ಒಂದೇ ಹೆಸರಿನಲ್ಲಿ ನೋಂದಾಯಿಸಲಾದ ನಕಲಿ ಪ್ಯಾನ್ ಕಾರ್ಡ್ ಗಳನ್ನು ಗುರುತಿಸಲು ಸಧ್ಯವಾಗುತ್ತದೆ ಮತ್ತು ಅಗತ್ಯವಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. 

ಆಧಾರ್ ಗೆ ಪ್ಯಾನ್ ಲಿಂಕ್ ಮಾಡುವ ವಿಧಾನಗಳು 

ಆಧಾರ್ ಕಾರ್ಡ್ ದೊಂದಿಗೆ ಪ್ಯಾನ್ ಲಿಂಕ್ ಮಾಡುವದಕ್ಕೆ ಎರಡು ವಿಧಾನಗಳಿವೆ. ಅವು ಕೆಳಗಿನಂತಿವೆ:

  1. ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್
  1. ಎಸ್.ಎಸ್.ಎಂ ಮೂಲಕ 

ಆಧಾರ್-ಪ್ಯಾನ್ ಲಿಂಕ್ ಗಾಗಿ ಇ-ಫೈಲಿಂಗ್ ವೆಬ್ ಸೈಟ್ ಬಳಸುವುದು

ಕೆಳಗಿನ ವಿಧಾನಗಳು ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಹೇಗೆ ಲಿಂಕ್ ಮಾಡುವುದು ಎಂಬುದನ್ನು ತೋರಿಸುತ್ತದೆ. ಭಾರತದ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವಿಬ್ ಸೈಟ್ ಬಳಸಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. 

ಹಂತ 1

Income Tax e-filing website ಗೆ ಭೇಟಿ ನೀಡಿ

ಹಂತ 2

''Quick Links' ಬಟನ್ ಗಮನಿಸಿ. ಪ್ರಾರಂಭಿಸಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ''Link Aadhaar' sub-option ಆಯ್ಕೆಮಾಡಿ.

ಹಂತ 3 

ಅದನ್ನು ಪೂರ್ಣಗೊಳಿಸಿದಾಗ, ಪಾವತಿ ಮಾಹಿತಿಯನ್ನು ಮೌಲ್ಯೀಕರಿಲಾಗಿದೆ ಎಂದು ಹೇಳುವ ಪಾಪ್-ಅಪ್ ಸಂದೇಶವು ಕಾಣಿಸಿಕೊಳ್ಳುತ್ತದೆ. ಮುಂದುವರಿಯಲು 'Continue' ಆಯ್ಕೆಯನ್ನು ಆರಿಸಿ. 

ಹಂತ 4 

ವೆಬ್ ಸೈಟ್ ಎಂಟರ್ ಆದನಂತರ ಅವರು ತಮ್ಮ ಪ್ಯಾನ್ ಮತ್ತು ಆಧಾರ ಕಾರ್ಡ್ ಸಂಖ್ಯೆಯನ್ನಯ ಎಂಟರ್ ಮಾಡಬೇಕು. ಮುಂದುವರಿಯಲು ಇದರ ಕೊನೆಯ ಹಂತದ 'Validate' ಬಟನ್ ಕ್ಲಿಕ್ ಮಾಡಬೇಕು.

ಹಂತ 5

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೇಲೆ ಕಂಡುಬರುವ ಸಂಖ್ಯೆ ಮತ್ತು ಹೆಸರನ್ನು ಎಂಟರ್ ಮಾಡಬೇಕು. ಅದರ ಹಿಂದೆ ಎರಡು ಚೆಕ್ ಬಾಕ್ಸ್ವೆ. ಆಧಾರ ಕಾರ್ಡ್ ಜನ್ಮ ದಿನಾಂಕವನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂದು ಒಂದು ವಿಚಾರಿಸಿದರೆ, ಇನ್ನೊಂದು ಆಧಾರ್ ಅನ್ನು ಮೌಲ್ಯೀಕರಿಸಲು ಸೂಚಿಸುತ್ತದೆ.ಇದು ಅನ್ವಯವಾದರೆ ಒಂದು ಆಯ್ಕೆ ಸಂಖ್ಯೆಯನ್ನು ಆರಿಸಿ. ಇನ್ನೊಂದಕ್ಕೆ ಮುಂದುವರಿಯಲು ನಿಖರವಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಅಗತ್ಯವಿದೆ. 

ಹಂತ 6 

ಮುಂದೆ ಸ್ಕ್ರೀನ್ ಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ OTP (ಒನ್ ಟೈಮ್ ಪಾಸ್ ವರ್ಡ್) ಅನ್ನು ನಮೂದಿಸಿ. 'Validate' ಆಯ್ಕೆಯನ್ನು ಆರಿಸಿ. ಮೇಲಿನ OTP ನೇರವಾಗಿ ಭಾರತದ ಆದಾಯ ತೆರಿಗೆ ಇಲಾಖೆಯಿಂದ ಬರುತ್ತದೆ ಎಂಬುದನ್ನು ನೆನಪಿಡಿ. 

ಹಂತ 7

ಆಧಾರ್-ಪ್ಯಾನ್ ಲಿಂಕ್ ವಿನಂತಿಯನ್ನು ಅಂತಿಮವಾಗಿ UIDAI (ಭಾರತದ ವಿಶಿಷ್ಟ ಗುರುತಿನ ಪ್ರಧಿಕಾರ) ಕ್ಕೆ ಸಲ್ಲಿಸಲಾಗಿದೆ ; ಕೆಲವೇ ದಿನಗಳಲ್ಲಿ ಅದೇ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಅದು ಹೇಳುತ್ತದೆ. ಅಂತಹ ಸಂದೇಶವನ್ನು ಯಾರಾದರೂ ಪಡೆದರೆ, ತಮ್ಮ ಆಧಾರ್ ಅನ್ನು ತಮ್ಮ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡುವಂತೆ ವಿನಂತಿಸಲಾಗುತ್ತದೆ.

SMS ಮೂಲಕ ಆಧಾರ-ಪಾನ್ ಲಿಂಕ್ ಹೇಗೆ ಲಿಂಕ್ ಮಾಡುವುದು

SMS ಮೂಲಕ ಆಧಾರ ಕಾರ್ಡ್ ಜೊತೆ ಪ್ಯಾನ್ ಲಿಂಕ್ ಮಾಡುವ ಪ್ರಕ್ರಿಯೆಯ ಹಂತಗಳು ಈ ಕೆಳಗಿನಂತಿವೆ  

ಹಂತ 1 

UIDPAN<12 Digit Aadhaar> <10 Digit PAN> ಪಾರ್ಮೆಟ್ ನಲ್ಲಿ ಸಂದೇಶ ಕಳುಹಿಸಿ

ಹಂತ 2

ಆಧಾರ ಲಿಂಕ್ ಮಾಡಿದ SMS ಸಂದೇಶವನ್ನು ಮೊಬೈಲ್ ಸಂಖ್ಯೆ: 56161 ಅಥವಾ 567678 ಕಳುಹಿಸಿರಿ

ಆಧಾರ್-ಪ್ಯಾನ್ ಲಿಂಕ್ ಗಾಗಿ ಆಧಾರ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡುವುದು ಹೇಗೆ

ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಸಂಪೂರ್ಣ ಲಿಂಕ್ ಮಾಡಲು  ಪ್ರತಿಯೊಂದು ಮಾಹಿತಿಯೂ ಒಂದೇ ಆಗಿದೆಯೇ ಎಂದು ಪರಿಶೀಲಿಸಬೇಕು. ಕೆಲವು ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ನಲ್ಲಿರುವು ಮಾಹಿತಿಯು ಪ್ಯಾನ್ ಕಾರ್ಡ್ ನಲ್ಲಿರುವ ಮಾಹಿತಿಗಿಂತ ಭಿನ್ನವಾಗಿರಬಹುದು. ಇದೇ ವೇಳೆ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಕೆಲವು ಸುಲಭ ವಿಧಾನಗಳೊಂದಿಗೆ ಆಫ್ ಲೈನ್ ಅಥವಾ ಆನ್ ಲೈನ್ ನಲ್ಲಿ ಸರಿಪಡಿಸಬಹುದು. ಆಧಾರ ಕಾರ್ಡ್ ದೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವಲ್ಲಿ ತಿದ್ದುಪಡಿಗಳ ಬಗ್ಗೆ ತಿಳಿಯಲು ಓದುವುದನ್ನು ಮುಂದುವಿರಿಸಿ: 

ಹಂದ 1

UIDAI's official website ಗೆ ಹೋಗಿ

 ಹಂತ 2 

ಲಾಗ್ ಇನ್ ಆಗಲು 12-ಅಂಕಿಯ ಆಧಾರ್ ಸಂಖ್ಯೆ ಮತ್ತು ಕೇಸ್ -ಸೆನ್ಸಿಟಿವ್ ಕ್ಯಾಪ್ಚಾ ಕೋಡ್ ನಮೂದಿಸಿ

ಹಂತ 3 : 

"OTP" ಆಯ್ಕೆಯನ್ನು ಆಯ್ಕೆಮಾಡಿ. ಅದರ ನಂತರ ಲಿಂಕ್ ಮಾಡಲಾದ ಮೊಬೈಲ್ ಫೋನ್ ಸಂಖ್ಯೆಗೆ ಒಂದು ಬಾರಿ ಪಾಸ್ವರ್ಡ್ (OTP) ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ ಮತ್ತು ಮುಂದುವರಿಸಲು 'Submit' ಬಟನ್ ಕ್ಲಿಕ್ ಮಾಡಿ. 

ಹಂತ 4

ಸ್ಕ್ರೀನ್ ಲ್ಲಿ ನವೀಕರಣಕ್ಕೆ ಅಗತ್ಯವಿರುವ ಆಧಾರ ಕಾರ್ಡ್ ಏರಿಯಾಗಳನ್ನು ಆಯ್ಕೆಮಾಡಿ. ಸಲ್ಲಿಸಲು ಕಡ್ಡಾಯವಾಗಿರುವುದರಿಂದ ಸಂಬಧಿತ ಪೇಪರ್ ಗಳ ಫೋಟೊಕಾಪಿಕಗಳನ್ನು ಇರಿಸಿಕೊಳ್ಳುವುದು. 

 ಹಂತ 5

ಅಗತ್ಯವಿರುವ ದಾಖಲೆಗಳು ಮತ್ತು ಅರ್ಜಿಗಳನ್ನು ಹಂಚಿಕೊಂಡ ನಂತರ, URN (ಅಪ್ಡೇಟ್ ವಿನಂತಿ ಸಂಖ್ಯೆ) ಸೃಷ್ಟಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಒಂದನ್ನು ನೋಟ್ ಮಾಡಬೇಕು. 

ಸಮಾರೋಪ 

ಪ್ಯಾನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ಗಳೊಂದಿಗೆ ಲಿಂಕ್ ಮಾಡುವುದು ಈಗ ಅಗತ್ಯವಾಗಿದೆ. ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯು ತುಲನಾತ್ಮಕವಾಗಿ ಸರಳವಾಗಿದೆ. ಮೇಲಿನ ಲೇಖನವು ಆಧಾರ್ ಕಾರ್ಡ್ ಗಳೊಂದಿಗೆ ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡುವ ಎರಡು ವಿಧಾನಗಳು, ಗಡುವು ಮತ್ತು ತಿದ್ದುಪಡಿ ವಿಧಾನಗಳ ಬಗ್ಗೆ ಚರ್ಚಿಸಿದೆ. 

ಅಂತಹ ಪ್ರಕ್ರಿಯೆಗಳಲ್ಲಿ ನಿಮಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಸಹಾಯದ ಅಗತ್ಯವಿದ್ದರೆ, ಪೀರಾಮಲ್ ಫೈನಾನ್ಸ್ ಗೆ ಭೇಟಿ ನೀಡಿ. ಈ ಆನ್ ಲೈನ್ ಪ್ಲಾಟ್ಪಾರ್ಮ್ ಹಣಕಾಸಿನ ಜಗತ್ತಿನಲ್ಲಿ ಸಂಬಂಧಿಸಿದ ಬೆಳವಣಿಗೆಗಳು, ಕಾರ್ಯವಿಧಾನಗಳು ಮತ್ತು ಉತ್ಪನ್ನಗಳ ಬಗ್ಗೆ ಎಲ್ಲವನ್ನೂ ಕಲಿಯಬೇಕಾಗುತ್ತದೆ. ಹಣಕಾಸಿನ ವಿವರಗಳ ಕುರಿತು ಅಥವಾ personal loans, ಕ್ರೆಡಿಟ್ ಕಾರ್ಡ್ ಗಳು ಮತ್ತು ಹಣಕಾಸು ನಿವರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅವರ ವೆಬ್ ಸೈಟ್ ನಲ್ಲಿ ಬ್ಲಾಗ್ ಗಳನ್ನು ಪರಿಶೀಲಿಸಿ!

;