Education

ಆನ್ ಲೈನ್ ಮೂಲಕ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ - ಹಂತ-ಹಂತಗಳಲ್ಲಿ ಮಾರ್ಗದರ್ಶನ

Planning
19-12-2023
blog-Preview-Image

ಶಾಶ್ವತ ಖಾತೆ ಸಂಖ್ಯೆ (PAN) 10 ಅಲ್ಫಾ ಸಂಖ್ಯೆಯನ್ನು ಒಳಗೊಂಡಿದೆ. ಇದು ಎಲ್ಲಾ ಭಾರತೀಯ ನಾಗರಿಕರಿಗೆ ಅವರ ತೆರಿಗೆ ಮಾಹಿತಿಯನ್ನು ಸಂಗ್ರಹಿಸುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಆದಾಯ ತೆರಿಗೆ ಇಲಾಖೆಯು ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಲು ನಮಗೆ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಇಚ್ಛೆಯಂತೆ ನೀವು ಇ-ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಪ್ರವೇಶಿಸಬಹುದು. ಭೌತಿಕ ಪ್ಯಾನ್ ಕಾರ್ಡ್ ಬಳಸುವ ರೀತಿಯಲ್ಲೇ ಇ-ಪ್ಯಾನ್ ಕಾರ್ಡ್ ಬಳಸಲಾಗುತ್ತದೆ. ಇದು ನಿಮ್ಮ ಪ್ಯಾನ್ ಕಾರ್ಡ್ ಎಲ್ಲ ವಿವರಗಳನ್ನು ಒಳಗೊಂಡಿದೆ. ಇ-ಪ್ಯಾನ್ ಕಾರ್ಡ್ ಸಹಾಯದಿಂದ ನೀವು ಹಣಕಾಸಿನ ವಹಿವಾಟುಗಳನ್ನು ಮಾಡಬಹುದು. ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದು ಮತ್ತು ನಿಮ್ಮ ಸರಿಯಾದ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸುವುದು ಮುಖ್ಯ. 

ಇ-ಪ್ಯಾನ್ ಕಾರ್ಡ್ ಎಂದರೆನು?

ಇ-ಪ್ಯಾನ್ ಕಾರ್ಡ್ ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಆಗಿದೆ. ಸಾಮಾನ್ಯವಾಗಿ, ಮೊದಲ ಬಾರಿ ತೆರಿಗೆದಾರರಿಗೆ
ಇ-ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ನೀವು ಭೌತಿಕ ಪ್ಯಾನ್ ಕಾರ್ಡ್ ಹೊಂದಿದ್ದರೆ ಇ-ಪ್ಯಾನ್ ಕಾರ್ಡ್ ಸಹ ಸ್ವೀಕರಿಸಲು ಆಯ್ಕೆ ಮಾಡಬಹುದು. ನೀವು ಈ ಕೆಳಗಿನ ವೈಶಿಷ್ಟ್ಯಗಳನ್ನು ಗಮನಿಸಬಹುದು.

  • ಕನಿಷ್ಟ ಅವಧಿಗಾಗಿ ಇ-ಪ್ಯಾನ್ ಕಾರ್ಡ್ ಉಚಿತವಾಗಿ ಲಭ್ಯವಾಗುತ್ತದೆ.
  • ನೀವು ವೈಯಕ್ತಿಕವಾಗಿ ಇ-ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ.ಸಂಸ್ಥೆಗಳು, ಸಂಘಟನೆಗಳು, HUFಗಳು, ಟ್ರಸ್ಟ್ ಗಳು, ಮತ್ತು ವ್ಯಾಪಾರ ವ್ಯವಹಾರಕ್ಕಾಗಿ ಇ-ಪ್ಯಾನ್ ಕಾರ್ಡ್ ಲಭ್ಯವಿಲ್ಲ.
  • ಇ-ಪ್ಯಾನ್ ಕಾರ್ಡ್ ಸೃಷ್ಟಿಸಲು ಆಧಾರ್ ಕಾರ್ಡ್ ಬಳಸಲಾಗುತ್ತದೆ.  

ಇ-ಪ್ಯಾನ್ ಕಾರ್ಡ್ ಪಡೆಯಲು ಅರ್ಹತೆ

  • ನೀವು ಭಾರತೀಯ ನಾಗರಿಕರಾಗಿರಬೇಕು
  • ನೀವು ವೈಯಕ್ತಿಕವಾಗಿ ಮಾನ್ಯ ಆಧಾರ್ ಕಾರ್ಡ್ ಹೊಂದಿರಬೇಕು
  • ನಿಮ್ಮ ಆಧಾರ ಕಾರ್ಡ್ ಗೆ ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಲಿಂಕ್ ಆಗಿರಬೇಕು. 

ಪ್ಯಾನ್ ಕಾರ್ಡ್ ಯಾವ ವಿವರಗಳನ್ನು ಒಳಗೊಂಡಿರುವುದು?

ಪ್ಯಾನ್ ಕಾರ್ಡ್ ಒಳಗೊಂಡ ವಿವರಗಳು ಈ ಕೆಳಗಿನಂತಿವೆ:-

  • ನಿಮ್ಮ ಹೆಸರು, ಜನ್ಮ ದಿನಾಂಕ ಮತ್ತು ಇತರ ವೈಯಕ್ತಿಕ ವಿವರಗಳು
  • ಕ್ಯೂಆರ್ ಕೋಡ್ ಗಳು
  • ಡಿಜಿಟಲ್ ಆಗಿ ಸ್ಕ್ಯಾನ್ ಮಾಡಿದ ನಿಮ್ಮ ಫೋಟೊ ಮತ್ತು ಸಹಿ
  • ನಿಮ್ಮ ತಂದೆ ಹೆಸರು
  • ನಿಮ್ಮ ಲಿಂಗ 

ಇ-ಪ್ಯಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? 

ನೀವು ಈಗಾಲೇ ಭೌತಿಕವಾಗಿ ಪ್ಯಾನ್ ಕಾರ್ಡ್ ಹೊಂದಿದ್ದರೆ, ಹಲವಾರು ವೆಬ್ ಸೈಟ್ ಗಳಲ್ಲಿ ಆನ್ ಲೈನ್ ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ವಿವರಗಳು ಲಭ್ಯವಿರುತ್ತವೆ. 

ಮೊದಲ ಬಾರಿ ಅರ್ಜಿ ಸಲ್ಲಿಸುವವರಿಗಾಗಿ ಅನುಸರಿಸುವ ಹಂತಗಳು. 

ನೀವು ಈಗಾಗಲೇ ಭೌತಿಕ ಪ್ಯಾನ್ ಕಾರ್ಡ್ ಹೊಂದಿರದಿದ್ದರೆ, ಇ-ಪ್ಯಾನ್ ಕಾರ್ಡ್ ಗಾಗಿ UTIISL ಅಥವಾ NSDL ವೆಬ್ ಸೈಟ್ ನಲ್ಲಿ ನೀವು ಅರ್ಜಿ ಸಲ್ಲಿಸಬಹುದು.

ದಯವಿಟ್ಟು ಈ ಕೆಳಿಗಿನ ಆನ್ ಲೈನ್ ಹಂತಗಳನ್ನು ಅನುಸರಿಸಿ 

  • ನಿಮ್ಮ ಅರ್ಜಿಯನ್ನು ಬರ್ತಿಮಾಡಿರಿ
  • ನಿಮ್ಮ ವಿಳಾಸ ಮತ್ತು ಗರುತನ್ನು ಪರಿಶೀಲಿಸಲು ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿ
  • ಪೂರ್ಣಗೊಂಡ ಅರ್ಜಿ ಸಲ್ಲಿಸಿ
  • ಭೌತಿಕ ಪ್ಯಾನ್ ಅಥವಾ ಇ-ಪ್ಯಾನ್ ನಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದುದಾಗಿದೆ.
  • ಇ-ಪ್ಯಾನ್ ಆಯ್ಕೆಯನ್ನು ಆರಿಸಿಕೊಳ್ಳಿ
  • KYC ಆನ್ ಲೈನ್ ಹಾಗೂ ಎಲೆಕ್ಟ್ರಾನಿಕ್ ಸಹಿಯೊಂದಿಗೆ ನೀವು ಇ-ಪ್ಯಾನ್ ಪಡೆಯಲು ಒಮ್ಮೆ ಸಲ್ಲಿಸುವ ಅರ್ಜಿ ದರ ರೂ. 66. ಭೌತಿಕ ಪ್ಯಾನ್ ಗಾಗಿ ರೂ. 72 ಶುಲ್ಕವಿದೆ.
  • ಒಂದು ಬಾರಿ ನೀವು ಡಾಕ್ಯುಮೆಂಟ್ ಸಲ್ಲಿಸಿದರೆ, ಆನ್ ಲೈನ್ ಮೂಲಕ ಶುಲ್ಕ ಪಾವತಿಸ ಬೇಕಾಗುವುದು.
  • ಪ್ರಕ್ರಿಯೆ ಪೂರ್ಣಗೊಂಡರೆ 10-15 ದಿನಗಳಲ್ಲಿ ನಿಮ್ಮ ಮೇಲ್ ವಿಳಾಸಕ್ಕೆ ಇ-ಪ್ಯಾನ್ ಕಳುಹಿಸಲಾಗುವುದು.   

ಹಲವಾರು ವೆಬ್ ಸೈಟ್ ಗಳಿಂದ ಇ-ಪ್ಯಾನ್ ಡೌನ್ ಲೋಡ್ ಮಾಡಲು ಮಾರ್ಗದರ್ಶನ 

ನೀವು UTIISL ವೆಬ್ ಸೈಟ್, NSDL ಪೋರ್ಟಲ್ ಅಥವಾ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಸೇರಿದಂತೆ ಹಲವಾರು ವೆಬ್ ಸೈಟ್ ಗಳಿಂದ ಇ-ಪ್ಯಾನ್ ಕಾರ್ಡ್ ಅನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. 

UTIISL ವೆಬ್ ಸೈಟ್ 

UTIISL ನಿಂದ ಇ-ಪ್ಯಾನ್ ಡೌನ್ ಲೋಡ್ ಮಾಡಿಕೊಳ್ಳಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು

  • UTIISL website ಗೆ ಹೋಗಿ. 'Apply for PAN card' ಆಯ್ಕೆ ಮಾಡಿ.
  • ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ
  • ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ತಂದೆಯ ಹೆಸರು, ಆಧಾರ ಕಾರ್ಡ್ ಸಂಖ್ಯೆಯಂತಹ ಇನ್ನಿತರ ವಿವರಗಳನ್ನು ಭರ್ತಿ ಮಾಡುವ ಅಗತ್ಯವಿದೆ.
  • ನಿಮ್ಮ ಸ್ಕ್ಯಾನ್ ಮಾಡಿದ ಸಹಿ ಮತ್ತು ಫೋಟೊ ಅಪ್ ಲೋಡ್ ಮಾಡಿ
  • ನಿಮ್ಮ ನೋಂದಾಯಿತ ಇಮೇಲ್ ವಿಳಾಸ ಮತ್ತು ಫೋನ್ ನಂಬರ್ ಗೆ ಒಂದು ಬಾರಿ (OTP) ಪಾಸ್ ವರ್ಡ್ ಕಳುಹಿಸಲಾಗುವುದು.
  • OTP ಎಂಟರ್ ಮಾಡಿ
  • ನೀವು ಇ-ಪ್ಯಾನ್ ಕಾರ್ಡ್ ಎಂಟರ್ ಮಾಡಬಹುದು. 

NSDL ಪೋರ್ಟಲ್ 

NSDL portalಯಿಂದ ಇ-ಪ್ಯಾನ್ ಡೌನ್ ಲೋಡ್ ಡೌನ್ ಲೋಡ್ ಮಾಡಲು ಎರಡು ಆಯ್ಕೆಗಳಿವೆ. ಸ್ವೀಕೃತಿ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆಯಲ್ಲಿ ಯಾವುದರೂ ಒಂದನ್ನು ಆಯ್ಕೆ ಮಾಡಿ. 

ಸ್ವೀಕೃತ ಸಂಖ್ಯೆ

  • 30 ದಿನಗಳವರೆಗೆ ಮಾನ್ಯವಾದ ಸ್ವೀಕೃತ ಸಂಖ್ಯೆಯನ್ನು ಎಂಟರ್ ಮಾಡಿ
  • ಜನ್ಮ ದಿನಾಂಕವನ್ನು ಎಂಟರ್ ಮಾಡಿ
  • ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
  • 'submit' ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಇ-ಮೇಲ್ ವಿಳಾಸ ಅಥವಾ ಮೊಬೈಲ್ ಫೋನ್ ನಲ್ಲಿ ನೀವು ಒಂದು ಬಾರಿ- ಪಾಸ್ ವರ್ಡ್ ಸ್ವೀಕರಿಸುತ್ತೀರಿ
  • OTP ಎಂಟರ್ ಮಾಡಿ ಮತ್ತು ನಿಮ್ಮ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ

ಪ್ಯಾನ್ 

  • ಪ್ಯಾನ್ ಮತ್ತು ಆಧಾರ್ ಸಂಖ್ಯೆ ಎಂಟರ್ ಮಾಡಿ
  • ನಿಮ್ಮ ಜನ್ಮ ದಿನಾಂಕವನ್ನು ಒದಗಿಸಿ
  • ನೀವು GST ಸಂಖ್ಯೆ ಹೊಂದಿದ್ದರೆ,ಅದನ್ನು ಕೂಡಾ ಸೇರಿಸಬಹುದು
  • ಘೋಷಣೆಯನ್ನು ಓದಿರಿ, 'submit' ಕ್ಲಿಕ್ ಮಾಡಿ
  • ಎಲ್ಲ ಗೈಡ್ ಲೈನ್ಸ್ ಗಳಿಗೆ ಟಿಕ್ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಎಂಟರ್ ಮಾಡಿ.
  • 'submit' ಮೇಲೆ ಕ್ಲಿಕ್ ಮಾಡಿ
  • ನೋಂದಾಯಿತ ಇಮೇಲ್ ವಿಳಾಸ ಅಥವಾ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTPಯನ್ನು ನಮೂದಿಸಿ.
  • ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ

ಆದಾಯ ತೆರಿಗೆ ವೆಬ್ ಸೈಟ್ ದಿಂದ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ 

  • ಸ್ಕ್ರೀನ್ ಕೆಳ ಭಾಗದಲ್ಲಿ 'Instant E-PAN' ಮೇಲೆ ಕ್ಲಿಕ್ ಮಾಡಿ
  • 'Get New E-PAN ಕಾರ್ಡ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಎಂಟರ್ ಮಾಡಿ ಮತ್ತು ಕೆಳಗಿನ ಸೂಚನೆಗಳನ್ನು ಅನುಸರಿಸಿ
  • ಅಗತ್ಯವಿರುವ ಎಲ್ಲ ವಿವರಗಳನ್ನು ಎಂಟರ್ ಮಾಡಿ
  • OTP ಎಂಟರ್ ಮಾಡಿ ನಿಮ್ಮ ವಿವರಳನ್ನು ದೃಢೀಕರಿಸಿ
  • ನಿಮ್ಮ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ

ಅರ್ಜಿ ಸಲ್ಲಿಸಿದ ನಂತರ 30 ದಿನಗಳೊಳಗೆ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಬಹುದು. 30 ದಿನಗಳ ನಂತರ ಅರ್ಜಿ ಶುಲ್ಕವನ್ನು ಪಾವತಿಸ ಬೇಕಾಗುವುದು. ನಿಮ್ಮ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಮಾಡಿದರೆ ನಿಮ್ಮ ಜನ್ಮ ದಿನಾಂಕ ನಿಮ್ಮ ಆಧಾರ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಇ-ಪ್ಯಾನ್ ಸಂಖ್ಯೆಯನ್ನು ಡೌನ್ ಲೋಡ್ ಮಾಡಬಹುದು.  

ಕೆಲವು ಅನಿಶ್ಚಿತ ಘಟನೆಗಳಲ್ಲಿ ನಿಮ್ಮ ಇ-ಪ್ಯಾನ್ ಕಾರ್ಡ್ ಪಡೆಯುವುದು

  • ನೀವು ಪ್ಯಾನ್ ಕಾರ್ಡ್ ಕಳೆದುಕೊಂಡರೆ ನಂಬರ್ ನೆನಪಿಟ್ಟುಕೊಂಡು NSDL ಅಥವಾ UTIISL ವೆಬ್ ಸೈಟ್ ನಿಂದ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಬಹುದು. ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಲು UTIISL ಕೂಪನ್ ಒದಗಿಸುತ್ತದೆ. ನಿಮ್ಮ ಪ್ರತಿಯನ್ನು ಡೌನ್ ಲೋಡ್ ಮಾಡುವ ಸ್ವೀಕೃತಿ ಸಂಖ್ಯೆಯನ್ನು NSDL ಒದಗಿಸುತ್ತದೆ.  
  • ನೀವು ಪ್ಯಾನ್ ಕಾರ್ಡ್ ಉಲ್ಲೇಖವನ್ನು ಹೊಂದಿಲ್ಲದಿದ್ದರೆ, ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿರುವ “Know Your PAN” ದಿಂದ ನಿಮ್ಮ ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿ. 
  • ಯಾವುದೇ ಮೊಬೈಲ್ ಅಪ್ಲಿಕೇಷನ್ ದಿಂದ ನಿಮ್ಮ ಇ-ಪ್ಯಾನ್ ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. 
  • ಇ-ಪ್ಯಾನ್ ಕಾರ್ಡ್ ಗಳ ಉಚಿತ ಡೌನ್ ಲೋಡ್ ಸೌಲಭ್ಯವನ್ನು 30 ದಿನಗಳವರೆಗೆ ಕಲ್ಪಿಸಲಾಗಿದೆ. ಅದಾದ ನಂತರ ಪ್ರತಿ ಡೌನ್ ಲೋಡ್ ಗೆ ರೂ. 8.26 ಶುಲ್ಕ ವಿಧಿಸಲಾಗುತ್ತದೆ. 

ಪ್ರಮುಖ ಅಂಶಗಳು 

ಇ-ಪ್ಯಾನ್ ಕಾರ್ಡ್ ಬೌತಿಕ ಪ್ಯಾನ್ ಕಾರ್ಡ್ ನಂತೆಯೇ ವೈಶಿಷ್ಟ್ಯಗಳು ಮತ್ತು ಅನುಕೂಲಗಳನ್ನು ಹೊಂದಿವೆ. ಇದನ್ನು ತೆರಿಗೆ ಉದ್ದೇಶಗಳಿಗಾಗಿ, ಬ್ಯಾಂಕಿಂಗ್ ಮತ್ತು ಯಾವುದೇ ಇತರ ಹಣಕಾಸು ಹೂಡಿಕೆ ಮಾಡಲು ಬಳಸಬಹುದು.ಇ-ಪ್ಯಾನ್ ಕಾರ್ಡ್ ಅನುಕೂಲಕರವಾಗಿದ್ದು , ಬಳಸಲು ಸುಲಭವಾಗಿದೆ. ಪ್ಯಾನ್ ಕಾರ್ಡ್ ಗಳು ಕಡ್ಡಾಯವಾಗಿರುವುದರಿಂದ ಇ-ಪ್ಯಾನ್ ಕಾರ್ಡ್ ಪಡೆಯಲು ನಾವು ಎಲ್ಲ ಔಪಚಾರಿಕತೆಗಳನ್ನು ಬೇಗನೆ ಪೂರ್ಣಗೊಳಿಸಬೇಕು. ಮೇಲೆ ತಿಳಿಸಿದ ಪ್ರಕ್ರಿಯೆಗಳನ್ನ ಅರ್ಥಮಾಡಿಕೊಳ್ಳಲು ನಿಮಗೆ ಹೆಚ್ಚಿನ ಸಹಾಯ ಬೇಕಾದರೆ, ಪೀರಾಮಲ್ ಫೈನಾನ್ಸ್ ನಲ್ಲಿರುವ ತಜ್ಞರನ್ನು ಸಂಪರ್ಕಿಸಿ. ಈ ಆನ್ ಲೈನ್ ಪ್ಲಾಟ್ ಫಾರ್ಮ್ ನೀವು ಹಣಕಾಸಿನ ಜಗತ್ತಿನಲ್ಲಿ ಸಂಬಂಧಿತ ಬೆಳವಣಿಗೆಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಎಲ್ಲವನ್ನೂ ಕಲಿಯಬೇಕಾಗುತ್ತದೆ. ಹಣಕಾಸಿನ ವಿಷಯಗಳ ಕುರಿತು ಅಥವಾ personal loans, ಕ್ರೆಡಿಟ್ ಕಾರ್ಡ್ ಗಳು ಮತ್ತು ಹಣಕಾಸು ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪೆರಿಮಲ್ ವೆಬ್ ಸೈಟ್ ನಲ್ಲಿ ಬ್ಲಾಗ್ ಗಳನ್ನು ಪರಿಶೀಲಿಸಿ! 

;