Education

ಆನ್ ಲೈನ್ ನಲ್ಲಿ ಹೊಸ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

Planning
19-12-2023
blog-Preview-Image

ಆಧಾರ್ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಗಿದ್ದು, ಇದನ್ನು ಭಾರತದ ನಿವಾಸಿಗಳು ತಮ್ಮ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾ ಆಧಾರದ ಮೇಲೆ ಪಡೆಯಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಡೇಟಾವನ್ನು ಸಂಗ್ರಿಹಿಸುತ್ತದೆ. ಇದು ಭಾರತದಲ್ಲಿ ಎಲ್ಲಿಯಾದರೂ ಗುರುತು ಮತ್ತು ವಿಳಾಸಗಳ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಭಾರತದಲ್ಲಿ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಪಡೆಯಲು ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಇದು ವಿಶ್ವಾಸಾರ್ಹ ಮತ್ತು ಸುರಕ್ಷಿತ ಮಾರ್ಗವೆಂದು ಪರಿಗಣಿಸಲಾಗಿದೆ. 

ಆಧಾರ್ ಕಾರ್ಡ್ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅತ್ಯಂತ ಸುಲಭ. ಆಧಾರ್ ಕಾರ್ಡ್ ಗಾಗಿ ನೋಂದಾಯಿಸಲು ಬಯಸುವ ನಿವಾಸಿಗಳು Udiai ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಬಹುದು. ಈ ಎಲ್ಲ ಪ್ರಕ್ರಿಯೆಗೆ 10-15 ನಿಮಿಷಗಳು ಬೇಕಾಗುವುದು. 

ಆಧಾರ್ ಕಾರ್ಡ್ ಹೊಂದುವುದು ಏಕೆ ಮಹತ್ವದ್ದಾಗಿದೆ? 

ಆಧಾರ್ ಕಾರ್ಡ್ ಹೊಂದುವುದರಿಂದ ಹಲವಾರು ಪ್ರಯೋಜನಗಳಿದ್ದು, ಕೆಲವನ್ನು ಈ ಕೆಳಗೆ ಕೊಡಲಾಗಿದೆ: 

  1. ವ್ಯಕ್ತಿಗಳನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತದೆ: ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿ ಅಗತ್ಯವಿರುವ ಎಲ್ಲಾ ಮಾಹಿತಿಗಳು ಒಳಗೊಂಡಿರುತ್ತವೆ. ಯಾರಾದರೂ ಈ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಬಹುದು. ಇದು ವ್ಯಕ್ತಿಯನ್ನು ಗುರುತಿಸಲು ಸುಲಭವಾಗುತ್ತದೆ. 
  1. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ: LPG ಸಬ್ಸಿಡಿ, MNREGA ದಂತಹ ಹಲವಾರು ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಹೊಂದಿದೆ. ಆಧಾರ್ ಕಾರ್ಡ್ ಹೊಂದಿದ್ದರೆ ಈ ಸವಲತ್ತುಗಳನ್ನು ವ್ಯಕ್ತಿಗಳು ಪಡೆಯಬಹುದಾಗಿದೆ. 
  1. ಬ್ಯಾಂಕ್ ವ್ಯವಹಾರಗಳಿಗೆ ಸಹಾಯವಾಗುತ್ತದೆ: ಬ್ಯಾಂಕ್ ಖಾತೆಯನ್ನು ತೆರೆಯುವಾಗ ಅಥವಾ ಯಾವುದೇ ಇರತರ ಬ್ಯಾಂಕಿಂಗ್ ವಹಿವಾಟು ನಡೆಸುವಾಗ ಆಧಾರ್ ಕಾರ್ಡ್ ಅನ್ನು KYC ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ದಾಖಲೆಯಾಗಿ ಬಳಸಬಹುದು. 
  1. ಮೊಬೈಲ್ ಫೋನ್ ಸಂಪರ್ಕಕ್ಕೆ ಸಹಾಯವಾಗುತ್ತದೆ: ಭಾರತೀಯ ದೂರುಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ಹೊಸ ಮಾರ್ಗಸೂಚಿಗಳ ಪ್ರಕಾರ ಒಬ್ಬ ವ್ಯಕ್ತಿಯು ಮೊಬೈಲ್ ಸಂಖ್ಯೆಯನ್ನು ಒಂದು ಆಧಾರ್ ದೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೊಸ ಸಿಮ್ ಕಾರ್ಡ್ ಖರೀದಿಸುವಾಗ ಅಥವಾ ಅಸ್ತಿತ್ವದಲ್ಲಿರುವ ಸಂಖ್ಯೆಯ ಸಿಮ್ ಪರಿಶೀಲನೆ ಮಾಡುವಾಗ 12-ಅಂಕಿಯ ಆಧಾರ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. 
  1. ಪಾಸ್ ಪೋರ್ಟ್ ಪಡೆಯಲು ಸಹಾಯ ಮಾಡುತ್ತದೆ: ವಿದೇಶಾಂಗ ವ್ಯವಹಾರಗಳ ಹೊಸ ಮಾರ್ಗ ಸೂಚಿಗಳ ಪ್ರಕಾರ, ತಮ್ಮ ಪಾಸ್ ಪೋರ್ಟ್ ದೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಹೊಸ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಮತ್ತು ಈಗಾಗಲೇ ಪಡೆದಿರುವುದನ್ನು ನವೀಕರಿಸುವಾಗ ಆಧಾರ್ ಕಾರ್ಡಿನ 12 ಅಂಕಿಗಳನ್ನು ಒದಗಿಸಬೇಕಾಗುತ್ತದೆ. 

ಇವುಗಳಲ್ಲದೇ ಆಧಾರ್ ಕಾರ್ಡ್ ಹೊಂದಿರುವುದರಿಂದ ನಾವು ಹಲವಾರು ಸವಲತ್ತುಗಳನ್ನು ಪಡೆಯಬಹುದಾಗಿದೆ. ಹರಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಟಾನಗೊಳಿಸುವಲ್ಲಿ ವೈಯಕ್ತಿವಾಗಿ ಮತ್ತು ಸರ್ಕಾರಕ್ಕೆ ಸಹಾಯಕವಾಗಿದೆ. 

ಆನ್ ಲೈನ್ ನಲ್ಲಿ ಹೊಸ ಆಧಾರ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ:

ಆನ್ ಲೈನ್ ನಲ್ಲಿ ಹೊಸ ಆಧಾರ್ ಕಾರ್ಡ್ ಗೆ ಅರ್ಜಿಸ ಸಲ್ಲಿಸುವುದು ತುಂಬಾ ಸುಲಭ. ನೀವು UIDAIಯ ಅಧಿಕೃತ ವೆಬ್ ಸೈಟ್ ಗೆ ನೀವು ಭೇಟಿ ನೀಡಬೇಕಾಗುವುದು ಮತ್ತು ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಬಹುದು. 

  1. https://uidai.gov.in/ ಗೆ ಹೋಗಿ 
  1. ‘Aadhaar Online Services’ಸೇವಾ ಟ್ಯಾಬ್ ಅಡಿಯಲ್ಲಿ ‘Enrolment’ ಆಯ್ಕೆ ಮಾಡಿ
  1. ಹೊಸ ಪೇಜ್ ಓಪನ್ ಆಗುವುದು. ಅಲ್ಲಿ ನೀವು ಹೆಸರು, ವಿಳಾಸ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಇತ್ಯಾದಿ ಅಗತ್ಯ ವಿವರಗಳನ್ನು ಎಂಟರ್ ಮಾಡಬೇಕಾಗುವುದು. 
  1. ನೀವು ಎಲ್ಲ ಅಗತ್ಯ ವಿವರಳನ್ನು ಎಂಟರ್ ಮಾಡಿದ ನಂತರ ‘Submit’ ಮೇಲೆ ಕ್ಲಿಕ್ ಮಾಡಿ
  1. ಬೆರಳಚ್ಚುಗಳು ಮತ್ತು ಐರಿಸ್ ಸ್ಕ್ಯಾನ್ ದಂತಹ ಬಯೋಮೆಟ್ರಿಕ್ ವಿವರಗಳನ್ನು ನೀವೀಗ ಭರ್ತಿ ಮಾಡುವ ಅಗತ್ಯತೆ ಇದೆ.   
  1. ಒಂದು ಬಾರಿ ನೀವು ಬಯೋಮೆಟ್ರಿಕ್ ವಿವರಗಳನ್ನು ಒದಗಿಸಿದ ನಂತರ ಸ್ವೀಕೃತಿ ಸ್ಲಿಪ್ ಪಡೆಯುತ್ತೀರಿ
  1. ಈ ಸ್ವೀಕೃತಿ ಸ್ಲಿಪ್ ನೋಂದಣಿಯ ಸಂಖ್ಯೆಯನ್ನು ಆಧಾರ್ ಕಾರ್ಡ್ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಬಳಸಬಹುದು. 
  1. ಅರ್ಜಿ ಸಲ್ಲಿಸಿದ ದಿನಾಂಕದಿಂದ 60-90 ದಿನಗಳೊಳಗೆ ಆಧಾರ್ ಕಾರ್ಡ್ ನಿಮ್ಮ ನೋಂದಾಯಿತಿ ವಿಳಾಸಕ್ಕೆ ಬಂದು ಸೇರುವುದು. 

ಹೊಸ ಆಧಾರ್ ಕಾರ್ಡ್ ಪಡೆಯಲು ಯಾವ ಡಾಕ್ಯುಮೆಂಟ್ ಗಳ ಅಗತ್ಯತೆ ಇದೆ? 

ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಗುರುತು ಮತ್ತು ವಿಳಾಸದ ಪುರಾವೆಯ ಕೆಲವು ದಾಖಲೆಗಳನ್ನು ನೀವು ಒದಗಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಪಡೆಯಲು ಈ ಕೆಳಗೆ ದಾಖಲೆಗಳನ್ನು ಪಟ್ಟಿ ಮಾಡಲಾಗಿದೆ. 

  1. ಗುರುತಿನ ಪುರಾವೆ (POI) - ನಿಮ್ಮ ಪಾಸ್ ಪೋರ್ಟ್, ಪ್ಯಾನ್ ಕಾರ್ಡ್, ಓಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಇನ್ನಿತರ ದಾಖಲೆಗಳು ಆಗಿರಬಹುದು. 
  1. ವಿಳಾಸ ಪುರಾವೆ (POA) - ನಿಮ್ಮ ಪಡಿತರ ಚೀಟಿ. ಬ್ಯಾಕ್ ಸ್ಟೇಟ್ಮೆಂಟ್, ಯುಟಿಲಿಟಿ ಬಿಲ್ ಗಳು, ಇನ್ನಿತರವು ಆಗಿರಬಹುದು
  1. ಜನ್ಮ ದಿನದ ಪುರಾವೆ - ನಿಮ್ಮ ಜನನ ಪ್ರಮಾಣಪತ್ರ, 10 ನೇ ತರಗತಿಯ ಅಂಕ ಪಟ್ಟಿ ಆಗಿರಬಹುದು. 
  1. ಒಂದುವೇಳೆ ನೀವು ಮೇಲೆ ತಿಳಿದಲಾದ ಯಾವುದೇ ದಾಖಲೆ ಹೊಂದಿಲ್ಲದಿದ್ದರೆ, ನೀವು ಲೆಟರ್ ಹೆಡ್ ನಲ್ಲಿ ಗೆಜಿಟೆಡ್ ಅಧಿಕಾರಿ ಅಥವಾ ಗ್ರೂಪ್ ಎ ಗೆಜೆಟೆಡ್ ಅಧಿಕಾರಿಯಿಂದ ಸಹಿ ಮಾಡಿದ ಗರುತಿನ ಘೋಷಣೆಯನ್ನು ನಿಮ್ಮ ಭಾವಚಿತ್ರದೊಂದಿಗೆ ಸರಿಯಾಗಿ ದೃಢೀಕರಿಸಬಹುದು. 

ಆನ್ ಲೈನ್ ದಲ್ಲಿ ಆಧಾರ ಕಾರ್ಡ್ ಸ್ಟೇಟಸ್ ಹೇಗೆ ಚೆಕ್ ಮಾಡುವುದು? 

ಒಮ್ಮೆ ನೀವು ಆಧಾರ್ ಕಾರ್ಡ್ ಸಂಬಂಧ ಅರ್ಜಿ ಸಲ್ಲಿಸಿದರೆ, ನೀವು ಆನ್ ಲೈನ್ ಅರ್ಜಿಯ ಸ್ಟೇಟಸ್ ಪತ್ತೆಹಚ್ಚಬಹುದು. ಆನ್ ಲೈನ್ ನಲ್ಲಿ ಹೊಸ ಆಧಾರ್ ಕಾರ್ಡಿನ ಸ್ಥಿತಿಯನ್ನು ಪರೀಕ್ಷಿಸಲು ನೀವು ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:

  1. https://uidai.gov.in/ ಗೆ ಭೇಟಿ ನೀಡಿ
  1. ‘Aadhaar Online Services’ ಟ್ಯಾಬ್ ಅಡಿಯಲ್ಲಿ ‘Enrolment’ಆಯ್ಕೆ ಮಾಡಿ 
  1. ಮುಂದಿನ ಪೇಜ್ ನಲ್ಲಿ ‘Check Enrolment Status’ಅಡಿಯಲ್ಲಿ ‘Check Aadhaar Status’ ಆಯ್ಕೆ ಮಾಡಿ 
  1. ಸ್ವೀಕೃತಿ ಸ್ಲಿಪ್ ನಲ್ಲಿ ನಮೂದಿಸಿದ ನೋಂದಣಿ ಐಡಿ ಮತ್ತು ದಿನಾಂಕ/ ಸಮಯ / ಸ್ಟಾಂಪ್ ಸಮಯಕ್ಕೆ ನೀವು ನಮೂದಿಸುವ ಅಗತ್ಯವಿದೆ
  1. ಒಮ್ಮೆ ನೀವು ಅಗತ್ಯವಿರುವ ಎಲ್ಲ ವಿವರಗಳನ್ನು ನಮೂದಿಸಿದ ನಂತರ, ‘Check Status’ ಮೇಲೆ ಕ್ಲಿಕ್ ಮಾಡಿ. 
  1. ಆಧಾರ್ ಕಾರ್ಡ್ ಅರ್ಜಿಯ ಸ್ಟೇಟಸ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವುದು

ಆಧಾರ್ ಕಾರ್ಡ್ ಆನ್ ಲೈನ್ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಮತ್ತು ನೋಂದಾಯಿತ ವಿಳಾಸಕ್ಕೆ ತಲುಪಿಸಲು ಸಾಮಾನ್ಯವಾಗಿ 60-90 ದಿನಗಳು ಬೇಕಾಗುತ್ತದೆ. ಈ ಅವಧಿಯೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಸ್ವೀಕರಿಸದಿದ್ದರೆ, ಆಧಾರ್ ಕಾರ್ಡ್ ನ ಮರುಮುದ್ರಣವನ್ನು ಪಡೆಯಲು ನೀವು ಸ್ವೀಕೃತಿ ಚೀಟಯೊಂದಿಗೆ ಹತ್ತಿರದ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬಹುದು. 

ಹೊಸ ಆನ್ ಲೈನ್ ಇ-ಆಧಾರ್ ಕಾರ್ಡ್ ಹೇಗೆ ಡೌನ್ ಲೋಡ್ ಮಾಡುವುದು? 

ನೀವು ಇ-ಆಧಾರ್ ಕಾರ್ಡ್ ಪ್ರತಿಯನ್ನು ಡೌನ್ ಲೋಡ್ ಮಾಡಲು ಬಯಸಿದರೆ, ಈ ಕೆಳಗೆ ನಮೂದಿಸಿದಿ ಹಂತಗಳನ್ನು ಅನುಸರಿಸಬಹುದು: 

  1. https://uidai.gov.in/ ಗೆ ಬೇಟಿ ನೀಡಿ 
  1. ‘Aadhaar Online Services’ ಟ್ಯಾಬ್ ಅಡಿಯಲ್ಲಿ Enrolment’ಆಯ್ಕೆಡಿ
  1. ಮುಂದಿನ ಪುಟದಲ್ಲಿ ‘Get Aadhaar’ ಅಡಿಯಲ್ಲ ‘Download Aadhaar’ ಆಯ್ಕೆಮಾಡಿ. 
  1. ಸ್ವೀಕೃತಿ ಚಿಟಿಯಲ್ಲಿ ನಮೂದಿಸಲಾದ ನೀವು ದಾಖಲಾತಿ ಐಡಿ ಮತ್ತು ದಿನಾಂಕ/ ಸಮಯದ ಸ್ಟಾಂಪ್ ಎಂಟರ್ ಮಾಡುವುದು ಅಗತ್ಯವಿದೆ

ಅಗತ್ಯವಿರುವ ಎಲ್ಲ ವಿವರಗಳನ್ನು ನಮೂದಿಸಿದ ನಂತರ ‘Check Status' ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

  1. ಹೊಸ ಆಧಾರ್ ಕಾರ್ಡ್ ಆನ್ ಲೈನ್ ಅಪ್ಲಿಕೇಶನ್ ಸ್ಥಿತಿಯನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ.
  1. ನೀವು ಇ-ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿ ಮತ್ತು ಪ್ರತಿಯನ್ನು ಮುದ್ರಿಸಿ 

ಇ-ಆಧಾರ್ ಕಾರ್ಡ್ ನ ನಕಲನ್ನು ಡೌನ್ ಲೋಡ್ ಮಾಡಲು, ನಿಮಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯ ಅಗತ್ಯವಿದೆ ಎಂಬುದನ್ನು ಗಮನಿಸುವುದು ಮುಖ್ಯ. ಡೌನ್ ಲೋಡ್ ದೃಢೀಕರಿಲು OTP (ಒಂದು ಬಾರಿ ಪಾಸ್ ವರ್ಡ್) ಈ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಸಮಾರೋಪ

ಆಧಾರ್ ಭಾರತದ ನಿವಾಸಿಗಳು ಪಡೆಯಬಹುದಾದ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಇದು ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುವುದು, ಬ್ಯಾಂಕ್ ಖಾತೆಯನ್ನು ತೆರೆಯುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಬಳಸಬಹುದು. ಯಾರಾದರೂ ತಮ್ಮ ಹತ್ತಿರದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ವೆಬ್ ಸೈಟ್ ಬಳಸಿ ಆನ್ ಲೈನ್ ನಲ್ಲಿ ಆಧಾರ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. 

ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಹೆಚ್ಚಿನ ಸಹಾಯ ಬೇಕಾದರೆ ಪೀರಾಮಲ್ ಫೈನಾನ್ಸ್ ಗೆ ಭೇಟಿ ನೀಡಿ. ನೀವು ಹಣಕಾಸಿನ ವಿಷಯಗಳ ಕುರಿತು ಅಥವಾ personal loans, ಕ್ರೆಡಿಟ್ ಕಾರ್ಡ್ ಗಳು ಮತ್ತು ಹಣಕಾಸು ನಿರ್ವಹಣೆ ಕುರಿತ ಮಾಹತಿಯನ್ನು ಈ ಆನ್ ಲೈನ್ ಪ್ಲಾಟ್ ಫಾರ್ಮ್ ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ನಲ್ಲಿ ಬ್ಲಾಗ್ ಗಳನ್ನು ಪರಿಶೀಲಿಸಿ!

;