Education

ಇ-ಆಧಾರ್: ಎಲ್ಲವನ್ನೂ ನೀವು ತಿಳಿದುಕೊಳ್ಳುವುದು ಅಗತ್ಯ

Planning
19-12-2023
blog-Preview-Image

ಆಧಾರ್ ಎಂದರೇನು? ಇದು ಕೇವಲ 12-ಅಂಕಿಯ ಸಂಖ್ಯೆಯಾಗಿದ್ದು ಇದರ ಮೂಲಕ ಭಾರತದ ನಾಗರಿಕರಾಗಿ ನಿಮ್ಮನ್ನು ಗುರುತಿಸುತ್ತದೆ. ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದೆ. ಐರಿಸ್ ಸ್ಕ್ಯಾನ್ ಮತ್ತು ವ್ಯಕ್ತಿಯ ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಮಾಹಿತಿ ಮತ್ತು ಅವರ ಜನ್ಮ ದಿನಾಂಕ ಮತ್ತು ವಿಳಾಸದಂತಹ ಜನಸಂಖ್ಯಾ ಮಾಹಿತಿಯನ್ನು ಆಧರಿಸಿ ಇದನ್ನು ನೀಡಲಾಗುತ್ತದೆ. 

ಹಾಗಾದರೆ ಇ-ಆಧಾರ್ ಕಾರ್ಡ್ ಎಂದರೇನು? ಇದು ನಿಮ್ಮ ಭೌತಿಕ ಆಧಾರ್ ಕಾರ್ಡ್ ನ ಪಾಸ್ ವರ್ಡ್-ರಕ್ಷಿತ ಪ್ರತಿಯಾಗಿದ್ದು, UIDAI ಯ ಸಮರ್ಥ ಪ್ರಾಧಿಕಾರದಿಂದ ಡಿಜಿಟಲ್ ಸಹಿ ಮಾಡಲಾಗಿದೆ. ಇದು ನಿಮ್ಮ ಭೌತಿಕ ಆಧಾರ್ ಕಾರ್ಡ್ ಗೆ ಬದಲಾಗಿ ಅಲ್ಲ. ಆದರೆ ಇ-ಆಧಾರ್ ಡೌನ್ ಲೋಡ್ ಮಾಡಿದ ನಂತರ ಭೌತಿಕ ಆಧಾರ್ ಸ್ಥಳದಲ್ಲಿ ಬಳಸಬಹುದು. 

ಈ ಪ್ರಮುಖ ವೈಯಕ್ತಿಕ ಡಾಕ್ಯುಮೆಂಟ್ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಕೆಳಗಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ವಿವರಿಸಿದ್ದೇವೆ. ನೀವೇ ಆಧಾರ್ ಕಾರ್ಡ್ ಹೇಗೆ ಪಡೆಯುವುದು, ನೀವು ಅದಕ್ಕೆ ಅರ್ಹರಾಗಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು, ಇ-ಆಧಾರ್ ಕಾರ್ಡ್ ಹೇಗೆ ಡೌನ್ ಲೋಡ್ ಮಾಡುವುದು, ನಿಮ್ಮ ಆಧಾರ್ ಸಂಖ್ಯೆ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಪರಿಶೀಲಿಸುವುದು ಮತ್ತು ನೀವು ಅದನ್ನು ಕಳೆದುಕೊಂಡಾಗ ಏನು ಮಾಡಬೆಕು, ಇದನ್ನು ತಿಳಿದುಕೊಳ್ಳುಬೇಕಾದ ಎಲ್ಲವು ಇಲ್ಲಿದೆ. 

ಇ-ಆಧಾರ್ ಕಾರ್ಡ್ ಹೊಂದುವುದರಿಂದಾಗುವ ಪ್ರಯೋಜನಗಳು

  • ಪ್ರವೇಶಿಸುವಿಕೆ 

ಇ-ಆಧಾರ್ ಡೌನ್ ಲೋಡ್ ಮಾಡಿದ ನಂತರ, ಆನ್ ಲೈನ್ ಪ್ಲಾಟಫಾರ್ಮನಲ್ಲಿನ ಆಯೋಜನೆ ಮಾಡಲಾಗಿರುವುದರಿಂದ ಅಗತ್ಯವಿರುವಾಗ ಅದನ್ನು ಪ್ರವೇಶಿಸುವುದು ತುಂಬಾ ಸುಲಭ. ಅದನ್ನು ತಪ್ಪು ಸ್ಥಳದಲ್ಲಿರುವ ಕುರಿತು ಎಂದೂ ಚಿಂತಿಸಬೇಕಾಗಿಲ್ಲ. 

  • ಸುಲಭ ದಾಖಲಾತಿ ಪ್ರಕ್ರಿಯೆ: 

ಇ-ಆಧಾರ್ ಕಾರ್ಡ್ ನೊಂದಿಗೆ, ಹೊಸ ಪಾಸ್ ಪೋರ್ಟ್ ಪಡೆಯುವುದು ಅಥವಾ ಹೊಸ ಬ್ಯಾಂಕ್ ಖಾತೆಯನ್ನು ತರೆಯುವುದು ತುಂಬಾ ತ್ವರಿತ ಮತ್ತು ಸರಳವಾಗಿದೆ. ಈ ಕಾರ್ಯವಿಧಾನಗಳ ಸಮಯದಲ್ಲಿ ನೀವು ಹೆಚ್ಚಿನ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಏಕೆಂದರೆ ನಿಮ್ಮ ಇ-ಆಧಾರ್ ಕಾರ್ಡ್ ವಿವರವಾದ ಮಾಹಿತಿಯನ್ನು ಒಳಗೊಂಡಿದೆ.

ಅವು ಈ ಕೆಳಗಿನಂತಿವೆ:

  • ಹೆಸರು
  • ವಿಳಾಸ
  • ಲಿಂಗ
  • ಜನ್ಮ ದಿನಾಂಕ
  • ಫೋಟೊ
  • ಆಧಾರ್ ಸಂಖ್ಯೆ
  • UIDAIದಿಂದ ಡಿಜಿಟಲ್ ಸಹಿ 
  • ವಿಳಾಸ ಮತ್ತು ಐಡಿ ಪುರಾವೆ

ನಿಮ್ಮ ಇ-ಆಧಾರ್ ಕಾರ್ಡ್, ನಿಮ್ಮ ಭೌತಿಕ ಆಧಾರ್ ಕಾರ್ಡಿನಂತೆ ಗುರುತಿನ ಮತ್ತು ಪುರಾವೆಯಾಗಿ ಕಾರ್ಯನಿರ್ಹಿಸುತ್ತದೆ. 2000 ರ ಐಟಿ ಕಾಯ್ದೆಯ ಪ್ರಕಾರ ಡಿಜಿಟಲ್ ಸಹಿಯೊಂದಿಗೆ ಎಲೆಕ್ಟ್ರಿಕ್ ದಾಖಲೆಗಳನ್ನು ಕಾನೂನುಬದ್ಧವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ಇ-ಆಧಾರಕ್ಕೆ UIDAI ಡಿಜಿಟಲ್ ಸಹಿ ಮಾಡಿದ ದಾಖಲೆಯಾಗಿದೆ. 

  • ಭೌತಿಕ ಆಧಾರ ಕಾರ್ಡ್ ನ ಎಲ್ಲ ಪ್ರಯೋಜನಗಳು

ಇ-ಆಧಾರ್ ಕಾರ್ಡ್ ಗಳಿಂದ ನೀವು ಸರ್ಕಾರದಿಂದ ಪಡೆಯಬೇಕಾದ ಎಲ್ಲ ಸಬ್ಸಿಡಿಗಳನ್ನು ಹೊಂದಲು ನೀವು ಅರ್ಹರಾಗಿರುತ್ತೀರಿ.

ಎಲ್ಲ ಭೌತಿಕ ಆಧಾರ್ ಕಾರ್ಡ್ ಗಳಿಂದಾಗುವ ಪ್ರಯೋಜನಗಳು: ಉದಾಹರಣೆಗೆ ನಿಮ್ಮ ಅಕೌಂಟ್ ದೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ ನಂತರ ನಿಮ್ಮ LPG ಸಬ್ಸಿಡಿಯು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. 

ಇ-ಆಧಾರ್ ಕಾರ್ಡ್ ಹೇಗೆ ಪಡೆಯುವುದು 

ಇ-ಆಧಾರ್ ಕಾರ್ಡ್ ಪಡೆಯುವುದಕ್ಕಿಂತ ಮುಂಚೆ ನೀವು ಭೌತಿಕ ಆಧಾರ್ ಕಾರ್ಡ್ ಹೊಂದಿರಬೇಕು. ನಿಮಗೆ ಮಂಜೂರಾದ ನಂತರ UIDAI ವೆಬ್ ಸೈಟ್ ದಿಂದ ನಿಮ್ಮ ಇ-ಆಧಾರ್ ಕಾರ್ಡ್ ಅನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು. 

ಆಧಾರ್ ಕಾರ್ಡ್ ಪಡೆಯುವುದು ಹೇಗೆ 

ಆಧಾರ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲ ಡಾಕ್ಯುಮೆಂಟ್ ಗಳನ್ನು ಕಲೆಹಾಕಿ. ಗುರುತು, ವಿಳಾಸ, ಜನ್ಮದಿನಾಂಕ, ಕುಟುಂಬದ ಮುಖ್ಯಸ್ಥರೊಂದಿಗೆ ನೀವು ಹೊಂದಿರುವ ಸಂಬಂಧದ ಪುರಾವೆಗಳು ಬೇಕಾಗುತ್ತವೆ. 

ನಂತರ ನಿಮ್ಮ ನಿವಾಸಕ್ಕೆ ಸನಿಹ ಇರುವ ನೋಂದಣಿ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು. 

ನೀವು ಒದಗಿಸಿದ ಡಾಕ್ಯುಮೆಂಟ್ ಗಳು ಮತ್ತು ನಿಮ್ಮ ಬಯೊಮೆಟ್ರಿಕ್ ಮಾಹಿತಿಗಳು ಅನುಮೋದನೆ ಪಡೆದ ನಂತರ ನೀವು ಸ್ವೀಕೃತಿ ಪತ್ರವನ್ನು ಪಡೆಯುತ್ತೀರಿ. 

ನೀವು ಇಆಧಾರ್ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಸ್ವೀಕೃತಿ ಪತ್ರದಲ್ಲಿ ಪಡೆದ ಮಾಹಿತಿಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಸ್ಥಿತಿ ಪರೀಕ್ಷಿಸಬಹುದು. 

ಪಿಡಿಎಪ್ ಫೈಲ್ ಓಪನ್ ಮಾಡಲು ನಿಮ್ಮ ಮೊದಲ ಹೆಸರಿನ ನಾಲ್ಕು ಅಕ್ಷರಗಳನ್ನು ಒಳಗೊಂಡ ಪಾಸ್ ವರ್ಡ್ ಮತ್ತು (YYYY) ಮಾದರಿಯಲ್ಲಿ ನಿಮ್ಮ ಜನ್ಮ ವರ್ಷವನ್ನು ಎಂಟರ್ ಮಾಡುವ ಅಗತ್ಯತೆ ಇದೆ. 

ಇ-ಆಧಾರ್ ಹೇಗೆ ಡೌನ್ ಲೋಡ್ ಮಾಡುವುದು

ನಿಮ್ಮ ಇ-ಆಧಾರ್ ಡೌನ್ ಲೋಡ್ ಗೆ ಸಹಾಯವಾಗುವ ಹಂತಗಳ ಪಟ್ಟಿ ಈ ಕೆಳಗಿನಂತಿದೆ: 

  • ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಸಿದ್ಧವಾಗಿರಿಸಿಕೊಳ್ಳಿ
  • ಇತ್ತಿಚೆಗೆ ನೀವು ನಿಮ್ಮ ಆಧಾರ್ ಕಾರ್ಡ್ ನವೀಕರಿಸಿದ್ದರೆ ಅಥವಾ ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಈಗಲೂ ಆಧಾರ್ ಕಾರ್ಡ್ ಸಂಖ್ಯೆ ತಿಳಿದಿರದಿದ್ದರೆ, ನಿಮ್ಮ ಸ್ವೀಕೃತಿ ಪತ್ರದಲ್ಲಿನ ದಿನಾಂಕ ಮತ್ತು ಸಮಯದೊಂದಿಗೆ ನಿಮ್ಮ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. 
  • ಮುಂದುವರಿಯಲು ನಿಮ್ಮ VID, ನೋಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಪಿನ್ ಕೋಡ್ ಮತ್ತು ನಿಮ್ಮ ಆಧಾರ್ ಅರ್ಜಿಯಲ್ಲಿರುವ ಪೂರ್ಣ ಹೆಸರನ್ನು ಸೇರಿಸಿ. 
  • ಭದ್ರತಾ ಕೋಡ್ ನಮೂದಿಸುವ ಮೂಲಕ OTP ಗೆ ವಿನಂತಿಸಿ. 
  • OTP ಪಡೆದ ನಂತರ ಅದನ್ನು ನಿಗದಿಪಡಿಸಿದ ಸ್ಥಾನದಲ್ಲಿ ನಮೂದಿಸಿ. ನಂತರ ಇ-ಆಧಾರ್ ಡೌನ್ ಲೊಡ್ ಬಟನ್ ಕ್ಲಿಕ್ ಮಾಡಿ. 
  • ಇ-ಆಧಾರ್ ಡೌನ್ ಲೋಡ್ ಮಾಡಿದ ನಂತರ ಇ-ಆಧಾರ್ ಕಾರ್ಡ್ ಓಪನ್ ಮಾಡಲು ನಮ್ಮ ಮೊದಲ ಹೆಸರಿನ ಮೊದಲ ನಾಲ್ಕು ಅಕ್ಷರಗಳು ಮತ್ತು (YYYY) ಮಾದರಿಯಲ್ಲಿ ನಿಮ್ಮ ಜನ್ಮ ವರ್ಷವನ್ನು ಹೊಂದಿರುವ ಪಾಸ್ ವರ್ಡ್ ಅನ್ನು ನೀವು ನಮೂದಿಸುವ ಅಗತ್ಯತೆ ಇದೆ.

ಇ-ಆಧಾರ್ ಕುರಿತು ತಿಳಿದುಕೊಳ್ಳಲು ಇತರ ಅಂಶಗಳು 

ನೀವು ಇ-ಆಧಾರ್ ಕಾರ್ಡ್ ಎಲ್ಲಿ ಬಳಸಬಹುದು? 

ಸಮಯ ಉಳಿತಾಯಕ್ಕಾಗಿ ಮತ್ತು ಸುದೀರ್ಘ ದಾಖಲಾತಿ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ನೀವು ಇ-ಆಧಾರ್ ಕಾರ್ಡ್ ಬಳಸಬಹುದುದಾಗಿದೆ.

ಇ-ಆಧಾರ್ UIDAI ಡಿಜಿಟಲ್ ಸಹಿಮಾಡಿದ ದಾಖಲೆಯಾಗಿದೆ. 2000 ಆದಾಯ ತೆರಿಗೆ ಕಾಯ್ದೆ ಪ್ರಕಾರ, ಡಿಜಿಟಲ್ ಸಹಿಹೊಂದಿದ ಎಲೆಕ್ಟ್ರಾನಿಕ್ ದಾಖಲೆಗಳು ಕಾನೂನು ಸಮ್ಮತವಾಗಿವೆ. ಆದ್ದರಿಂದ ಭೌತಿಕ ಆಧಾರ್ ಕಾರ್ಡ್ ರೀತಿಯಲ್ಲೇ ಇ-ಆಧಾರ್ ಅಧಿಕೃತವಾದದ್ದು.

ಕೆಲವು ಸಾಮಾನ್ಯ ಉಪಯೋಗಗಳು:

  • ಬ್ಯಾಂಕ್ ಖಾತೆಯುನ್ನು ತೆರೆಯುವಾಗ ಗುರುತಿನ ಪುರಾವೆಯಾಗಿ ಬಳಕೆ
  • ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ
  • ಭಾರತೀಯ ರೈಲ್ವೆಯಲ್ಲಿ ಗುರುತಿನ ಪುರಾವೆಯಾಗಿ
  • LPG ಸಬ್ಸಿಡಿ ಪಡೆಯಲು
  • ನಿಮ್ಮ ಡಿಜಿಟಲ್ ಲಾಕರ್ ಪ್ರವೇಶಿಸಲು 

ಮಾಸ್ಕ್ಡ್ ಆಧಾರ್ ಕಾರ್ಡ್ 

ಹೆಸರೇ ಸೂಚಿಸುವಂತೆ “ಮಾಸ್ಕ್ಡ್ ಆಧಾರ್ ಕಾರ್ಡ್” ಆಧಾರ್ ಸಂಖ್ಯೆಯ ಒಂದು ಭಾಗವನ್ನು ಮರೆಮಾಚುತ್ತದೆ ಆದ್ದರಿಂದ ಅದನ್ನು ಇತರರಿಗೆ ಸಂಪೂರ್ಣವಾಗಿ ಬಹಿರಂಗ್ ಪಡಿಸಲಾಗುವುದಿಲ್ಲ. ಇದು ಕೂಡಾ ಆಧಾರ್ ಕಾರ್ಡ್ ರೀತಿಯೇ ಇರುತ್ತದೆ. 

ಆಧಾರ್ ಸಂಖ್ಯೆಯ ಮೊದಲ ಎಂಟು ಅಂಕೆಗಳನ್ನು “ಮಾಸ್ಕ್ಡ್ ಆಧಾರ್ ಕಾರ್ಡ್” ಅಡಿಯಲ್ಲಿ XXXX-XXXXಗಾಗಿ ಅಕ್ಷರಗಳನ್ನು ಬದಲಾಯಿಸುವ ಮೂಲಕ ಭಾಗಶಃ ಮರೆಮಾಡಲಾಗಿದೆ, ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಮಾತ್ರ ಗೋಚರಿಸುತ್ತವೆ. 

"E-Download Aadhaar" ವಿಭಾಗದ ಅಡಿಯಲ್ಲಿ ಮಾಸ್ಕ್ಡ್ ಆಧಾರ್ ಕಾರ್ಡ್ ಗಾಗಿ ಆಯ್ಕೆಯನ್ನು ಆರಿಸಿಕೊಳ್ಳವ ಮೂಲಕ ಅಧಿಕೃತ UIDAI ವೆಬ್ ಸೈಟ್ ದಿಂದ ಮಾಸ್ಕ್ಡ್ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು. 

mಆಧಾರ್ ಅಪ್ಲಿಕೇಶನ್

ಅಧಿಕೃತ ಆಧಾರ್ ಅಪ್ಲಿಕೇಶನ್ ಅಥವಾ mಆಧಾರ್ ಅಪ್ಲಿಕೇಶನ್ ಅನ್ನು UIDAI ಬಿಡುಗಡೆ ಮಾಡಿದೆ, ಇದು ಆಧಾರ್ ಹೊಂದಿದವರಿಗೆ ಅವರ ಜನಸಂಖ್ಯಾ ಮಾಹಿತಿ ಫೋಟೋವನ್ನು ಅವರ ಸ್ಮಾರ್ಟ್ ಫೋನ್ ಗಳಲ್ಲಿ ಸಾಗಿಸಲು ವೇದಿಕೆಯನ್ನು ನೀಡುತ್ತದೆ. ಇದು ಎಂಡ್ರಾಯ್ಡ್ ಫೋನ್ ಗಳಲ್ಲಿ ಪ್ರವೇಶಿಸಬಹುದು ಆದರೆ ಐಫೋನ್ ಗಳಲ್ಲಿ ಇಲ್ಲ.

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಪ್ರೊಫೈಲ್ ಗಳನ್ನು ಅಪ್ಲಿಕೇಶನ್ ಗೆ ಸೇರಿಸಬಹುದು ಮತ್ತು ಅವುಗಳನ್ನು ಯಾವುದೇ ಸ್ಥಳದಿಂದ ಪ್ರವೇಶಿಸಬಹುದು. 

ಸಮಾರೋಪ:

ಇದೀಗ ಇ-ಆಧಾರ್ ಕಾರ್ಡ್ ಕುರಿತಂತೆ ನೀಮಗೆ ಸರಿಯಾಗಿ ಅರ್ಥವಾಗುತ್ತದೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಹೇಗೆ ಬಳಸಿಕೊಳ್ಳುವುದು ಮತ್ತು ಇ-ಆಧಾರ್ ಕಾರ್ಡ್ ಹೇಗೆ ಡೌನ್ ಲೋಡ್ ಮಾಡಿಕೊಳ್ಳುವುದೆಂದು ತಿಳಿದುಕೊಳ್ಳುತ್ತೀರಿ. 

ಆಧಾರ್ ಕಾರ್ಡ್ ಕಳೆದುಕೊಂಡಾಗ ಚಿಂತೆಗೊಳಗಾದವರಿಗೆ ಇ-ಆಧಾರ್ ಕಾರ್ಡ್ ಅತ್ಯಂತ ಸೂಕ್ತ ಆಯ್ಕೆಯಾಗಿದೆ. ಆನ್ ಲೈನ್ ಪ್ಲ್ಯಾಟ್ಫಾರ್ಮ್ ನಲ್ಲಿ ಲಭ್ಯವಿರುವದನ್ನು ನೀವು ಸ್ಥಳಾಂತರಿಸುವುದು ಸಾಧ್ಯವಿಲ್ಲ. 

UIDAI ನ ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿ (CIDR) ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯಲ್ಲಿ ಎಲ್ಲಾ ಆಧಾರ್ ಹೊಂದಿರುವವರ ಡೇಟಾವನ್ನು ಹೊಂದಿದೆ. ಎಲ್ಲಾ ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ CIDR ಆಧಾರ್ ಡೇಟಾಬೇಸ್ ಎಂದಿಗೂ ರಾಜಿ ಮಾಡಿಕೊಂಡಿಲ್ಲ. 

ಅಥವಾ ಹೊಮ್ ಲೋನ್ ಸಹಾಯ ಬಯಸಿದರೆ, ಪೀರಾಮಲ್ ಫೈನಾನ್ಸ್‌ ನಂತಹ ತಜ್ಞರಿಂದ ನೀವು ಯಾವಾಗಲಾದರೂ ಸಹಾಯ ಪಡೆಯಬಹುದು.

;