Education

ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು: ಹಂತ ಹಂತದ ಮಾರ್ಗದರ್ಶಿ

Planning
19-12-2023
blog-Preview-Image

ಆಧಾರ 12-ಅಂಕಿಯ ವಿಶಿಷ್ಟ ಗುರುತಿನ ಸಂಸ್ಥೆಯನ್ನು ಹೊಂದಿದೆ ಮತ್ತು ನಿಮ್ಮನ್ನು ಹಲವು ವಿಧಗಳಲ್ಲಿ ಸಶಕ್ತಿಗೊಳಿಸಬಹುದು. ಇದು ಎಲ್ಲಾ ವಹಿವಾಟಗಳಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹಣಕಾಸಿನ ವಹಿವಾಟು ಮತ್ತು ವ್ಯವಹಾರವನ್ನು ಕೈಗೊಳ್ಳಲು ಸುಲಭಗೊಳಿಸುತ್ತದೆ. 

ಅದೇ ರೀತಿಯಾಗಿ ಐಟಿ ರಿಟರನ್ಸ್ ಸಲ್ಲಿಸಲು ಮತ್ತು ತೆರಿಗೆ ವಿನಾಯಿತಿಗಳನ್ನು ಕ್ಲೈಮ್ ಮಾಡಲು ಪ್ಯಾನ್ ಕಾರ್ಡ್ ಉಪಯುಕ್ತವಾಗಿದೆ. ಹೆಚ್ಚುವರಿಯಾಗಿ ಪ್ಯಾನ್ ಕಾರ್ಡ್ ಹೊಂದಿರುವವರು ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಈ ಡಾಕ್ಯುಮೆಂಟ್ ಗುರುತಿನ ಮಾನ್ಯ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ನಿಮ್ಮ ಆಧಾರ್ ಮತ್ತು ಪ್ಯಾನ್ ಉತ್ತಮ ಹಣಕಾಸು ವಿಭಾಗವನ್ನು ರಚಿಸಲು ಎರಡು ಅಗತ್ಯ ದಾಖಲೆಗಳಾಗಿವೆ. ಬಳಕೆದಾರರು ದೃಢೀರಣಕ್ಕೆ ಆಧಾರ್ ಕಾರ್ಡ್ ಅತ್ಯಗತ್ಯ ಮತ್ತು ನಕಲಿ ಗುರುತಿನ ಸೃಷ್ಟಿಯನ್ನು ತಡೆಯಬಹುದು. 

ಯಾರು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಲಿಂಕ್ ಮಾಡುವ ಅಗತ್ಯವಿಲ್ಲ? 

 1. ದೇಶದ ನಾಗರೀಕರಲ್ಲವರು 
 1. ಅನಿವಾಸಿ ಬಾರತೀರೆಂದು ವರ್ಗೀಕರಿಸಲ್ಪಟ್ಟವರು. 
 1. ಕಳೆದ ವರ್ಷ ಯಾವುದೇ ಸಮಯದಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದವರು.

ಪ್ಯಾನ್ ದೊಂದಿಗೆ ಆಧಾರ ಲಿಂಕ್ ಇಲ್ಲದಿದ್ದರೆ ಅಪಾಯಗಳು 

ಈ ಹಿಂದೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದೆಯೇ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದಾಗಿತ್ತು. 2017 ರಲ್ಲಿ ಸರ್ಕಾರವು ಎರಡು ದಾಖಲೆಗಳ ಲಿಂಕ್ ಜಾರಿಗೊಳಿಸಿತು. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಆರಂಭಿಕ ಗಡುವನ್ನು ಆಗಸ್ಟ್ 31, 2017 ಎಂದು ನಿಗದಿಪಡಿಸಲಾಯಿತು,ನಂತರ ಅದನ್ನು ಅದೇ ವರ್ಷದ  ಡಿಸೆಂಬರ್ 31 ರವರೆಗೆ  ವಿಸ್ತತರಿಸಾಯಿತು. ಡಿಜಿಟಲ್ ಬಳಕೆದಾರರ ಬೆಳೆಯುತ್ತಿರುವ ಆವರ್ತನ ಶ್ರೇಣಿಗೆ ಅನುಗುಣವಾಗಿ ಗಡುವನ್ನು ಮತ್ತೆ ವಿಸ್ತರಿಸಲಾಯಿತು. 

ಸಕ್ರಿಯ ಪ್ಯಾನ್ ಕಾರ್ಡ್ ಹೊಂದಿರದಿದ್ದರೆ ಆದಾಯ ತೆರಿಗೆ ಇಲಾಖೆಯು ರೂ.10,000 ವರೆಗೆ ದಂಡ ವಿಧಿಸಬಹುದು. ಆಧಾರ್ ದೊಂದಿಗೆ ಲಿಂಕ್ ಮಾಡದ ಕಾರಣ ಮಾರ್ಚ್ 2023 ರ ಅಂತ್ಯದ ನಂತರ ಪ್ಯಾನ್ ನಿಷ್ಕ್ರಿಯಗೊಂಡರೆ ಈ ದಂಡವನ್ನು ವಿಧಿಸಲಾಗುತ್ತದೆ. 


ನಿಮ್ಮ ಪ್ಯಾನ್ ಮತ್ತು ಆಧಾರ್ ಮಾರ್ಚ್ 2023 ರ ಅಂತ್ಯದೊದಳಗೆ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಶ್ಯೂನ್ ಅನೂರ್ಜಿತ ಎಂದು ಪರಿಗಣಿಸಲಾಗುತ್ತದೆ. ಒಮ್ಮೆ ಪ್ಯಾನ್ ಆಪರೇಟಿವ್ ಅಲ್ಲ ಎಂದು ಪರಿಗಣಿಸಿದರೆ ರಿಟರ್ನ್ಸ್ ಸಲ್ಲಿಸುವುದು, ಬ್ಯಾಂಕ್ ಖಾತೆ ತೆರೆಯುವುದು, ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವುದು, ವೀಸಾ ನವೀಕರಣ ಅಥವಾ ಡಿಮ್ಯಾಟ್ ಖಾತೆಯನ್ನು ತೆರೆಯುವಂತಹ ಅಗತ್ಯ ಆದಾಯ - ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ನಿಮಗೆ ಸಾದ್ಯವಾಗುವುದಿಲ್ಲ. 

ನನ್ನ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ನಾನೇನು ಮಾಡಬೇಕು? 

ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ನಿಮಗೆ ಈ ಕೆಳಗಿನವುಗಳ ಅಗತ್ಯತೆ ಇವೆ: 

 • ಮಾನ್ಯ ಆಧಾರ್ ಕಾರ್ಡ್ 
 • ಮಾನ್ಯ ಪ್ಯಾನ್ ಕಾರ್ಡ್ 
 • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಆಧಾರ್ ಮತ್ತು ಪ್ಯಾನ್ ಹೇಗೆ ಲಿಂಕ್ ಮಾಡುವುದು

ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ಭಾರತದ ಆದಾಯ ತೆರಿಗೆ ಇಲಾಖೆಯು ನೇರ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಅದರ ಹಂತಗಳು ಇಲ್ಲಿವೆ: 

 1. ಆದಾಯ ತೆರಿಗೆ ಪೋರ್ಟಲ್ ಗೆ ಭೇಟಿ ನೀಡಿ ಮತ್ತು ಎಡಭಾಗದಲ್ಲಿ ಮೆನ್ಯುಗೆ ಹೋಗಿ. 'Link Aadhaar' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಲು ಪೇಜ್ ತೆರೆದುಕೊಳ್ಳುತ್ತದೆ, ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿನ ನಿಮ್ಮ ಹೆಸರು ಅದೇರೀತಿ ಆಧಾರ್ ಸಂಖ್ಯೆಯನ್ನು ನೀವು ಎಂಟ್ರಿ ಮಾಡಬಹುದು. 
 2. ಈ ವಿವರಗಳನ್ನು ಸಲ್ಲಿಸಿದ ನಂತರ ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ. ವಿವರಗಳನ್ನು ಖಚಿತಪಡಿಸಿಕೊಳ್ಳಲು ಒಂದು ಸರಿಯಾದ ರೀತಿಯಲ್ಲಿ ಒಂದು ಸಣ್ಣ ಪರಿಶೀಲನೆ ನಂತರ, ಲಿಂಕ್ ಮಾಡುವಿಕೆ ಪೂರ್ಣಗೊಳ್ಳುವುದು. ನಂತರ ನೀವು ಆಧಾರ್ ಮತ್ತು ಪ್ಯಾನ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಲು ಮಂದುವರಿಯಬಹುದು. 
 3. ಭಾಷೆಯ ವ್ಯತ್ಯಾಸಗಳು ಮತ್ತು / ಅಥವಾ ಹೆಸರು ಬದಲಾವಣೆಗೆ ತಪ್ಪಿದ ತಿದ್ದುಪಡಿಗಳ ಕಾರಣ ನಿಮ್ಮ ಆಧಾರ್ ಮತ್ತು ಪ್ಯಾನ್ ನಲ್ಲಿರುವ ಹೆಸರಿನ ನಡುವೆ ಹೊಂದಾಣಿಕೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಧಾರ್ OTP ಪರಿಶೀಲನೆಯು ಡಾಕ್ಯುಮೆಂಟ್ ಲಿಂಕ್ ಮಾಡುವಿಕೆಯನ್ನು ಪೂರ್ಣಗೊಳಿಸುವುದನ್ನು ಖಚಿತ ಪಡಿಸಿಕೊಳ್ಳಲು ಈ ಹೊಂದಾಣಿಕೆ ಮಾಡುವುದನ್ನು ಕಡೆಗಣಿಸಲಾಗಿದೆ ಎಂಬುದ ಖಚಿತ ಪಡುತ್ತದೆ.  

ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಪರ್ಯಾಯ ಪದ್ಧತಿ 

ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ: 

 1. ನಿಮ್ಮ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನಿಮ್ಮ ಖಾತೆಯನ್ನು ಲಾಗಿನ್ ಮಾಡಿ. ನಿಮಗೆ ನಿಮ್ಮ ಪಾಸ್ ವರ್ಡ್ ನೆನಪಿಲ್ಲದಿದ್ದರೆ ಅದೇ ಪುಟದಲ್ಲಿ ಇದನ್ನು ನೀವು ಮರು ಹೊಂದಿಸಬಹುದು. ಪೋರ್ಟಲ್ ನಲ್ಲಿ ನೀವು ಇದುವರೆಗೂ ನೋಂದಾಯಿಸಿರದಿದ್ದರೆ ಈ ಕೆಳಗಿನ ಮಾರ್ಗ ಸೂಚಿಯನ್ನು ಮೂಲಕ ನೋಂದಣಿ ಮಾಡಬಹುದಾಗಿದೆ. 
 1. ಒಮ್ಮೆ ನೀವು ಲಾಗಿನ್ ಆದರೆ ನಿಮ್ಮ ಆಧಾರ್ ಮತ್ತು ಪ್ಯಾನ್ ಖಾತೆಗಳಿಗಾಗಿ ವಿನಂತಿಸಲಾಗುತ್ತದೆ. ಒಂದುವೇಳೆ ನೀವು ಪಾಪ್-ಅಪ್ ಸ್ವೀಕರಿಸದಿದ್ದರೆ ಪಾಪ್-ಅಪ್ ಸಕ್ರಿಯಗೊಳಿಸಲು ನಿಮ್ಮ ಬ್ರೌಸರ್ ನಲ್ಲಿ 'profile settings' ಆಯ್ಕೆ ಮೇಲೆ ಕ್ಲಿಕ್ ಮಾಡಿ. 
 1. ಒಮ್ಮೆ ನೀವು 'Link Aadhaar' ಮೇಲೆ ಕ್ಲಿಕ್ ಮಾಡಿದರೆ,ವಿವರಗಳನ್ನು ಎಂಟರ್ ಮಾಡಿ, ನಿಮ್ಮ ಖಾತೆಗೆ ಲಿಂಕ್ ಮಾಡಲಾದ ನಿರ್ಗಮನ ಮಾಹಿತಿಯನ್ನು ಪರಿಶೀಲಿಸಿ. 
 1. ಒಮ್ಮೆ ಪರಿಶೀಲನೆ ಪೂರ್ಣಗೊಂಡ ನಂತರ ಅಂತಿಮ ಹಂತಕ್ಕಾಗಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪರಿಶೀಲನೆ ಕೋಡ್ ಎಂಟರ್ ಮಾಡಿ. ಡಾಕ್ಯುಮೆಂಟ್ ಗಳನ್ನು ಲಿಂಕ್ ಮಾಡಲು 'Link Now' ಮೇಲೆ ಕ್ಲಿಕ್ ಮಾಡಿ. 

ನಿಮ್ಮ ಆಧಾರ್ ಮತ್ತು ಪ್ಯಾನ್ ಯಶಸ್ವಿಯಾಗಿ ಲಿಂಕ್ ಆಗಿವೆ ಎಂದು ಪಾಪ್-ಅಪ್ ಖಾತ್ರಿ ಪಡಿಸುತ್ತದೆ. 

SMS ಮೂಲಕ ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ

SMS ಮೂಲಕ ನೀವು ಕೂಡಾ ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬಹುದು. ಕೆಳಗಿನ ಸಂದೇಶಗಳನ್ನು 567678 or 56161 ಗೆ ಕಳುಹಿಸಿ.   

UIDPAN ನಂತರ ಒಂದು ಸ್ಪೇಸ್, ನಿಮ್ಮ 12-ಡಿಜಿಟ್ ಆಧಾರ ಸಂಖ್ಯೆ, ಮತ್ತೆ ಒಂದು ಸ್ಪೇಸ್ ಬಿಡಿ, ಮತ್ತು ಅಂತಿಮವಾಗಿ ನಿಮ್ಮ 10 ಅಂಕಿಯ ಪ್ಯಾನ್ 

UIDPAN<ಸ್ಪೇಸ್ ><12 ಡಿಜಿಟ್ ಆಧಾರ್ ><ಸ್ಪೇಸ್ ><10 ಡಿಸಿಟ್ ಪ್ಯಾನ್>

ಕೆಳಗೆ ಒಂದು ಉದಾಹರಣೆ ನೀಡಲಾಗಿದೆ: 

UIDPAN 121233223322 AAAAAE456E

ಆಧಾರ್ ಮತ್ತು ಪ್ಯಾನ್ ಲಿಂಕ್ ಪ್ರಯೋಜನಗಳು 

ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ.  

 1. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದರಿಂದ ಆದಾಯವನ್ನು ಮರೆಮಾಚಲು ಯಾವುದೇ ರೀತಿಯ ನಕಲಿ ಪ್ಯಾನ್ ಕಾರ್ಡ್ ದುರ್ಬಳಕೆ ಗಣನೀಯ ಪ್ರಮಾಣದಲ್ಲಿ ಹತೋಟೆಗೆ ಬರುವುದು.ಇದು ಹಣ ದುರುಪಯೋಗವನ್ನು ತಡೆಯುತ್ತದೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.     
 1. ಆಸ್ತಿ ವ್ಯವಹಾರಗಳು, ಬ್ಯಾಂಕ್ ಖಾತೆಗಳನ್ನು ತೆರೆಯುವುದು, ವ್ಯಾಪಾರ ವ್ಯವಹಾರಗಳು ಮತ್ತು ಸಾಲಗಳನ್ನು ಪಡೆಯುವುದು ಮುಂತಾದ ಎಲ್ಲಾ ವಹಿವಾಟುಗಳಿಗೆ 12- ಅಂಕಿಯ ಆಧಾರ್ ಐಡಿ ಅತ್ಯಗತ್ಯ. ಆಧಾರ್ ದೊಂದಿಗೆ ಪ್ಯಾನ್ ಲಿಂಕ್ ಮಾಡುವುದರಿಂದ ನಿಮ್ಮ ಎಲ್ಲಾ ವಹಿವಾಟಿನ ವಿವರಗಳನ್ನು ಒಂದೇಕಡೆಗೆ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ ಎಂದು ಖಚಿತಪಡಿಸುತ್ತದೆ.
 1. ಒಂದಕ್ಕಿಂತ ಹೆಚ್ಚು ಪ್ಯಾನ್ ಖಾತೆಗಳನ್ನು ಹೊಂದಿರುವ ಬಳಕೆದಾರರು ಮನಿಲಾಂಡರಿಂಗ್ ನಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಪ್ಯಾನ್ ಮತ್ತು ಆಧಾರ್ ಖಾತೆಗಳನ್ನು ನವೀಕರಿಸಿದ ನಂತರ ಅಂತಹ ಚಟುವಟಿಕೆಗಳ ಸಾಧ್ಯತಯು ಗಣನೀಯವಾಗಿ ಕಡಿಮೆಯಾಗುತ್ತದೆ. 
 1. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಕಾನೂನು ರೀತಿಯಲ್ಲಿ ತೆರಿಗೆ ರಿಟರ್ನ್ ಮತ್ತು ಇತರ ಸಂಬಂಧಿತ ಚಟುವಟಿಕೆಗಳನ್ನು ಸಲ್ಲಿಸುವಲ್ಲಿ ಪ್ರಯೋಜನಕಾರಿಯಾಗಿದೆ. 

ಮುಂದಿನ ಹಂತಗಳು 

ಗರಿಷ್ಠ ಪ್ರಯೋಜನಗಳನ್ನು ಪಡೆಯಲು ನಿಮ್ಮ ಆಧಾರ್ ಮತ್ತು ಪ್ಯಾನ್ ಖಾತೆಗಳನ್ನು ತಕ್ಷಣವೇ ಲಿಂಕ್ ಮಾಡಿ. ನಿಮ್ಮ ವಹಿವಾಟುಗಳು ಸುರಕ್ಷಿತವಾಗಿರುವುದರೊಂದಿಗೆ ನೀವು ಉತ್ತಮ ಬಂಡವಾಗಳನ್ನು ಗಳಿಸಬಹುದು. ಪೀರಾಮಲ್ ಫೈನಾನ್ಸ್ ದೊಂದಿಗೆ ಸಂಪರ್ಕದಲ್ಲಿರಿ. ನೀವು ಹೊಂದಿರುವ ಯಾವುದೇ ಇತರ ಹಣಕಾಸು ಸಂಬಂಧಿತ ವ್ಯವಹಾರಕ್ಕೆ ಪೀರಾಮಲ್ ನಿಮಗೆ ಮಾರ್ಗದರ್ಶನ ನೀಡಬಹುದು. ಪೀರಾಮಲ್ ಫೈನಾನ್ಸ್ ವೆಬ್ ಸೈಟ್ ನಲ್ಲಿ ಹೆಚ್ಚು ಸಂಬಂಧಿತ ಬ್ಲಾಗ್ ಗಳನ್ನು ಓದಿ ಅಥವಾ ವೈಯಕ್ತಿಕ ಸಾಲಗಳು, ಕ್ರೆಡಿಟ್ ಕಾರ್ಡ್ ಗಳು ಮತ್ತು ಹಣಕಾಸು ಕ್ಯಾಲ್ಕುಲೇಟರ್ ಗಳಂತಹ  ಹಣಕಾಸು ಉತ್ಪನ್ನಗಳು ಮತ್ತು ಸೇವೆಯನ್ನು ಅನ್ವಯಿಸಿ.  

;