How To?

ಆಧಾರದೊಂದಿಗೆ ಪ್ಯಾನ್ ಲಿಂಕ್ ಮಾಡಲು ಸಂಪೂರ್ಣ ಮಾರ್ಗದರ್ಶಿ

Personal Finance
19-12-2023
blog-Preview-Image

ಆದಾಯ ತೆರಿಗೆ ಇಲಾಖೆಯ ಅಧಿಸೂಚನೆಯ ಪ್ರಕಾರ ಆದಾಯ ತೆರಿಗೆ ವರದಿಗಳನ್ನು ಸಲ್ಲಿಸು ಆಧಾರ್ ಕಾರ್ಡ್ ದೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಅವಶ್ಯಕತೆಯಿದೆ. ಆದಾಗ್ಯೂ, ಆದಾಯ ತರಿಗೆ ರಿಟರ್ನ್ಸ್ ಲಿಂಕ್ ಮಾಡದೆಯೇ ಸಲ್ಲಿಸಬಹುದಾದರೂ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದ ಹೊರತು ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ಸ್ ಪ್ರತಿಕ್ರಿಯಿಸುವುದಿಲ್ಲ. 

ನೀವು ರೂ 50,000 ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಂಕಿಂಗ್ ವಹಿವಾಟು ಹೊಂದಿದ್ದರೆ ಆಧಾರದೊಂದಿಗೆ ನಿಮ್ಮ ಪ್ಯಾನ್ ಲಿಂಕ್ ಮಾಡುವುದು ಸಹ ಅಗತ್ಯವಾಗಿದೆ. ಆದಾಯ ತೆರಿಗೆ ರಿಟರನ್ಸ್ ಸಲ್ಲಿಸಲು ಮತ್ತು ಜವಾಬ್ದಾರಿಯುತ ನಾಗರೀಕರಾಗಿ ಇತರ ಪ್ರಯೋಜನಗಳನ್ನು ಪಡೆಯಲು, ಆಧಾರಗಳೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ನಿರ್ಣಾಯಕ ಹಂತವಾಗಿದೆ. 

ಆಧಾರದೊಂದಿಗೆ ಪ್ಯಾನ್ ಲಿಂಕ್ ಮಾಡಲು ಗಡುವು

ಮಾರ್ಚ್, 31, 2023 ರವರೆಗೆ ಆಧಾರ್ ಮತ್ತು ಶಾಶ್ವತ ಖಾತೆ ಸಂಖ್ಯೆಗಳನ್ನು (PAN) ಲಿಂಕ್ ಮಾಡಲು ಸರ್ಕಾರವು ಗಡುವನ್ನು ವಿಸ್ತರಿಸಿದೆ. ಹಿಂದಿನ ಮುಕ್ತಾಯ ದಿನಾಂಕವು ಮಾರ್ಚ್ 31, 2022 ಆಗಿತ್ತು.ಆದಾಗ್ಯೂ ,ಜನರು ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಮಾರ್ಚ್ 31, 2022ರೊಳಗೆ ಲಿಂಕ್ ಮಾಡಲು ವಿಫಲವಾದರೆ ದಂಡ ವಿಧಿಸಲಾಗುವುದು. 

ಎಪ್ರಿಲ್ 1, 20222 ಮತ್ತು 30 ಜೂನ್ 2022ರ ನಡುವೆ ಪ್ಯಾನ್ ಮತ್ತು ಆಧಾರ ಲಿಂಕ್ ಮಾಡದಿದ್ದರೆ ರೂ.500ದಂಡ ವಿಧಿಸಲಾಗುತ್ತದೆ. ಜುಲೈ 1, 2022 ರಂತೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದಿದ್ದರೆ ರೂ.1000 ದಂಡವಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಆಧಾರ್ ದೊಂದಿಗೆ ಪ್ಯಾನ್ ಲಿಂಕ್ ಮಾಡಲು ಎರಡು ಆಯ್ಕೆಗಳನ್ನು ಒದಿಗಿಸಿದೆ. ಅವುಗಳು ಈ ಕೆಳಗಿನಂತಿವೆ: 

 1. ಇ-ಫೈಲಿಂಗ್ ವೆಬ್ ಸೈಟ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್
 1. 56161 ಅಥವಾ 567678ಗೆ SMS ಕಳುಹಿಸುವ ಮೂಲಕ

ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ ಮೂಲಕ ಆಧಾರ್ ದೊಂದಿಗೆ ಪ್ಯಾನ್ ಕಾರ್ಡ್ ಹೇಗೆ ಲಿಂಕ್ ಮಾಡುವುದು? 

ಆದಾಯ ತೆರಿಗೆ ಇ-ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ನಿಮ್ಮ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ನೀವು ಬಯಸಿದರೆ, ನೀವು ಕೆಲವು ಸಾಮಾನ್ಯ ಹಂತಗಳನ್ನು ಅನುಸರಿಸಬೇಕು. ಆನ್ ಲೈನ್ ಪ್ರಕ್ರಿಯೆಯು ತೊಂದರೆ ಮುಕ್ತ ಮತ್ತು ಸಮಯದ ಉಳಿತಾಯಕ್ಕೆ ಸಹಾಯಕವಾಗಿದ್ದು, ಕೆಳಗೆ ನಮೂದಿಸಿದ ಲಿಂಕ್ ಮಾಡುವ ಪ್ರಕ್ರಿಯಗಳನ್ನು ಅನುಸರಿಸಬೇಕು. 

ಹಂತ 1: ಆಧಾರ್ ಕಾರ್ಡ್ ದೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಅಧಿಕೃತ Income Tax Site ಗೆ ಭೇಟಿ ನೀಡಿ. 

ಹಂತ 2:  "Quick Links" ಗೆ ಹೋಗಿ ಮತ್ತು "Link Aadhaar "ಆಯ್ಕೆ ಮಾಡಿ. 

ಹಂತ 3: ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಆಧಾರ್ ನಲ್ಲಿ ಕಾಣಿಸಿಕೊಳ್ಳುವ ಹೆಸರು ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ನಮೂದಿಸಿ. ಆಧಾರ್ ಕಾರ್ಡ್ ಜನ್ಮ ವರ್ಷವನ್ನು ಮಾತ್ರ ಹೊಂದಿದ್ದರೆ ಬಾಕ್ಸ್ ಗುರುತಿಸಿ ಮತ್ತು ನಿಮ್ಮ ಆಧಾರ್ ಮಾಹಿತಿಯನ್ನು ಪರಿಶೀಲಿಸಲು ನೀವು ಸಮ್ಮತಿಸಿದರೆ ಚೌಕ್ ಅನ್ನು ಗುರುತಿಸಿರಿ ಮತ್ತು ನಿಮ್ಮ ಆಧಾರ್ ಮಾಹಿತಿಯನ್ನು ಪರಿಶೀಲಿಸಲು ನೀವು ಸಮ್ಮತಿಸಿದರೆ ಚೌಕ್ ಅನ್ನು ಗುರುತಿಸಿರಿ. ನಂತರ "Link Aadhar" ಆಯ್ಕೆ ಮಾಡಿ

ಹಂತ 4: ಅರ್ಜಿಯನ್ನು ಪೂರ್ಣಗೊಳಿಸಲು ಕ್ಯಾಪ್ಚಾ ಕೋಡ್ ಟೈಪ್ ಮಾಡಿ. (ದೃಷ್ಟಿ ಸಮಸ್ಯೆಯನ್ನು ಹೊಂದಿದುವ ಬಳಕೆದಾರರು ಕ್ಯಾಪ್ಚಾ ಕೋಡ್ ಸ್ಥಾನದಲ್ಲಿ OTP ಯನ್ನು ಮನವಿಮಾಡಬಹುದು.) 

SMS ವೈಶಿಷ್ಟ್ಯವನ್ನು ಬಳಸಿಕೊಂಡು ಆಧಾರ್ ಜೊತೆ ಪ್ಯಾನ್ ಹೇಗೆ ಲಿಂಕ್ ಮಾಡುವುದು

ಆಧಾರ್ ದೊಂದಿಗೆ ಪ್ಯಾನ್ ಲಿಂಕ್ ಮಾಡಲು ನೀವು SMS ವೈಶಿಷ್ಠವನ್ನು ಬಳಸಿಕೊಳ್ಳಬಹುದು. ಅನುಸರಿಸಬೇಕಾದ ಹಂತಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. 

ಹಂತ 1: ನಿಮ್ಮ ಮೊಬೈಲ್ ಸಾಧನದಲ್ಲಿ ಮಾತ್ರ, ನಿಮ್ಮ UIDPAN (12-ಡಿಜಿಟ್ ಆಧಾರ್, 10-ಡಿಜಿಟ್ ಪ್ಯಾನ್) ಎಂಟರ್ ಮಾಡಿ. 

ಹಂತ 2: ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಯಶಸ್ವಿಯಾಗಿ ಲಿಂಕ್ ಮಾಡಲು 567678 ಅಥವಾ 56161 ಕಳುಹಿಸಿರಿ.

ಎರಡೂ ಡಾಕ್ಯುಮೆಂಟ್ ಗಳನ್ನು ಯಶಸ್ವಿಯಾಗಿ ಲಿಂಕ್ ಮಾಡಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವ  ವಿಧಾನ

ತಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಪ್ರಯತ್ನಿಸುವಾಗ ಹೆಚ್ಚಿನ ಜನರು ಆಗಾಗ್ಗೆ ಎರಡರ ನಡುವಿನ ಮಾಹಿತಿಯ ಹೊಂದಾಣಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೆಸರುಗಳು, ಜನ್ಮ ದಿನಾಂಕಗಳು ಮತ್ತು ಜನ್ಮ ವರ್ಷಗಳಂತಹ ನಿರ್ಣಾಯಕ ಮಾಹಿತಿಯು ಎರಡು ದಾಖಲೆಗಳ ನಡುವೆ ಹೊಂದಾಣಿಕೆಯಾಗದಿದ್ದರೆ, ಲಿಂಕ್ ಮಾಡುವುದು ಸಮಸ್ಯೆಯಾಗಬಹುದು. 

ಹೊಂದಿಕೆಯಾಗುವ ರೀತಿಯಲ್ಲಿ ಆಧಾರ್ ಗೆ ತಿದ್ದುಪಡಿಗಳನ್ನು ಮಾಡಲು ಮತ್ತು ಮಾಹಿತಿಯನ್ನು ನವೀಕರಿಸಲು ಸರಳವಾದ ಮಾರ್ಗವಾಗಿದೆ. ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಲಿಂಗ, ಮೊಬೈಲ್ ಫೋನ್ ಸಂಖ್ಯೆ ಮತ್ತು ಭಾಷೆ ಎಲ್ಲವನ್ನೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬದಲಾಯಿಸಬಹುದು. ಯಾವುದೇ ಇತರ ತಿದ್ದುಪಡಿಗಳನ್ನು ಮಾಡಲು ನೀವು ಹತ್ತಿರದ ಆಧಾರ್ ನೋಂದಣಿ ಅಥವಾ ನವೀಕರಣ ಕೇಂದ್ರಕ್ಕೆ ಬೇಟಿ ನೀಡಿ. 

ವೆಬ್ ಸೈಟ್ ಬಳಸಿಕೊಂಡು ಆಧಾರ ಕಾರ್ಡ್ ಗೆ ತಿದ್ದುಪಡಿ ಮಾಡಲು ಈ ಕೆಳಗೆ ಹಲವಾರು ಹಂತಗಳನ್ನು ನೀಡಲಾಗಿದೆ. 

 1. ಅಧಿಕೃತ UIDAI ವೆಬ್ ಸೈಟ್ ಗೆ ಭೇಟಿ ನೀಡಿ. 
 1. ನಿಮ್ಮ ಖಾತೆಗೆ ಪ್ರವೇಶಿಸಲು 12-ಡಿಜಿಟ್ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಎಂಟರ್ ಮಾಡಿ. 
 1. "OTP" ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ "OTP" ಯೊಂದಿಗೆ ನೋಂದಣಿ ಮಾಡಿದ ಸಂಖ್ಯೆಯನ್ನು ಒದಗಿಸಲಾಗುವುದು. 
 1. "OTP" ಯನ್ನು ಎಂಟರ್ ಮಾಡಿದ ನಂತರ submit ಬಟನ್ ಪ್ರೆಸ್ ಮಾಡಿ. 
 1. ನವೀಕರಿಸಲು ಅಗತ್ಯವಿರುವ ಆಧಾರ್ ಕಾರ್ಡ್ ಕ್ಷೇತ್ರಗಳನ್ನು ಆಯ್ಕೆಮಾಡಿ. 
 1. ಬೆಂಬಲಿತ ಡಾಕ್ಯುಮೆಂಟ್ ಗಳ ಸ್ಕ್ಯಾನ್ ಇರಿಸಿಕೊಳ್ಳಿ ಏಕೆಂದರೆ ಅವುಗಳನ್ನು ಅಪ್ ಲೋಡ್ ಮಾಡಬೇಕಾಗುವುದು. 
 1. ಹಿಂದಿನ ಹಂತವು ಪೂರ್ಣಗೊಂಡ ನಂತರ URN (ಅಪ್ಡೇಟ್ ವಿನಂತಿ ಸಂಖ್ಯೆ) ಸೃಷ್ಟಿಸಲಾಗುವುದು. ನಂತರದ ಪ್ರಕ್ರಿಯೆಗೆ ಇದು ಅಗತ್ಯವಾಗಿದೆ) 
 1. ಹೊಸ ಮಾಹಿತಿಯೊಂದಿಗೆ ಒಮ್ಮೆ ಆಧಾರ್ ಪಡೆದ ನಂತರ ಅದರ ಮೂಲ ಪ್ರತಿಯನ್ನು ಪಡೆಯಬಹುದು. 

ಆಫ್ ಲೈನ್ ವಿಧಾನ ಬಳಸಿಕೊಂಡು ತಿದ್ದುಪಡಿ ಮಾಡಲು ಈ ಕೆಳಗಿನ ಹಂತಗಳು: 

 1. UIDAI ವೆಬ್ ಸೈಟ್ ಗೆ ಭೇಟಿ ನೀಡಿ, Resources ಮೇಲೆ ಕ್ಲಿಕ್ ಮಾಡಿ, ನಂತರ Enrollment Docs ಆಯ್ಕೆ ಮಾಡಿ ಮತ್ತು ಅದಾದ ನಂತರ ಆಧಾರ್ ತಿದ್ದುಪಡಿ ಅರ್ಜಿಯನ್ನು ಡೌನ್ ಲೋಡ್ ಮಾಡಿ. 
 1. ಬದಲಾಯಿಸಬೇಕಾದ ಅಗತ್ಯವಿರುವ ಮಾಹಿತಿಯನ್ನು ಪೂರ್ಣಗೊಳಿಸಿ 
 1. ಮಾಡಲೇ ಬೇಕಾದ ಯಾವುದೇ ಬದಲಾವಣೆಗೆ ಸಂಬಂಧಿಸಿದ ಸೂಕ್ತವಾದ ಪೋಷಕ ಡಾಕ್ಯುಮೆಂಟೇಷನ್ ಅನ್ನು ಸೇರ್ಪಡೆ ಮಾಡಬೇಕು. 
 1. ತಿದ್ದುಪಡಿ ಮಾಡಲಾದ ಅರ್ಜಿಯನ್ನು ಈ ವಿಳಾಸಕ್ಕೆ ಫಾರ್ವರ್ಡ್ ಮಾಡಬೇಕು: UIDAI, ಪೋಸ್ಟ್ ಬಾಕ್ಸ್ ನ. 99, ಬಂಜಾರಾ ಹಿಲ್ಸ್, ಹೈದ್ರಾಬಾದ್, ಭಾರತ, 500034.

ಪ್ಯಾನ್ ಕಾರ್ಡ್ ತಿದ್ದುಪಡಿ ಮಾಡಬೇಕಾದರೆ, ನೀವು ಕೆಳಿಗಿನ ಹಂತಗಳನ್ನು ಅನುಸರಿಸಿ: 

 1. ಪ್ಯಾನ್ ಕಾರ್ಡ್ ತಿದ್ದುಪಡಿ ಮಾಡಲು Protean eGov Technologies Limited ಗೆ ಭೇಟಿ ನೀಡಿ. 
 1. ಡ್ರಾಪ್ ಡೌನ್ ಮೆನ್ಯುದಿಂದ "Change or Correction in PAN Card" ಆಯ್ಕೆ ಮಾಡಿ. 
 1. ಕಾಣಿಸಿಕೊಳ್ಳುವ ಹೊಸ ಪೇಜ್ ನಲ್ಲಿ "Apply for Change or Correction in PAN Card Details" ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಪೂರ್ಣಗೊಳಿಸಿ, 
 1. ಆನ್ ಲೈನ್ ಪದ್ಧತಿಯಲ್ಲಿ ನಮೂದಿಸಿರುವ ಯಾವುದೇ ಅರ್ಜಿಯನ್ನು ಬಳಸಲು ಹಣ ಪಾವತಿ ಮಾಡಿ. 
 1. ನಂತರ ಸ್ವೀಕೃತಿಯನ್ನು ಪ್ರೋಟೀನ್ ಇ-ಗವರ್ಮೆಂಟ್ ಟೆಕ್ನಾಲಜೀಸ್ ಲಿಮಿಟೆಡ್ ಕಚೇರಿಗೆ ಮೇಲ್ ಮಾಡುವ ಮೊದಲು ನೀವು ಮುದ್ರಿಸಬೇಕು. ಗುರುತು, ವಿಳಾಸ ಮತ್ತು ಜನ್ಮ ದಿನಾಂಕದ ಪುರಾವೆಗಳಂತಹ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಮೇಲ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ನೀವು ಸ್ವೀಕೃತಿಯನ್ನು ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬೇಕು:
 • ಆದಾಯ ತೆರಿಗೆ ಪ್ಯಾನ್ ಸೇವೆಗಳ ಘಟಕ (ಪ್ರೋಟೀನ್ ಇಗೋವ್ ಟೆಕ್ನಾಲಜೀಸ್ ಆಧಾಯ ತೆರಿಗೆ ಪ್ಯಾನ್ ಸೇವೆಗಳ ಘಟಕ (ಪ್ರೋಟೀನ್ ಇ-ವರ್ಮೆಂಟ್ ಟೆಕ್ನಾಲಜೀಸ್ ಲಿಮಿಟೆಡ್ ನಿಂದ ನಿರ್ವಹಿಸುತ್ತದೆ), 5 ನೇ ಮಹಡಿ , ಮ್ಯಾಂಟ್ರಿ ಸ್ಟರ್ಲಿಂಗ್ , ಪ್ಲಾಟ್ ಸಂಖ್ಯೆ. 341, ಸರ್ವೆ ಸಂಖ್ಯೆ. 997/8, ಮಾಡೆಲ್ ಕಾಲೋನಿ, ಡೀಪ್ ಬಂಗಲೆ ಚೌಕ್ ಹತ್ತಿರ, ಪುಣೆ-416011 

ಸಮಾರೋಪ

ದೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದರಿಂದ ಭವಿಷ್ಯಲ್ಲಿ ಯಾವುದೇ ದಂಡವಿಲ್ಲದೇ ಆದಾಯ ತೆರಿಗೆ ರಿಟರ್ನ್ ಗಳನ್ನು ಸಲ್ಲಿಸುವಲ್ಲಿ ನಿರ್ಣಾಯಕ ಹಂತವಾಗಿದೆ. ಆಧಾರ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ನೀವು ಆನ್ ಲೈನ್ ಅಥವಾ ಆಫ್ ಲೈನ್ ವಿಧಾನವನ್ನು ಅನುಸರಿಸಬೇಕು. ಏಕೆಂದರೆ ಇದು ತೆರಿಗೆ ಫೈಲಿಂಗ್ ನ ಸಂಕ್ಷಿಪ್ತ ವಿವರಗಳನ್ನು ಮತ್ತು ಇತರ ಮಹತ್ವದ ಮಾಹಿತಿಯನ್ನು ನಿಮಗೆ ಒದಗಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಆದಾಯ ತೆರಿಗೆಯನ್ನು ತುಲನಾತ್ಮಕವಾಗಿ ಸುಲಭವಾಗಿ ಸಲ್ಲಿಸುತ್ತದೆ, ಏಕೆಂದರೆ ವೆಬ್ ಸೈಟ್ ಸ್ವಯಂಚಾಲಿತವಾಗಿ ಆಧಾರ ಕಾರ್ಡ್ ನಿಂದ ಅಗತ್ಯವಿರುವ ವಿವರಗಳನ್ನು ತೆಗೆದುಕೊಳ್ಳುತ್ತದೆ. ನೀವು ಹೊಂದಿರುವ ಯಾವುದೇ ಇತರ ಹಣಕಾಸು ಸಂಬಂಧಿತ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೀರಾಮಲ್ ನಿಮಗೆ ಮಾರ್ಗದರ್ಶನ ನೀಡಬಹುದು. ಅದರ ವೆಬ್ ಸೈಟ್ ನಲ್ಲಿ ಹೆಚ್ಚು ಸಂಬಂಧಿತ ಬ್ಲಾಗ್ ಗಳನ್ನು ಓದಿ, ಅಥವಾ ವೈಯಕ್ತಿಕ ಸಾಲಗಳು, ಕ್ರೆಡಿಟ್ ಕಾರ್ಡ್ ಗಳು ಮತ್ತು ಹಣಕಾಸಿನ ಕ್ಯಾಲ್ಕುಲೇಟರ್ ಗಳಂತಹ ಅವರ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಿ.

;