ಈ ನೀತಿಯು ಆರ್‌ಬಿಐ ಸುತ್ತೋಲೆ ರೆಸೊಲ್ಯಶನ್ ಫ್ರೇಮ್‌ವರ್ಕ್ 2.0ಯನ್ನು ಪಾಲಿಸುವಂತಿದೆ : ವೈಯಕ್ತಿಕ ಹಾಗೂ ಸಣ್ಣ ಉದ್ಯಮಗಳಿಗಾಗಿ ಕೋವಿಡ್-19ಗೆ ಸಂಬಂಧಿಸಿದ ಒತ್ತಡಕ್ಕಾಗಿ ರೆಸೊಲ್ಯೂಶನ್ (ದಿನಾಂಕ ಮೇ 5, 2021ರ DOR.STR.REC.11/21.04.048/2021-22). ರೆಸೊಲ್ಯೂಶನ್ ಪ್ಲಾನ್‌ನ ಕಾರ್ಯ ಸಾಧ್ಯತೆಯನ್ನು ಆರ್‌ಬಿಐ ವಿಧಿಸಿರುವ ಪ್ರುುಡೆನ್ಶಿಯಲ್ ಆಯಕಟ್ಟಿಗೆ ಅನ್ವಯಿಸಿ ಬೆಲೆಕಟ್ಟಲಾಗುತ್ತದೆ.

ರೆಸೊಲ್ಯೂಶನ್‌ಗಾಗಿ ಪರಿಗಣಿಸಲಾಗಬಹುದಾದ ಬಾಕಿ ಮೊಬಲಗು ಮತ್ತು ಸಾಲಕ್ಕಾಗಿ ರೆಫರೆನ್ಸ್‌ ದಿನಾಂಕ ಮಾರ್ಚ್ 31, 2021 ಆಗಿದೆ. ಇಷ್ಟಲ್ಲದೆ, ಪೀರಾಮಲ್ ಫೈನಾನ್ಸ್‌ನ ರಿಟೇಲ್ ಪೋರ್ಟ್‌ಲಿಯೊದಲ್ಲಿ ಆಗಾಗಲೇ ಇರುವ ಸಾಲಗಾರರಿಗೆ ಈ ನೀತಿ ಅನ್ವಯಿಸುತ್ತದೆ.

ಆರ್‌ಬಿಐ ಅವಕಾಶ ಕಲ್ಪಿಸಿರುವ ವಿಶೇಷ ಅನುಗ್ರಹವು ಕಡ್ಡಾಯವಾದ ವಿಶೇಷ ಅನುಗ್ರಹವಲ್ಲ, ಮತ್ತು ಪೀರಾಮಲ್ ಫೈನಾನ್ಸ್‌ ಈ ವಿಶೇಷ ಅನುಗ್ರಹವನ್ನು ನೀಡುವ ಮೊದಲು ಸಾಲಗಾರರ ಮೇಲೆ ಆಗಬಹುದಾದ ಪ್ರಭಾವವನ್ನು ಬೆಲೆಕಟ್ಟುತ್ತದೆ.

 • ಈ ನೀತಿಯ ಅಂತರ್ಗತ ಸಾಲ ಪಡೆಯುವವರು ತಾನಾಗಿಯೇ ವಿಶೇಷ ಅನುಗ್ರಹಕ್ಕೆ ಅರ್ಹರಾಗುವುದಿಲ್ಲ. ಪೀರಾಮಲ್ ನಿರ್ಮಿಸಿರುವ ಮಾನದಂಡಗಳಿಗೆ ತಕ್ಕಂತೆ ವಿಶೇಷ ಅನುಗ್ರಹವನ್ನು ಮಾನ್ಯ ಮಾಡಲಾಗುತ್ತದೆ.
 • ವಿಶೇಷ ಅನುಗ್ರಹದ ಮಂಜೂರಾತಿ/ತಿರಸ್ಕಾಾರ ನಿರ್ಧಾರವನ್ನು ಸಾಲ ಪಡೆಯುವವರಿಗೆ ಅರ್ಜಿ ತಲುಪಿದ ತಾರೀಖಿನಿಂದ 30 ದಿನಗಳ ಒಳಗೆ ಲಿಖಿತವಾಗಿ ತಿಳಿಸಲಾಗುತ್ತದೆ.

ಶೀರ್ಷಿಕೆ - ರೆಸೊಲ್ಯೂಶನ್ ಪ್ಲಾನ್‌ನ ಪ್ರಮುಖ ವೈಶಿಷ್ಟ್ಯಗಳು

ಸಾಲ ಪಡೆಯುವವರ ಆದಾಯ ಕ್ರಮವನ್ನು ಆಧರಿಸಿ, ರೆಸೊಲ್ಯೂಶನ್ ಪ್ಲಾನ್‌ನಲ್ಲಿ ಈ ಕೆಳಗಿನವು ಸೇರಿರಬಹುದು :

 • ಹಣದ ಪಾವತಿಗಳ ರೀಶೆಡ್ಯೂಲಿಂಗ್
 • ಒಟ್ಟುಗೂಡಿರಬಹುದಾದ ಅಥವಾ ಒಟ್ಟುಗೂಡುವ ಯಾವುದೇ ಬಡ್ಡಿಯನ್ನು ಇನ್ನೊಂದು ಸೌಲಭ್ಯವಾಗಿ ಪರಿವರ್ತಿಸುವುದು.
 • ಸ್ಥಗಿತತೆಯ ಮಂಜೂರಾತಿ
 • ಅವಧಿ ವಿಸ್ತರಣೆ

ಸೂಚನೆ :: ಈ ಉದ್ದೇಶಕ್ಕಾಗಿ ರೆಸೊಲ್ಯೂಶನ್ ಪ್ಲಾನ್‌ನ ರೂಪದಲ್ಲಿ ರಾಜಿಯ ತೀರ್ಮಾನಗಳಿಗೆ ಅವಕಾಶವಿಲ್ಲ.

ಅರ್ಹವಾಗಿರುವ ಸಾಲದ ಮಾದರಿ

ಕಂಪೆನಿಯ ರಿಟೇಲ್ ಡಿಪಾರ್ಟ್‌ಮೆಂಟ್‌ನಿಂದ (ಪೋರ್ಟೆಲಿಯೊ ಖರೀದಿಗಳ ಸಹಿತ) ಮೂಲವಾಗಿರುವ ಎಲ್ಲಾ ಸಾಲಗಳಿಗೆ ಈ ನೀತಿಯು ಅನ್ವಯಿಸುತ್ತದೆ. ಈ ನೀತಿಯು ಈ ಕೆಳಗಿನ ಮಾದರಿಯ ಸಾಲಗಳಿಗೆ ಅನ್ವಯಿಸುತ್ತದೆ.

 • ಹೌಸಿಂಗ್ ಲೋನ್ಸ್‌
 • ಬಿಸ್‌ನೆಸ್‌ನ ಉದ್ದೇಶಕ್ಕಾಗಿ ವ್ಯಕ್ತಿಗಳು ಪಡೆದಿರುವ ಸಾಲ
 • ಮೈಕ್ರೊ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್‌ಪ್ರೈಸ್‌ಗಳೆಂದು ವರ್ಗೀಕರಿಸಿದವುಗಳು ಅಲ್ಲದೆ, ರಿಟೇಲ್ ಹಾಗೂ ಹೋಲ್‌ಸೇಲ್ ಟ್ರೇಡ್‌ನಲ್ಲಿ ತೊಡಗಿರುವವುಗಳನ್ನು ಸೇರಿಕೊಂಡು ಸಣ್ಣ ಉದ್ಯಮಗಳಿಗೆ ನೀಡಲಾಗಿರುವ ಸಾಲಗಳು
 • ಆಟೊ ಲೋನ್ಸ್‌
 • ಪರ್ಸನಲ್ ಲೋನ್ಸ್‌
 • ಕನ್‌ಸ್ಯೂಮರ್ ಡ್ಯೂರೆಬಲ್ ಲೋನ್ಸ್‌

ಅರ್ಹ ಸಾಲಗಾರರು

ಈ ಕೆಳಗಿನ ವರ್ಗದ ಸಾಲಗಾರರು ಅರ್ಹರಾಗುತ್ತಾಾರೆ :

 • ಪರ್ಸನಲ್ ಲೋನ್ ಪಡೆದಿರುವ ವ್ಯಕ್ತಿಗಳು (DBR.No.BP.BC.99/08.13.100/2017-18 ದಿನಾಂಕ ಜನವರಿ 4, 2018ರ ಸುತ್ತೋಲೆ, XBLR ರಿಟರ್ನ್ಸ್‌ - ಅರ್ಬನೈಜೇಶನ್ ಆಫ್‌ ಬ್ಯಾಂಕಿಂಗ್ ಸ್ಟ್ರ್ಯಾಟಿಸ್ಟಿಕ್ಸ್‌ನಲ್ಲಿ ವಿವರಿಸಿರುವಂತೆ) ಸಾಲ ನೀಡುವ ಸಂಸ್ಥೆಗಳು ಮಾರ್ಚ್ 31, 2021ರಂದಿನಂತೆ ರೂ. 25 ಕೋಟಿಗೆ ಮೀರದ ಒಟ್ಟು ಲೆಂಡಿಂಗ್ ಎಕ್ಸ್‌ ಪೋಶರ್ ಹೊಂದಿದ್ದು ಬಿಸ್‌ನೆಸ್‌ನ ಉದ್ದೇಶಕ್ಕಾಗಿ ಲೋನ್ಸ್‌ ಮತ್ತು ಅಡ್ವಾನ್ಸಸ್ ಪಡೆದಿರುವ ವ್ಯಕ್ತಿಗಳು. ಆರ್‌ಬಿಐ ಸರ್ಕ್ಯುಲರ್ RBI/2021-22/46 DOR.STR.REC.20/21.04.048/2021-22, ದಿನಾಂಕ ಜೂನ್ 04, 2021ರ ಅನುಸಾರ ಮಾರ್ಚ್ 31, 2021ರಂದಿನಂತೆ ಪರಿಷ್ಕೃತ ಒಟ್ಟು ಎಕ್ಸ್‌ಪೋಶರ್‌ನ ಮಿತಿಯು ರೂ. 50 ಕೋಟಿಯಾಗಿತ್ತು.
 • ಸಾಲ ನೀಡುವ ಸಂಸ್ಥೆಗಳು ಮಾರ್ಚ್ 31, 2021ರಂದಿನಂತೆ ರೂ. 25 ಕೋಟಿಗೆ ಮೀರದ ಒಟ್ಟು ಲೆಂಡಿಂಗ್ ಎಕ್ಸ್‌ಪೋಶರ್ ಹೊಂದಿದ್ದು ಮೈಕ್ರೊ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್‌ಪ್ರೈಸ್‌ಗಳೆಂದು ವರ್ಗೀಕರಿಸಿದವುಗಳು ಅಲ್ಲದೆ, ರಿಟೇಲ್ ಹಾಗೂ ಹೋಲ್‌ಸೇಲ್ ಟ್ರೇಡ್‌ನಲ್ಲಿ ತೊಡಗಿರುವವುಗಳನ್ನು ಸೇರಿಕೊಂಡ ಸಣ್ಣ ಉದ್ಯಮಗಳು. ಆರ್‌ಬಿಐ ಸರ್ಕ್ಯುಲರ್ RBI/2021-22/46 DOR.STR.REC.20/21.04.048/2021-22, ದಿನಾಂಕ ಜೂನ್ 04, 2021ರ ಅನುಸಾರ ಮಾರ್ಚ್ 31, 2021ರಂದಿನಂತೆ ಪರಿಷ್ಕೃತ ಒಟ್ಟು ಎಕ್ಸ್‌ಪೋಶರ್‌ನ ಮಿತಿ ರೂ. 50 ಕೋಟಿಯಾಗಿತ್ತು.

ಸಾಲ ಪಡೆಯುವವರು ಈ ಕೆಳಗೆ ನೀಡಲಾಗಿರುವ ಎಲ್ಲಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ

 • ಕೋವಿಡ್-19ನ ಕಾರಣದಿಂದಾಗಿ ಸಾಲ ಪಡೆದವರಲ್ಲಿ ಒತ್ತಡವಿರುವುದು
 • ಸಾಲ ಪಡೆದವರ ಅಕೌಂಟನ್ನು ಮಾರ್ಚ್ 31, 2021ರಂದಿನಂತೆ ಸ್ಟ್ಯಾಂಡರ್ಡ್ ಎಂದು ವರ್ಗೀಕರಿಸಿರಬೇಕು.

ಸೂಚನೆ : ಅರ್ಹ ಸಾಲಗಾರರ ಬಗೆಗ ಅಂತಿಮ ನಿರ್ಣಯವು ಮಾನ್ಯತೆ ನೀಡುವ ಪ್ರಾಧಿಕಾರದ ಬಳಿ ಇರುತ್ತದೆ.

ಅರ್ಜಿ ಮಾಡುವ ವಿಧಾನ

 • ನಮ್ಮ ಅಪ್ಲಿಕೇಶನ್ ಫಾರ್ಮ್‌ನತ್ತ ಸಾಗಿರಿ ಮತ್ತು ವಿವರಗಳನ್ನು ತುಂಬಿರಿ
 • ನಿಮ್ಮ ಎಲ್ಲಾ ಆದಾಯ ಹಾಗೂ ಕೆವೈಸಿ ದಸ್ತಾವೇಜುಗಳನ್ನು ಸಲ್ಲಿಸಿರಿ.
 • ದೃಢೀಕರಣಕ್ಕಾಗಿ ಅರ್ಜಿಯ ಪ್ರಕ್ರಿಯೆ ನಡೆಯುವ ವರೆಗೆ ಕಾಯಿರಿ
 • ಅರ್ಹತೆಯ ಮಾನದಂಡಗಳನ್ನು ಎಲ್ಲವೂ ಪೂರೈಸುತ್ತಿದ್ದರೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಸಾಲ ಮಂಜೂರಾಗುತ್ತದೆ
 • ಆನಂತರ, ಸಾಲದ ಮೊಬಲಗನ್ನು ವಿತರಿಸಲಾಗುತ್ತದೆ ಮತ್ತು ಹಣ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಜಮಾ ಆಗುತ್ತದೆ.

ಕೋವಿಡ್-19ನ ಪ್ರಭಾವದಿಂದಾಗಿ ಆದಾಯ ನಷ್ಟದ ಹೊರೆಯನ್ನು ದೃಢೀಕರಿಸಲು ಸತ್ಯಾಪನ ಪ್ರಕ್ರಿಯೆ.

ಪರ್ಸನಲ್ ಲೋನ್‌ಗಾಗಿ

a) ನಿವೃತ್ತಿ ವೇತನ ಅಥವಾ ವೇತನ ಪಡೆಯುವವರು ಎಂದಾದಲ್ಲಿ : ನೌಕರಿ ಕಳಕೊಂಡಿರಬೇಕು ಅಥವಾ ವೇತನದಲ್ಲಿ ಕಡಿತವಾಗಿರಬೇಕು, ಇತ್ಯಾದಿ. ಇದರ ಸತ್ಯಾಪನಕ್ಕಾಗಿ, ಪೀರಾಮಲ್ ಫೈನಾನ್ಸ್‌ ಇತ್ತೀಚಿನ ಬ್ಯಾಂಕ್ ಅಕೌಂಟ್ ವಿವರಗಳನ್ನು ಮತ್ತು ಸ್ಯಾಲರಿ ಸ್ಲಿಪ್‌ನ್ನು ಅದರ ಮೊದಲಿನ ಅವಧಿಯವುಗಳೊಂದಿಗೆ ತಾಳೆ ನೋಡಿ ಪರಿಶೀಸುತ್ತದೆ ಮತ್ತು ಸತ್ಯಾಪನ ಮಾಡಿ ಖಚಿತಪಡಿಸಿಕೊಳ್ಳುತ್ತದೆ.

b) ವೇತನೇತರ ವ್ಯಕ್ತಿಗಳೆಂದಾದಲ್ಲಿ : ಆದಾಯದ ಕ್ರಮದಲ್ಲಿ ವಿಪರೀತ ಕಡಿತವಾಗಿರಬೇಕು. ಇದಕ್ಕಾಾಗಿ ನಾವು ಜಿಎಸ್‌ಟಿ ರಿಟರ್ನ್ಸ್‌ ಮತ್ತು ಬ್ಯಾಂಕ್ ಅಕೌಂಟ್ ವಿವರಗಳನ್ನು ಪರಿಶೀಲಿಸಬಹುದು.

c) ಈ ಎರಡೂ ಸಂದರ್ಭಗಳಲ್ಲಿ, ಕಾಗದ-ಪತ್ರಗಳ ಪುರಾವೆಯ ಕೊರತೆ ಇದ್ದಲ್ಲಿ, ಮಹಾಮಾರಿಯ ಕಾರಣದಿಂದಾದ ಆದಾಯ ನಷ್ಟವನ್ನು ಉದ್ಘೋಷಣೆಯ ಮೇರೆಗೂ ಪರಿಗಣಿಸಲಾಗಬಹುದು.

ಮೇಲ್ಕಾಣಿಸಿದ ಪರಿಸ್ಥಿತಿಗಳಲ್ಲದೆ, ಈ ಕೆಳಗಿನ ಪರಿಸ್ಥಿತಿಗಳೂ ರೆಸೊಲ್ಯೂಶನ್‌ಗಾಗಿ ಅರ್ಹವಾಗುತ್ತವೆ. ಅದಕ್ಕಾಗಿ ನೀವು ದಸ್ತಾವೇಜಿನ ಪುರಾವೆ ಒದಗಿಸಬೇಕಾಗುತ್ತದೆ :

a) ನೀವು ಅಥವಾ ನಿಮ್ಮ ಅವಲಂಬಿಗಳು ಕೋವಿಡ್ ಪೊಸಿಟೀವ್ ಆಗಿದ್ದು, ಅದಕ್ಕಾಾಗಿ ಆಸ್ಪತ್ರೆ ಸೇರಬೇಕಾಗಿದ್ದಲ್ಲಿ ಮತ್ತು ಅದರಿಂದಾಗಿ ನೀವು ಚಿಕಿತ್ಸೆಗಾಗಿ ತುಂಬಾ ಹಣ ಖರ್ಚು ಮಾಡಬೇಕಾದಲ್ಲಿ, ಪರಿಹಾರಕ್ಕಾಗಿ ನೀವು ಅರ್ಹರಾಗುವಿರಿ.

b) ಕೋವಿಡ್‌ನ ಕಾರಣದಿಂದಾಗಿ ಸಾಲ ಪಡೆದವರ (ನಿಮ್ಮ) ಅಥವಾ ಸಹ-ಸಾಲಗಾರರ ಮೃತ್ಯು.

c) ನೌಕರಿ ದೊರಕಲು ತಡವಾದರೆ ಅಥವಾ ಕೋರ್ಸ್ ಮುಕ್ತಾಾಯಗೊಳ್ಳಲು ತಡವಾದಾಗ ಶಿಕ್ಷಣ ಸಾಲದಲ್ಲಿ ಪರಿಹಾರ.

d) ಕೋವಿಡ್-19ನ ಕಾರಣದಿಂದಾಗಿ ಮನೆಯ ಸ್ವಾಧೀನತೆ ದೊರಕುವಲ್ಲಿ ಅಥವಾ ನಿರ್ಮಾಣದಲ್ಲಿ ವಿಳಂಬವಾದರೆ ಹೌಸಿಂಗ್ ಲೋನ್‌ನಲ್ಲಿ ಪರಿಹಾರ.

ಸ್ಮಾಲ್ ಬಿಸ್‌ನೆಸ್ ಲೋನ್‌ಗಳಿಗಾಗಿ

a) ಸಂಸ್ಥೆಯ ಅಥವಾ ಬಿಸ್‌ನೆಸ್ ಮಾಲಿಕರ ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ನ್ನು ಹಿಂದಿನ ಅವಧಿಯವುಗಳೊಂದಿಗೆ ತಾಳೆ ನೋಡಿ ಪರಿಶೀಲಿಸಲಾಗಬಹುದು.

b) ಸಂಸ್ಥೆಯ ಅಥವಾ ಬಿಸ್‌ನೆಸ್ ಮಾಲಿಕರ ಕಳೆದ ಆರು ತಿಂಗಳ ಜಿಎಸ್‌ಟಿ ರಿಟರ್ನ್‌ಸ್‌ನ್ನು ಹಿಂದಿನ ಅವಧಿಯವುಗಳೊಂದಿಗೆ ತಾಳೆ ನೋಡಿ ಪರಿಶೀಲಿಸಲಾಗಬಹುದು.

c) ಮಾರ್ಚ್ 31, 2021ರಂದು ಅಂತ್ಯಗೊಂಡ ಆರ್ಥಿಕ ವರ್ಷದ ಒಂದು ಸೆಲ್‌ಫ್‌ ಅಟೆಸ್ಟೆಡ್ ಪ್ರಾಫಿಟ್ ಆ್ಯಂಡ್ ಲಾಸ್ ಅಕೌಂಟ್ ಸ್ಟೇಟ್‌ಮೆಂಟನ್ನು ಕೂಡ ಪರಿಶೀಲಿಸಿ ದೃಢೀಕರಿಸಬಹುದು.

ಬಡ್ಡಿಯ ದರ : ಈ ಫ್ರೇಮ್‌ವರ್ಕ್‌ನ ಅಂತರ್ಗತ ಲೋನ್ ಅಕೌಂಟ್‌ನ ಬಡ್ಡಿಯ ದರಯ ದರವನ್ನೂ ಪರಿಷ್ಕರಿಸಲಾಗಬಹುದು ಮತ್ತು ಅದು ಸದ್ಯದ ಲೋನ್ ಅಕೌಂಟ್‌ನ ಬಡ್ಡಿಯ ದರಕ್ಕೆ ಅತಿರಿಕ್ತವಾಗಿ 0.50% ಆಗಿರುತ್ತದೆ.

ಈ ಫ್ರೇಮ್‌ವರ್ಕ್‌ನ ಅಂತರ್ಗತ ರೆಸೊಲ್ಯೂಶನ್ ಪ್ಲಾನ್‌ಗಾಗಿ ಅರ್ಹವಲ್ಲದ ಕ್ಯಾಟಗರಿಗಳು/ಕ್ರೆಡಿಟ್ ಫೆಸಿಲಿಟಿಗಳು

 • ಪೀರಾಮಲ್ ಫೈನಾನ್ಸ್‌ನ ನೌಕರ ವರ್ಗ/ಸಿಬ್ಬಂದಿ
 • ಮಾರ್ಚ್ 31, 2021ರಂದಿನಂತೆ ಲೆಂಡಿಂಗ್ ಇನ್‌ಸ್ಟಿಟ್ಯೂಶನ್‌ಗಳಿಂದ ಒಟ್ಟಾಾಗಿ ರೂ. 50 ಕೋಟಿಯ ಒಟ್ಟು ಎಕ್ಸ್‌ಪೋಶರ್ ಹೊಂದಿರುವ ಎಮ್‌ಎಸ್‌ಎಮ್‌ಇ ಸಾಲಗಾರರು.
 • ದುಗ್ದ ಉತ್ಪಾಾದನೆ, ಮೀನುಗಾರಿಕೆ, ಪಶುಪಾಲನೆ, ಕುಕ್ಕುಟ ಪಾಲನೆ, ಜೇನುನೊಣ ಪಾಲನೆ ಮತ್ತು ರೇಷ್ಮೆ ಕೃಷಿ, ಇತ್ಯಾದಿಗಳಂಥ ಸಂಬಧಪಟ್ಟ ಚಟುವಟಿಕೆಗಳ ಸಾಲಗಳನ್ನು ಹೊರತುಪಡಿಸಿ, ದಿನಾಂಕ ಜುಲೈ 7, 2016ರ (ಅದ್ಯತನಗೊಳಿಸಿರುವಂತೆ) ಮಾಸ್ಟರ್ ಡೈರೆಕ್ಷನ್ FIDD.CO.Plan.1/04.09.01/2016-17ನ ಪಾರಾಗ್ರಾಫ್‌ 6.1ರಲ್ಲಿ ಯಾದಿ ಮಾಡಲಾಗಿರುವ ಫಾರ್ಮಾ ಕ್ರೆಡಿಟ್, ಇವು ರೆಸೊಲ್ಯೂಶನ್ ಫ್ರೇಮ್‌ವರ್ಕ್‌ನ ವ್ಯಾಪ್ತಿಯಿಂದ ಹೊರತಾಗಿವೆ. ಮೇಲಿನ ಸಂಗತಿಯನ್ನು ಅನ್ವಯಿಸಿ, ರೆಸೊಲ್ಯೂಶನ್ ಫ್ರೇಮವರ್ಕ್‌ನಲ್ಲಿ ಯಾದಿ ಮಾಡಿರುವ ಯಾವುದೇ ಇತರ ಷರತ್ತುಗಳನ್ನು ಅವು ಪೂರೈಸದೇ ಇದ್ದರೆ ರೈತ ಮನೆತನಗಳಿಗೆ ನೀಡಲಾಗಿರುವ ಸಾಲಗಳು ರೆಸೊಲ್ಯೂಶನ್ ಫ್ರೇಮ್‌ವರ್ಕ್‌ನ ಅಂತರ್ಗತ ರೆಸೊಲ್ಯೂಶನ್‌ಗೆ ಅರ್ಹವಾಗಿರುತ್ತವೆ.
 • ಕೃಷಿಯ ಆನ್-ಲೆಂಡಿಂಗ್‌ಗಾಗಿ ಪ್ರೈಮರಿ ಕ್ರೆಡಿಟ್ ಸೊಸೈಟಿಗಳಿಗೆ (PACS), ಪಾರ್ಮರ್ಸ್ ಸರ್ವಿಸ್ ಸೊಸೈಟೀಸ್ (FSS) ಮತ್ತು ಬೃಹತ್ ಗಾತ್ರದ ಆದಿವಾಸಿ ಮಲ್ಟಿಿ-ಪರ್ಪಸ್ ಸೊಸೈಟಿಗಳಿಗೆ (AAMPS) ನೀಡಲಾದ ಸಾಲಗಳು.
 • ಪೈನಾನ್ಶಿಯಲ್ ಸರ್ವಿಸ್ ಪ್ರೊವೈಡರ್‌ಗಳಿಗೆ ಲೆಂಡಿಂಗ್ ಇನ್‌ಸ್ಟಿಟ್ಯೂಶನ್‌ಗಳ ಎಕ್ಸ್‌ಪೋಶರ್
 • ಕೇಂದ್ರ ಹಾಗೂ ರಾಜ್ಯ ಸರಕಾರಗಳು; ಲೋಕಲ್ ಗವರ್ನ್‌ಮೆಂಡ್ ಸಂಸ್ಥೆಗಳು (ಉದಾ. ಮುನ್ಸಿಪಲ್ ಕಾರ್ಪೊರೇಶನ್‌ಗಳು); ಮತ್ತು ಪಾರ್ಲಿಮೆಂಟ್ ಅಥವಾ ರಾಜ್ಯ ವಿಧಾನ ಮಂಡಲಗಳಿಗೆ ಲೆಂಡಿಂಗ್ ಇನ್‌ಸ್ಟಿಟ್ಯೂಶನ್‌ಗಳ ಎಕ್ಸ್‌ಪೋಶರ್

ಇಲ್ಲಿ ನೀಡಲಾಗಿರುವ ವಿಶೇಷ ವಿನಾಯಿತಿಯನ್ನು ಅನ್ವಯಿಸಿ, ಪೀರಾಮಲ್ ಫೈನಾನ್ಸ್‌ ನೀಡಿರುವ “ಕೋವಿಡ್-19ಗೆ ಸಂಬಂಧಿಸಿದ ಒತ್ತಡಗಳಿಗಾಗಿ ರೆಸೊಲ್ಯೂಶನ್ ಫ್ರೇಮ್‌ವರ್ಕ್ ಮೇಲಿನ ನೀತಿಯ” ಅಂತರ್ಗತ ರೆಸೊಲ್ಯೂಶನ್ ಫ್ರೇಮ್‌ವರ್ಕ್ 1.0ನಂತೆ ಯಾವುದೇ ರೆಸೊಲ್ಯೂಶನನ್ನು ಸಾಲಗಾರರ ಅಕೌಂಟ್ ಪಡೆದಿರಬಾರದು.

ಆದರೂ, ಆಗಾಗಲೇ ಫ್ರೇಮ್‌ವರ್ಕ್ 1.0 (ನೀತಿ) ಅಂತರ್ಗತ ರೆಸೊಲ್ಯೂಶನ್ ಪಡೆದಿರುವ ಅಕೌಂಟ್‌ಸ್‌/ಎಕ್ಸ್‌ಪೋಶರ್ಸ್‌, ವಿಸ್ತರಿತ ಸ್ಥಗಿತತೆ/ಮರುಪಾವತಿಯನ್ನೂ ಸೇರಿದಂತೆ ಪುನರ್ನಿರ್ಮಿತ ಪರಿಸ್ಥಿತಿಗಳ ಪುನರಾವಲೋಕನೆಗಳಿಗೆ ಪರಿಗಣಿಸಲಾಗಬಹುದು. ಇದು ಗರಿಷ್ಠ 24 ತಿಂಗಳ ಅವಧಿಗಾಗಿ ಇರುತ್ತದೆ (ಫ್ರೇಮ್‌ವರ್ಕ್ 1.0 ಅಂತರ್ಗತ ವಾದ ವಿಸ್ತರಿತ ಸ್ಥಗಿತತೆ/ಮರುಪಾವತಿಯನ್ನೂ ಸೇರಿಕೊಂಡು).

ಆರ್‌ಬಿಐ ಸುತ್ತೋಲೆಯ ತಾರೀಖಿನಿಂದ (ಮೇ 5, 2021), ಕೋವಿಡ್-19 ಮಹಾಮಾರಿಯ ಲಸ್ವರೂಪವಾಗಿ ಅಗತ್ಯವಾಗಿರುವ ಯಾವುದೇ ರೆಸೊಲ್ಯೂಶನ್‌ನ್ನು ಈ ಫ್ರೇಮ್‌ವರ್ಕ್‌ನ ಅಂತರ್ಗತ ಮಾತ್ರವೇ ಕೈಗೊಳ್ಳಲಾಗುತ್ತದೆ.

 • ಕೋವಿಡ್-19ನ ಕಾರಣದಿಂದಾಗಿ ಅವರು ಎದುರಿಸಿರುವ ಆರ್ಥಿಕ ಒತ್ತಡದ ವಿವರಗಳ ಬಗ್ಗೆ ಲಿಖಿತ ಕೋರಿಕೆ (ಇಮೇಲ್ ಸೇರಿ) ಅಥವಾ ಕಾಲ್ ಸೆಂಟರ್/ಕಸ್ಟಮರ್ ಕೇರ್ ಮೂಲಕ ನೀಡಿರುವ ಕೋರಿಕೆ ಸಲ್ಲಿಸಿರುವ ಸಾಲಗಾರರನ್ನು ರೆಸೊಲ್ಯೂಶನ್ ಪ್ಲಾನ್‌ಗಾಗಿ ಪರಿಗಣಿಸಲಾಗಬಹುದು.
 • ಪೀರಾಮಲ್ ಫೈನಾನ್ಸ್‌ನಿಂದ ಪರಿಶೀಲನೆಗಾಗಿ ಅಗತ್ಯವಾಗಬಲ್ಲ ಆದಾಯ ಪುರಾವೆ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಬೇರೆ ಯಾವುದೇ ದಸ್ತಾಾವೇಜನ್ನು ಸಲ್ಲಿಸಬೇಕಾಗಿ ಸಾಲ ಪಡೆದವರಲ್ಲಿ ಕೋರಿಕೊಳ್ಳಲಾಗುತ್ತದೆ.
 • ಈ ಫ್ರೇಮ್‌ವರ್ಕ್‌ನ ಅಂತರ್ಗತ ರೆಸೊಲ್ಯೂಶನ್‌ಗಾಗ ಬೇಡಿಕೆಯನ್ನು ಸೆಪೆಟಂಬರ್ 30, 2021ರ ಮೊದಲೇ ಮಾಡಬೇಕಾಗುತ್ತದೆ ಮತ್ತು ಈ ರೀತಿ ರೆಸೊಲ್ಯೂಶನ್ ಪ್ರಕ್ರಿಯೆಯ ಬೇಡಿಕೆಯ ತಾರೀಖಿನಿಂದ 90 ದಿನಗಳ ಒಳಗೆ ಅದಕ್ಕೆಅಂತಿಮ ರೂಪ ನೀಡಿ ಕಾರ್ಯ ರೂಪಕ್ಕೆ ತರಬೇಕಾಗಿದೆ.
 • ಯಾವುದೇ ಸಮಯದಲ್ಲಿ ಮೇಲ್ಕಿಣಿಸಿದ ಯಾವುದೇ ಸಮಯ ಮಿತಿಯ ಉಲ್ಲಂಘನೆ ಜರಗಿದರೆ, ತಕ್ಷಣವೇ ಆ ರೆಸೊಲ್ಯೂಶನ್ ಪ್ರಕ್ರಿಸಂಬಂಧಪಟ್ಟ ಸಾಲಪಡೆಯುವವರಿಗಾಗಿ ಅನ್ವಯಿಸುವುದು ನಿಂತುಬಿಡುತ್ತದೆ. ಮೇಲ್ಕಾಣಿಸಿದ ನಿಗದಿತ ಸಮಯ ಮಿತಿಗಳನ್ನು ಉಲ್ಲಂಘಿಸಿ ಕಾರ್ಯರತಗೊಳಿಸಲಾದ ಯಾವುದೇ ರೆಸೊಲ್ಯೂಶನ್ ಪ್ಲಾನ್ ಪೂರ್ತಿಯಾಗಿ ತಾರೀಖು ಜುಲೈ 7, 2019ರ ಪ್ರುುಡೆನ್ಶಿಯಲ್ ಫ್ರೇಮ್‌ವರ್ಕ್ ಫಾರ್ ರೆಸೊಲ್ಯೂಶನ್ ಆಫ್‌ ಸ್ಟ್ರೆಸ್‌ಡ್‌ ಅಸೆಟ್ಸ್‌ನ ನಿರ್ದೇಶನಗಳ ಅಧೀನವಾಗುತ್ತವೆ ಅಥವಾ ಎಚ್‌ಎಫ್‌ಸಿಗಳಂಥ ನಿರ್ದಿಷ್ಟ ಲೆಂಡಿಂಗ್ ಇನ್‌ಸ್ಟಿಟ್ಯೂಶನ್‌ಗಳ ಸಂಬಂಧಪಟ್ಟ ಕ್ಯಾಾಟಗರಿಗೆ ಮೇಲಿನ ಫ್ರೇಮ್‌ವರ್ಕ್ ಅನ್ವಯಿಸದೆ ಇರುವಲ್ಲಿ ಅವುಗಳು ಮಾಸ್ಟರ್ ಡೈರೆಕ್ಷನ್ - ನಾನ್-ಬ್ಯಾಂಕಿಂಗ್ ಪೈನಾನ್ಶಿಯಲ್ ಕಂಪೆನಿ - ಹೌಸಿಂಗ್ ಫೈನಾನ್ಸ್‌ ಕಂಪೆನಿ (ರಿಜರ್ವ್ ಬ್ಯಾಂಕ್ ಡೈರೆಕ್ಷಕ್ಸ್‌, 2021ಗೆ ಅಧೀನವಾಗಿರುತ್ತವೆ; ಅಂದರೆ ಈ ಫ್ರೇಮ್‌ವರ್ಕ್‌ನ ಅಂತರ್ಗತ ರೆಸೊಲ್ಯೂಶನ್ ಪ್ರಕ್ರಿಯೆಗೆ ಎಂದೂ ಬೇಡಿಕೆ ಮಾಡಿಲ್ಲ ಎಂಬಂತಾಗುತ್ತದೆ.

ಈ ಕೆಳಗಿನ ಎಲ್ಲಾಾ ಷರತ್ತುಗಳನ್ನು ಪೂರೈಸಿದಾಗ ಮಾತ್ರವೇ ರೆಸೊಲ್ಯೂಶನ್ ಪ್ಲಾನ್ ಕಾರ್ಯರತಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ :

 • ಪೀರಾಮಲ್ ಫೈನಾನ್ಸ್‌ ಮತ್ತು ಸಾಲ ಪಡೆಯುವವರೊಂದಿಗೆ ಅವಶ್ಯಕ ಅಗ್ರೀಮೆಂಟ್‌ಗಳನ್ನು ನಿರ್ವಹಿಸುವುದನ್ನೂ ಸೇರಿಕೊಂಡು ಎಲ್ಲಾ ದಸ್ತಾಾವೇಜೀಕರಣ ಮತ್ತು ಅಗತ್ಯವಿದ್ದಲ್ಲಿ ಕೋಲ್ಯಾಟರಲ್ಸ್‌ ಒದಗಿಸುವುದು ಇತ್ಯಾದಿಗಳನ್ನು ಕಂಪೆನಿಯು ಕಾರ್ಯರತಗೊಳಿಸಲಾಗಿರುವ ರೆಸೊಲ್ಯೂಶನ್ ಪ್ಲಾನ್‌ನ ಅನುಸಾರ ಪೂರ್ತಿಗೊಳಿಸುತ್ತದೆ.
 • ಸಾಲಗಳ ಷರತ್ತುಗಳ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು ಪೀರಾಮಲ್ ಫೈನಾನ್ಸ್‌ನ ದಾಖಲೆ ಪುಸ್ತಕಗಳಲ್ಲಿ ಕ್ರಮಬದ್ಧವಾಗಿ ದಾಖಲಾಗುತ್ತವೆ.
 • ಪರಿಷ್ಕೃತ ನಿಯಮಗಳ ಅನುಸಾರ ಸಾಲ ಪಡೆದವರು ಲೆಂಡಿಂಗ್ ಇನ್‌ಸ್ಟಿಟ್ಯೂಶನ್‌ನೊಂದಿಗೆ ತಪ್ಪತಸ್ತನಾಗುವುದಿಲ್ಲ.

ರೆಸೊಲ್ಯೂಶನ್ ಪ್ಲಾನ್ ಪೂರ್ತಿಗೊಂಡ ನಂತರ ಅದಕ್ಕೆ ಗ್ರಾಹಕರ ಸಮ್ಮತಿಯನ್ನು ಪಡೆಯಲಾಗುತ್ತದೆ ಮತ್ತು ಪೀರಾಮಲ್ ಫೈನಾನ್ಸ್‌ ಹಾಗೂ ಸಾಲ ಪಡೆದವರ ನಡುವೆ ಅಗ್ರೀಮೆಂಟ್ ಮಾಡಲಾಗುತ್ತದೆ. ಇದರಲ್ಲಿ ರೆಸೊಲ್ಯೂಶನ್ ಪ್ಲಾನ್‌ನ ನಿಯಮ ಹಾಗೂ ಷರತ್ತುಗಳ ಸಂಪೂರ್ಣ ವಿವರ ಇರುತ್ತದೆ.